Asianet Suvarna News Asianet Suvarna News

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮನೆಗೆ ಜೆನಿಲಿಯಾ ದಂಪತಿ ಭೇಟಿ

ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮನೆಗೆ ಬಾಲಿವುಡ್‌ ಸ್ಟಾರ್ಸ್‌ ಭೇಟಿ ನೀಡಿದ್ದಾರೆ. ಹೌದು! ನಾಗರಭಾವಿಯಲ್ಲಿರುವ ಶಿವರಾಜ್‌ಕುಮಾರ್ ನಿವಾಸಕ್ಕೆ ನಟಿ ಜೆನಿಲಿಯಾ ಹಾಗು ರಿತೇಶ್ ದೇಶ್‌ಮುಖ್‌ ಭೇಟಿ ಕೊಟ್ಟಿದ್ದಾರೆ.

bollywood stars genelia d souza riteish deshmukh meets shivarajkumar in bengaluru gvd
Author
First Published Sep 3, 2022, 11:59 PM IST

ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮನೆಗೆ ಬಾಲಿವುಡ್‌ ಸ್ಟಾರ್ಸ್‌ ಭೇಟಿ ನೀಡಿದ್ದಾರೆ. ಹೌದು! ನಾಗರಭಾವಿಯಲ್ಲಿರುವ ಶಿವರಾಜ್‌ಕುಮಾರ್ ನಿವಾಸಕ್ಕೆ ನಟಿ ಜೆನಿಲಿಯಾ ಹಾಗು ರಿತೇಶ್ ದೇಶ್‌ಮುಖ್‌ ಭೇಟಿ ಕೊಟ್ಟಿದ್ದಾರೆ. ನಟಿ ಜೆನಿಲಿಯಾ ಜನಾರ್ಧನ್ ರೆಡ್ಡಿ ಮಗ ಕಿರೀಟಿ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಹಿನ್ನಲೆಯಲ್ಲಿ ಭೇಟಿ ಕೊಟ್ಟಿದ್ದಾರೆ. ಸದ್ಯ ಕಿರೀಟಿ ಸಿನಿಮಾದ ಟೈಟಲನ್ನು ಶಿವರಾಜ್‌ಕುಮಾರ್ ಲಾಂಚ್‌ ಮಾಡುತ್ತಿದ್ದು, ಹೀಗಾಗಿ ಶಿವಣ್ಣರನ್ನು ಚಿತ್ರತಂಡ ಭೇಟಿ ಮಾಡಿದ್ದಾರೆ. ಇನ್ನು ನಟಿ ಜೆನಿಲಿಯಾ, ಶಿವಣ್ಣ ಅವರ ಜೊತೆ ಸತ್ಯ ಇಸ್ ಇನ್‌ ಲವ್ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು.

ಕಿರೀಟಿ ನಟಿಸುತ್ತಿರುವ ಚಿತ್ರದ ಶೂಟಿಂಗ್ ಬೆಂಗಳೂರಿನ ನಾಗವಾರದ ಮ್ಯಾನತಾ ಟೆಕ್ ಪಾರ್ಕ್‌ನಲ್ಲಿ ಭರದಿಂದ ಸಾಗುತ್ತಿದೆ. ಈ ಶೂಟಿಂಗ್ ಸೆಟ್‌ಗೆ ದೊಡ್ಮನೆ ದೊರೆ ಶಿವಣ್ಣ ಸರ್ಪ್ರೈಸ್ ಆಗಿ ವಿಸಿಟ್ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಕಿರೀಟಿ ಹಾಗೂ ಜೆನಿಲಿಯಾ ಅವರ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಅಲ್ಲಿಯೇ ಕೆಲ ಸಮಯ ಕಳೆದ ಶಿವಣ್ಣ ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಇಡೀ ತಂಡ ಹಾಗೂ ಜನಾರ್ದನ ರೆಡ್ಡಿ ಕೂಡ ಉಪಸ್ಥಿತರಿದ್ದರು. ಇನ್ನು ಹೆಸರಿಡದ ಕಿರೀಟಿ ಚೊಚ್ಚಲ ಸಿನಿಮಾದ ಟೈಟಲ್ ಅನಾವರಣಕ್ಕೂ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ 29ಕ್ಕೆ ಕಿರೀಟಿ ಹುಟ್ಟುಹಬ್ಬವಿದೆ. ಈ ದಿನದಂದೂ ಟೈಟಲ್ ರಿವೀಲ್ ವಿಡಿಯೋ ಝಲಕ್ ರಿಲೀಸ್ ಮಾಡಲು ಯೋಜನೆ ಹಾಕಿಕೊಂಡಿದೆ. ಸದ್ಯ ಬಹುತೇಕ ಭಾಗ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪ್ರೊಡಕ್ಷನ್ ಕೆಲಸಗಳು ಕೂಡ ಭರದಿಂದ ನಡೆಯುತ್ತಿವೆ. 

ಟಗರಿನಂತೆ ಜಂಪ್ ಮಾಡಿ ಕಾರ್ ಮೇಲೆ ಕುಳಿತ ಶಿವಣ್ಣ; ವಿಡಿಯೋ ವೈರಲ್

ಸದ್ಯ ಕಿರೀಟಿಗೆ ಜೋಡಿಯಾಗಿ ಈ ಚಿತ್ರದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಜೆನಿಲಿಯಾ ಅವರಿಗೆ ಇದು ಕಮ್​ಬ್ಯಾಕ್​ ಸಿನಿಮಾ. ಹಾಗಾಗಿ ಅವರ ಪಾತ್ರದ ಬಗ್ಗೆ ಅಭಿಮಾನಿಗಳು ಕುತೂಹಲ ಇಟ್ಟುಕೊಂಡಿದ್ದಾರೆ. ಕಂಪನಿಯೊಂದರ ಸಿಇಒ ಆಗಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲವೆಡೆ ವರದಿ ಆಗಿದೆ. ಕಥೆಯಲ್ಲಿ ಈ ಪಾತ್ರ ತುಂಬ ಮುಖ್ಯವಾಗಿರಲಿದೆ ಎನ್ನಲಾಗಿದೆ. ಆದರೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಪಾತ್ರ ಯಾವ ರೀತಿ ಮೂಡಿಬರಬಹುದು ಎಂಬುದನ್ನು ತಿಳಿಯಲು ಅಭಿಮಾನಿಗಳು​ ಕಾದಿದ್ದಾರೆ. ವಿಶೇಷವೆಂದರೆ ಈ ಸಿನಿಮಾದ ಮೂಲಕ 'ರಣಧೀರ' ಜೋಡಿ ಮತ್ತೆ ಒಂದಾಗುತ್ತಿದೆ. ನಟ ರವಿಚಂದ್ರನ್ ಹಾಗೂ ಖುಷ್ಬು ಕಿರೀಟಿಯ ಈ ಸಿನಿಮಾ ಮೂಲಕ ಒಟ್ಟಿಗೆ ನಟಿಸುತ್ತಿದ್ದಾರೆ. ರವಿಚಂದ್ರನ್​ ಹಾಗೂ ಖುಷ್ಬು​ ಸಖತ್​ ಹಿಟ್​ ಪೇರ್​ ಎನಿಸಿಕೊಂಡಿತ್ತು. ಇದೀಗ ಕಿರೀಟಿಯ ಹೊಸ ಸಿನಿಮಾದಲ್ಲಿ ರವಿಚಂದ್ರನ್ ಹಾಗೂ ಖುಷ್ಬು ಪತಿ-ಪತ್ನಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತೆರೆಮೇಲೆ ಅಣ್ಣಾವ್ರ ಮೊಮ್ಮಗ ಧೀರೆನ್ ದರ್ಬಾರ್; ಸಿನಿಮಾ ನೋಡಿ ಶಿವಣ್ಣ ಹೇಳಿದ್ದೇನು?

ಇನ್ನು ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ವಾರಾಹಿ ಚಲನ ಚಿತ್ರಂ’ ಮೂಲಕ ಅದ್ದೂರಿ ಬಜೆಟ್​ನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದು. ‘ಮಯಾಬಜಾರ್’ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅವರ ಜೊತೆಗೆ ಘಟಾನುಘಟಿ ತಂತ್ರಜ್ಞರು ಈ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ‘ಪುಷ್ಪ’ ಸಿನಿಮಾ ಮೂಲಕ ಸೆನ್ಸೇಷನ್​ ಕ್ರಿಯೇಟ್​ ಮಾಡಿರುವ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್​ ಅವರು ಕಿರೀಟಿಯ ಈ ಚೊಚ್ಚಲ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬಾಹುಬಲಿ ಸಿನಿಮಾದ ಕಣ್ಣು ಕೆ.ಕೆ. ಸೇಂಥಿಲ್​ ಕುಮಾರ್​ ಐಎಸ್​ಸಿ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ರವೀಂದರ್ ಕಲಾ ನಿರ್ದೇಶನ, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಆಕ್ಷನ್ ಇದೆ. 

Follow Us:
Download App:
  • android
  • ios