ಅಚ್ಚರಿ ಘಟನೆ: ಅಪ್ಪು ಸಮಾಧಿ ಪ್ರದಕ್ಷಿಣೆ ಹಾಕಿ ನಿಂತಲ್ಲೇ ನಿಂತ ಬಸವ
ಅಪ್ಪು ಪುಣ್ಯಭೂಮಿಯಲ್ಲಿ ಅಚ್ಚರಿ ಘಟನೆ ನಡೆದಿದೆ. ಏನ್ ಮಾಡಿದರೂ ನಿಂತಲ್ಲೇ ನಿಂತುಕೊಂಡ ಬಸವ....
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಹಲೋಕದಲ್ಲಿದ್ದರೂ ಅವರ ಸಮಾಜ ಸೇವೆ ಮತ್ತು ಸಿನಿಮಾಗಳ ಮೂಲಕ ನಮಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಇನ್ನು ನಾಲ್ಕು ತಿಂಗಳು ಕಳೆದರು ಅಪ್ಪು ಇಲ್ಲದ ಎರಡು ವರ್ಷ ಕಳೆಯುತ್ತದೆ. ಅಪ್ಪು ಮಾತು, ನುಡಿ ಹಾಗೂ ಸಮಾಜ ಸೇವೆ ಕೆಲಸಗಳನ್ನು ಈಗ ಅಭಿಮಾನಿಗಳಲ್ಲಿ ಹಾಗೂ ಆಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಮೂಲಕ ಕಾಣಬಹುದು. ವೀಕೆಂಡ್ ಬಂದರೆ ಸಾಕು ಪುಣ್ಯ ಭೂಮಿ ಬಳಿ ಸಾವಿರಾರು ಅಭಿಮಾನಿಗಳು ಇರುತ್ತಾರೆ, ಸಂಗೀತ ಕಾರ್ಯಕ್ರಮ ಮತ್ತು ಅನ್ನದಾನ ನಡೆಯುತ್ತದೆ. ಆ ರಸ್ತೆ ನೋಡಿದರೆ ಹಬ್ಬದ ರೀತಿ ಇರುತ್ತದೆ.
ಹೀಗೆ ಹಳ್ಳಿಯಿಂದ ಒರ್ವ ವ್ಯಕ್ತಿ ತಮ್ಮ ಬಸವ ಕರೆದುಕೊಂಡು ಪುನೀತ್ ರಾಜ್‌ಕುಮಾರ್ ಸಮಾಧಿ ಬಳಿ ಪೂಜೆ ಮಾಡಿದ್ದಾರೆ. ಪುಣ್ಯ ಭೂಮಿ ಪ್ರದಕ್ಷಿಣೆ ಹಾಕಿದ ಬಸವ ಅಪ್ಪು ಫೋಟೋ ಮತ್ತು ಸಮಾಧಿ ನೋಡಿಕೊಂಡು ಅಲ್ಲೇ ನಿಂತು ಬಿಡುತ್ತದೆ. ಮಾಲೀಕ ಮುಂದೆ ಕರೆಯಲು ಎಷ್ಟೇ ಪ್ರಯತ್ನ ಪಟ್ಟರು ವಿಫಲವಾಗಿದೆ. ಅಲ್ಲಿದ್ದವರು ಬಸವನಿಗೆ ಪೂಜೆ ಸಲ್ಲಿಗೆ ನಮಸ್ಕಾರ ಮಾಡಿಕೊಂಡರು. ನಮ್ಮ ಬಾಸ್ ಇದ್ದಾರೆ ಅಂತ ಮತ್ತೊಮ್ಮೆ ಸಾಬೀತಾಗಿದೆ ಎಂದು ಅಭಿಮಾನಿಗಳು ಜೈ ಕಾರ ಕೂಗಿದ್ದಾರೆ.
ರಸ್ತೆಗೆ ಅಪ್ಪು ಹೆಸರು:
ಬೆಂಗಳೂರಿನ ಮೈಸೂರು ರಸ್ತೆಯಿಂದ ವೆಗಾಸಿಟಿ ಮಾಲ್ ಜಂಕ್ಷನ್ವರೆಗಿನ 12 ಕಿ.ಮೀ ರಸ್ತೆಗೆ ಪುನೀತ್ ರಾಜ್‌ಕುಮಾರ್ ಅವರ ಹೆಸರು ಇಡಲಾಗಿದೆ.ಪದ್ಮನಾಭ ನಗರದಲ್ಲಿ ನಡೆದ ಪುನೀತ್ ರಾಜ್ ಕುಮಾರ್ ರಸ್ತೆ ಉದ್ಘಾಟನೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಹಲವು ಮನರಂಜನಾ ಕಾರ್ಯಗಳು ನಡೆದವು. ಸಮಾರಂಭದಲ್ಲಿ ಪುನೀತ್ ರಾಜ್‌ಕುಮಾರ್ ಕುಟುಂಬ, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.
ಅಭಿ ರಿಲೀಸ್ ಆಗಿ 20 ವರ್ಷ; ಅಪ್ಪು ಜೊತೆಗಿರುವ ಹಳೆ ಫೋಟೋ ಹಂಚಿಕೊಂಡ ರಮ್ಯಾ!
ಪಠ್ಯ ಪುಸ್ತಕದಲ್ಲಿ ಪುನೀತ್ :
ಕರ್ನಾಟಕದ ರತ್ನ ಪುನೀತ್ ರಾಜ್‌ಕುಮಾರ್ ಕುರಿತ ಪಾಠ ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯ ಪುಸ್ತಕದಲ್ಲಿ ಸೇರ್ಪಡೆಯಾಗಿದೆ. ಬಿಕಾಂ ಪದವಿ ಮೂರನೇ ಸೆಮಿಸ್ಟರ್‌ನ ಕನ್ನಡ ಭಾಷಾ ಪಠ್ಯದಲ್ಲಿ ಪುನೀತ್ ಅವರ ಜೀವನದ ಆಯ್ದಭಾಗವನ್ನು ಪಠ್ಯಕ್ಕೆ ಅಳವಡಿಸಿಕೊಳ್ಳಲಾಗಿದೆ.ಡಾ.ಶರಣು ಹುಲ್ಲೂರು ಬರೆದ, ಸಾವಣ್ಣ ಪ್ರಕಾಶನ ಹೊರ ತಂದಿರುವ ‘ನೀನೇ ರಾಜಕುಮಾರ್’ ಕೃತಿಯ ‘ಲೋಹಿತ್ ಎಂಬ ಮರಿಮುದ್ದ’ ಭಾಗವನ್ನು ಪಠ್ಯದಲ್ಲಿ ಬಳಸಿಕೊಳ್ಳಲಾಗಿದೆ.
ನೇತ್ರ, ಅಂಗದಾನದಲ್ಲಿ ಭಾರೀ ಹೆಚ್ಚಳ:
ನಟ ಪುನೀತ್ ರಾಜಕುಮಾರ್ ನೇತ್ರದಾನ ಮಾಡಿ ನಾಲ್ಕು ಜನರ ಬಾಳಿಗೆ ಬೆಳಕಾಗಿದ್ದರು. ಅವರಿಂದ ಸ್ಫೂರ್ತಿ ಪಡೆದು ಕಳೆದ ಒಂದು ವರ್ಷದಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಡಾ.ರಾಜಕುಮಾರ್ ನೇತ್ರದಾನ ಕೇಂದ್ರದಲ್ಲಿ ನೇತ್ರದಾನ ಮಾಡಿದ್ದು, ಇದರಿಂದ 1650 ಅಂಧರ ಬಾಳಿಗೆ ಬೆಳಕು ಸಿಕ್ಕಿದೆ. ಇನ್ನೊಂದೆಡೆ ನೇತ್ರದಾನದಿಂದ ಪ್ರೇರೇಪಣೆಗೊಂಡ ಪುನೀತ್ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಅಂಗಾಂಗ ದಾನ ಕೂಡ ಮಾಡಿದ್ದಾರೆ. ರಾಜ್ಯ ಸರ್ಕಾರದ ಅಧಿಕೃತ ಅಂಗಾಂಗ ಕಸಿ ನಿರ್ವಹಣಾ ಸಂಸ್ಥೆಯಾದ ಜೀವಸಾರ್ಥಕತೆಯಲ್ಲಿ 2021ರ ನವೆಂಬರ್‌ಗೂ ಮುನ್ನ ಮೂರು ಸಾವಿರದ ಆಸುಪಾಸಿನಲ್ಲಿದ್ದ ನೋಂದಣಿದಾರರ ಸಂಖ್ಯೆ ಸದ್ಯ ಬರೋಬ್ಬರಿ 33 ಸಾವಿರಕ್ಕೆ ಹೆಚ್ಚಿದೆ. ಒಂದು ವರ್ಷದಲ್ಲಿ 10 ಪಟ್ಟು ಅಧಿಕ ಮಂದಿ ನೋಂದಣಿಯಾಗಿದ್ದಾರೆ.