Asianet Suvarna News Asianet Suvarna News

'ನಂದ ಲವ್ಸ್ ನಂದಿತ' ನಿರ್ಮಾಪಕನ ಮನೆಯಲ್ಲಿ ಕಳ್ಳತನ ಮಾಡಿದ ಕಾರು ಚಾಲಕ?

ನಕಲಿ ಕೀ ಬಳಸಿ ನಿರ್ಮಾಪಕರ ಮನೆಯಲ್ಲಿ ಕಳ್ಳತನ ಮಾಡಿದ ಕಾರು ಚಾಲಕ. ಇಬ್ಬರೂ ಪೊಲೀಸರ ಬಂಧನದಲ್ಲಿ.
 

Car driver robs Kannada producer Ramesh Kashyap house vcs
Author
Bangalore, First Published Jul 30, 2021, 11:05 AM IST
  • Facebook
  • Twitter
  • Whatsapp

'ಭಾಗ್ಯದ ಬಳೆಗಾರ','ನಂದ ಲವ್ಸ್ ನಂದಿತ','ಮಹಾಕಾಳಿ' ಸೇರಿದಂತೆ ಹಲವು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹಿರಿಯ ನಿರ್ಮಾಪಕ ರಮೇಶ್ ಕಶ್ಯಪ್ ಅವರ ಮನೆಯಲ್ಲಿ ಜುಲೈ 10ರಂದು ಕಳ್ಳತನ ನಡೆದಿದೆ. ಇದನ್ನು ನಡೆಸಿದ್ದು ಮನೆ ಕಾರು ಚಾಲಕನೇ ಎಂದು ತಿಳಿದು ಅಚ್ಚರಿಯಾಗಿದೆ. 

ಹೌದು! ರಮೇಶ್ ಕಶ್ಯಪ್ ಅವರು ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ (32) ಮಾಲೀಕರ ವಿಶ್ವಾಸ ಗಳಿಸಿ ಮನೆ ವಿಷಯ ತಿಳಿದುಕೊಂಡಿದ್ದಾರೆ. ಮನೆ ಬೀಗ ಪಡೆದುಕೊಂಡು ನಕಲಿ ಕೀ ಮಾಡಿಸಿಕೊಂಡಿದ್ದಾರೆ. ಈ ಬೀಗವನ್ನು ಚಂದ್ರಶೇಖರ್ ತಮ್ಮ ಸ್ನೇಹಿತನಿಗೆ ಕೊಟ್ಟು ಮನೆಯಲ್ಲಿ ಕಳ್ಳತನ ಮಾಡಿಸಿದ್ದಾರೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. 

ಫೋನ್ ಕಳುವಾದರೆ ಬ್ಯಾಂಕಿಂಗ್ ವಿವರ, ಆನ್‌ಲೈನ್ ವ್ಯಾಲೆಟ್ ಸುರಕ್ಷತೆಗೆ ಹೀಗೆ ಮಾಡಿ..!

ರಮೇಶ್ ಕಶ್ಯಪ್ ಮನೆಯಲ್ಲಿದ್ದ 3 ಲಕ್ಷ ರೂಪಾಯಿ ಹಣ ಹಾಗೂ 710 ಗ್ರಾಂ ಚಿನ್ನ ದೋಚಿದ್ದಾರೆ. ಆನಂತರ ಅಟಿಕಾ ಗೋಲ್ಡ್ ಸಂಸ್ಥೆಯಲ್ಲಿ ಗಿರವಿ ಇಟ್ಟು ಹಣ ಪಡೆದುಕೊಂಡಿದ್ದಾರೆ. ಸಿಸಿಟಿವಿಯಲ್ಲಿ ಪರಿಶೀಲನೆ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಚಂದ್ರಶೇಖರ್ ಮತ್ತು ಅಭಿಷೇಕ್ ಪೊಲೀಸರ ವಿಚಾರಣೆಯಲ್ಲಿದ್ದಾರೆ.

Follow Us:
Download App:
  • android
  • ios