ಇಂದು ನನ್ನ ಮಗಳ ಮೊದಲ ಶಾಲೆಯ ದಿನ. ಅವಳು ಇಲ್ಲದ ನನ್ನ ಮನೆಯನ್ನು ಊಹಿಸಿಕೊಳ್ಳಲು ನನ್ನಿಂದ ಸಾಧ್ಯಾವಾಗುತ್ತಿಲ್ಲ ಎಂದು ಪ್ರಶಾಂತ್​ ಪೋಸ್ಟ್ ಮಾಡಿದ್ದು, ಮಕ್ಕಳ ಜೊತೆಗಿನ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. 

ಸ್ಯಾಂಡಲ್‌ವುಡ್‌ನ (Sandalwood) ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಚಿತ್ರ 'ಕೆಜಿಎಫ್ 2' (KGF 2) ಚಿತ್ರಕ್ಕಾಗಿ ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾದು ಕುಳಿತಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ (Prashanth Neel) ಆಕ್ಷನ್ ಕಟ್ ಹೇಳಿದ್ದಾರೆ. ವಿಶೇಷವಾಗಿ ಪ್ರಶಾಂತ್​ ನೀಲ್​ ಸಿನಿಮಾ ವಿಚಾರಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ ಅಷ್ಟೇ ಪ್ರಾಮುಖ್ಯತೆ ತಮ್ಮ ಫ್ಯಾಮಿಲಿಗೆ ನೀಡುತ್ತಾರೆ. ಚಿತ್ರೀಕರಣದಿಂದ ಸ್ವಲ್ಪ ವಿರಾಮ ಸಿಕ್ಕಿದರೆ ಸಾಕು ಪ್ರಶಾಂತ್​​ ತಮ್ಮ ಫ್ಯಾಮಿಲಿ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲೂ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ.

ಇದೀಗ ಪ್ರಶಾಂತ್ ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಹೊಸ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, 'ಇಂದು ನನ್ನ ಮಗಳ ಮೊದಲ ಶಾಲೆಯ ದಿನ. ಅವಳು ಇಲ್ಲದ ನನ್ನ ಮನೆಯನ್ನು ಊಹಿಸಿಕೊಳ್ಳಲು ನನ್ನಿಂದ ಸಾಧ್ಯಾವಾಗುತ್ತಿಲ್ಲ' ಎಂದು ಪ್ರಶಾಂತ್​ ಪೋಸ್ಟ್ ಮಾಡಿದ್ದು, ಮಕ್ಕಳ ಜೊತೆಗಿನ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಈ ಪೋಸ್ಟ್‌ಗೆ ಬಾಲಿವುಡ್‌ ನಟಿ ರವೀನಾ ಟಂಡನ್​ (Raveena Tandon) ಪ್ರತಿಕ್ರಿಯಿಸಿದ್ದು, 'ನನ್ನ ಮಗಳು ರಾಶಾಳನ್ನು ಮೊದಲ ದಿನ ಶಾಲೆಗೆ ಕಳುಹಿಸಿದ್ದಾಗ ನನಗೂ ಹೀಗೆ ಆಗಿತ್ತು. ನಿಮ್ಮ ಮಗಳಿಗೆ ಒಳ್ಳೆಯದಾಗಲಿ. ನನ್ನ ಹಾಗೂ ಅನಿಲ್​ ಕಡೆಯಿಂದ ಅವಳಿಗೆ ಶುಭಾಶಯವನ್ನು ತಿಳಿಸುತ್ತೇನೆ' ಎಂದು ರವೀನಾ ಕಾಮೆಂಟಿಸಿದ್ದಾರೆ.

'ಸಲಾರ್' ಕಮಾಂಡರ್‌ಗೆ ಶುಭಾಶಯ ತಿಳಿಸಿದ ಪ್ರಶಾಂತ್ ನೀಲ್

ಇತ್ತೀಚೆಗಷ್ಟೇ ಪ್ರಶಾಂತ್ ನೀಲ್, ರವೀನಾ ಟಂಡನ್ ಅವರ ಹುಟ್ಟುಹಬ್ಬಕ್ಕೆ 'ಕೆಜಿಎಫ್' ಚಿತ್ರದ ಹೊಸ ಪೋಸ್ಟರನ್ನು ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು. ಈ ಚಿತ್ರದಲ್ಲಿ ರವೀನಾ ಟಂಡನ್, ಪ್ರಧಾನಿ ರಮೀಕಾ ಸೇನ್ (Ramika Sen) ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್, ಮೊದಲಿಗೆ ನಟಿ ರವೀನಾ ಟಂಡನ್​ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದು, 'ರಮಿಕಾ ಸೇನ್​ ಪಾತ್ರವನ್ನು ನೀವು ಮಾಡಿರುವ ರೀತಿ ಮತ್ತಾರೂ ಮಾಡಲಾರರು. ನಾನು ಕೆಲಸ ಮಾಡಿದ ಅತ್ಯಂತ ಮೋಜಿನ ಮತ್ತು ಬೆದರಿಕೆಯ ಪ್ರಧಾನಿ ನೀವು' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.

ಕನ್ನಡದಲ್ಲಿ 'ಉಪೇಂದ್ರ' (Upendra) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ ರವೀನಾ ಟಂಡನ್‌, ಎರಡು ದಶಕದ ಬಳಿಕ 'ಕೆಜಿಎಫ್ 2' ಚಿತ್ರದ ರಮೀಕಾ ಸೇನ್‌ ಪಾತ್ರದಲ್ಲಿ ಮತ್ತೆ ಕನ್ನಡ ಸಿನಿಪ್ರಿಯರ ಮುಂದೆ ಬರುತ್ತಿದ್ದಾರೆ. 'ಕೆಜಿಎಫ್ 2'​ ಸಿನಿಮಾ ಮುಂದಿನ ವರ್ಷ ಏಪ್ರಿಲ್​ 14ಕ್ಕೆ ವಿಶ್ವದಾದ್ಯಾಂತ‌ ತೆರೆ ಕಾಣಲಿದ್ದು, ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ (Hombale Films) ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು (Vijay Kiragandur) ನಿರ್ಮಿಸಿದ್ದಾರೆ. ರವಿ ಬಸ್ರೂರ್ ಸಂಗಿತ ಸಂಯೋಜನೆ ಚಿತ್ರಕ್ಕಿದ್ದು, ಪ್ರಕಾಶ್ ರಾಜ್, ತೆಲುಗು ನಟ ರಾವ್ ರಮೇಶ್ ಮತ್ತು ಬಾಲಿವುಡ್ ನಟ ಸಂಜಯ್ ದತ್ ಚಿತ್ರದ ಆಕರ್ಷಣೆಯಾಗಿದ್ದಾರೆ. ಅಧೀರನಾಗಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ.

ರವೀನಾ ಟಂಡನ್‌ಗೆ ವಿಶೇಷವಾಗಿ ವಿಶ್ ಮಾಡಿದ ಪ್ರಶಾಂತ್ ನೀಲ್

ಇನ್ನು ಪ್ರಶಾಂತ್ ನೀಲ್, ಟಾಲಿವುಡ್‌ ರೆಬೆಲ್ ಸ್ಟಾರ್ ನಟ ಪ್ರಭಾಸ್‌ಗೆ (Prabhas) 'ಸಲಾರ್' (Salaar) ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಲ್ಲದೇ ಪ್ರಭಾಸ್ ಜನ್ಮದಿನಕ್ಕೆ ಪ್ರಶಾಂತ್ ಚಿತ್ರದ ಹೊಸ ಪೋಸ್ಟರನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, 'ನಮ್ಮ ಕಮಾಂಡರ್ ಪ್ರಭಾಸ್ ಅವರಿಗೆ ಸಲಾರ್ Territoryಯಿಂದ ಹುಟ್ಟುಹಬ್ಬದ ಶುಭಾಶಯಗಳು' ಎಂದು ಟ್ವೀಟ್ (Tweet) ಮಾಡಿದ್ದರು. ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಯ ವಿಜಯ್​ ಕಿರಗಂದೂರು (Vijay Kiragandur) ಅವರು 'ಸಲಾರ್' ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಪ್ರಭಾಸ್‌ಗೆ ಶ್ರುತಿ ಹಾಸನ್ (Shruti Haasan) ಜೋಡಿಯಾಗಿದ್ದು, ಜಗಪತಿ ಬಾಬು (Jagapati Babu) ಈ ಚಿತ್ರದಲ್ಲಿ ಖಡಕ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. 

View post on Instagram