ದೂರದಿಂದ ಅಭಿಮಾನಿಗಳನ್ನು ಮಾತನಾಡಿಸುತ್ತಿರಲಿಲ್ಲ ಹತ್ತಿರ ಹೋಗಿ ಪ್ರೀತಿ ಕೊಡುತ್ತಿದ್ದರು: ಅಪ್ಪು ಬಗ್ಗೆ ಬಾಡಿ ಗಾರ್ಡ್ ಚಲಪತಿ
ಅಪ್ಪು ಬಾಸ್ ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಯಾವ ಊರಿಗೆ ಹೋದರೂ ಅಲ್ಲಿನ ಆಹಾರ ರುಚಿ ನೋಡಿ ಎಂಜಾಯ್ ಮಾಡುತ್ತಾರಂತೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನ ಅವರ ಬಾಡಿಗಾರ್ಡ್ ಚಲಪತಿ ಫ್ಯಾಮಿಲಿ ಜೊತೆ ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ವೇಳೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಿನಿಮಾ ಸೆಟ್ ಅಥವಾ ಎಲ್ಲೇ ಹೋದರೂ ಅಭಿಮಾನಿಗಳು ಸಿಕ್ಕರೆ ಆದಷ್ಟು ಹ್ಯಾಂಡ್ ಶೇಕ್ ಮಾಡಲು ಪ್ರಯತ್ನ ಪಡುತ್ತಾರೆ. ಸಿಕ್ಕಾಪಟ್ಟೆ ಜನರು ಬಂದಾಗ ಅಲ್ಲಿ ಕೆಲವರಿಗೆ ಮಿಸ್ ಆಗುತ್ತಿತ್ತು. ಬ್ಯಾರಿಕೇಟರ್ ಹಾಕಿ ಕ್ಯೂ ರೀತಿಯಲ್ಲಿ ಬರುವ ಪ್ರತಿಯೊಬ್ಬರನ್ನು ಭೇಟಿ ಮಾಡಲು ಇಷ್ಟ ಪಡುತ್ತಾರೆ ಏಕೆಂದರೆ ಬೇರೆ ಬೇರೆ ಊರುಗಳಿಂದ ನನಗೆಂದು ಸಮಯ ಮಾಡಿಕೊಂಡು ಬರುತ್ತಾರೆ ಅಂತ ಎನ್ನುತ್ತಿದ್ದರು.
ಯಾರಿಗೂ ತೊಂದರೆ ಮಾಡಬಾರದು ಅನ್ನೋದು ಅವರ ಉದ್ದೇಶ ನಮಗೆ ಮತ್ತು ಪೊಲೀಸರಿಗೆ ಹೇಳುತ್ತಾರೆ ಹುಷಾರ್ ಆಗಿ ನೋಡಿಕೊಳ್ಳಿ ಅಭಿಮಾನಿಗಳನ್ನು ಎಂದು. ನನಗೆ ತಿಳಿದಿರುವ ಪ್ರಕಾರ ಪ್ರತಿಯೊಬ್ಬರನ್ನು ಭೇಟಿ ಮಾಡುತ್ತಿದ್ದರು ಅರ್ಧ ಗಂಟೆ ರೆಸ್ಟ್ ಕೂಡ ಮಾಡುತ್ತಿರಲಿಲ್ಲ.
ಕಂಟ್ರೋಲ್ ಮಾಡಲು ಆಗದಷ್ಟು ಜನರು ಇರುತ್ತಿದ್ದರು ಬಾಸ್‌ಗೆ ತೊಂದರೆ ಆಗಬಾರದು ಎನ್ನುವುದು ನಮ್ಮ ಉದ್ದೇಶ ಆದರೆ ಅಭಿಮಾನಿಗಳು ಪ್ರೀತಿ ಕಂಟ್ರೋಲ್ ಮಾಡಲಾಗದೆ ಅಪ್ಪು ಬಾಸ್‌ನ ಬಿಗಿಯಾಗಿ ತಬ್ಬಿಕೊಳ್ಳುತ್ತಿದ್ದರು. ಸಣ್ಣ ಪುಟ್ಟ ಗಾಯ ಆಗುತ್ತಿತ್ತು.
ದೂರದಲ್ಲಿ ನಿಂತುಕೊಂಡು ಯಾರನ್ನೂ ಮಾತನಾಡಿಸುತ್ತಿರಲಿಲ್ಲ ಜನರ ನಡುವೆ ಅವರೇ ಹೋಗಿ ಮಾತನಾಡುತ್ತಾರೆ. ಕೊರೋನಾ ಸಮಯದಲ್ಲಿ ಬರ್ತಡೇ ಮಾಡಿಕೊಳ್ಳಲಿಲ್ಲ ಆಗ ಅಭಿಮಾನಿಗಳು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು. ಹುಬ್ಬಳ್ಳಿ ಅಥವಾ ಎಲ್ಲಾದರೂ ಶೂಟಿಂಗ್ ಹೋಗುವ ಪ್ಲ್ಯಾನ್ ಮಾಡಿದಾಗ ನಾನು ಅಲ್ಲಿರುವ ಮುಖ್ಯ ಗುಂಪುಗಳಿಗೆ ಕರೆ ಮಾಡಿ ತಿಳಿಸುತ್ತಿದ್ದೆ ಬಾಸ್ ಬರ್ತಿದ್ದಾರೆ ಎಂದು.
ಅಲ್ಲಿದಷ್ಟು ದಿನವೂ ಅಭಿಮಾನಿಗಳನ್ನು ಭೇಟಿ ಮಾಡಿ ಫೋಟೋ ಕೊಟ್ಟು ಮಾತನಾಡಿಸುತ್ತಿದ್ದರು. ಎಷ್ಟೇ ಬ್ಯುಸಿ ಇದ್ದರೂ ಸಮಯ ಕೊಡುತ್ತಿದ್ದರು ಇದರಿಂದ ಅಪ್ಪು ಅವರ ಮೇಲೆ ಪ್ರೀತಿ ಹೆಚ್ಚಾಗುತ್ತಿತ್ತು. ಕರ್ನಾಟಕದ ಪ್ರತಿಯೊಂದು ಭಾಗದಲ್ಲೂ ಚಿತ್ರೀಕರಣ ಮಾಡಬೇಕು ಅಲ್ಲಿನ ಜನರನ್ನು ಮಾತನಾಡಿಸಿ ಪರಿಚಯ ಮಾಡಿಕೊಳ್ಳಬೇಕು ಎನ್ನುವುದು ಅಪ್ಪು ಬಾಸ್ ಆಸೆ ಆಗಿತ್ತು.
ಅಪ್ಪಾಜೀ ಅವರ ಬಗ್ಗೆ ಅಭಿಮಾನಿಗಳು ಹೇಳಿದಾಗ ಬಾಸ್ ಖುಷಿಯಿಂದ ಕೇಳಿಸಿಕೊಳ್ಳುತ್ತಿದ್ದರು. ಯಾವ ಜಾಗಕ್ಕೆ ಭೇಟಿ ಕೊಟ್ಟರೂ ಅಲ್ಲಿನ ಪ್ರಮುಖ ಜಾಗಕ್ಕೆ ಭೇಟಿ ನೀಡಿ ಅಲ್ಲಿರುವ ಆಹಾರವನ್ನು ರುಚಿ ನೋಡುತ್ತಿದ್ದರು. ಹುಟ್ಟುಹಬ್ಬವನ್ನು ಬೆಂಗಳೂರಿನಲ್ಲಿ ಯಾಕೆ ಮಾಡಿಕೊಳ್ಳುತ್ತಿದ್ದರು ಅಂದ್ರೆ ಬೇರೆ ಬೇರೆ ಜಾಗಗಳಿಂದ ಎಲ್ಲರೂ ಇಲ್ಲಿಗೆ ಸುಲಭವಾಗಿ ಬರಬಹುದು ಎಂದು.