Asianet Suvarna News Asianet Suvarna News

ಕೋವಿಡ್‌ ಕಾಣಿಕೆ: ಇನ್ನು ಬಿಗ್‌ ಬಜೆಟ್‌ ಸಿನಿಮಾ ನಿರ್ಮಾಣ ಕಷ್ಟ

ಕೇಂದ್ರ ಸರ್ಕಾರ ಚಿತ್ರಪ್ರದರ್ಶನಕ್ಕೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅವುಗಳನ್ನು ಪಾಲಿಸಿ ಚಿತ್ರಮಂದಿರ ನಡೆಸುವುದು ಸಾಧ್ಯವೇ ಇಲ್ಲ ಅನ್ನುವುದು ಪ್ರದರ್ಶಕರ ಅಭಿಪ್ರಾಯ.

bigg budget movie making is difficult says Film maker Rajendra Singh Babu dpl
Author
Bangalore, First Published Oct 7, 2020, 10:20 AM IST

ಇನ್ನು ಬಿಗ್‌ ಬಜೆಟ್‌ ಸಿನಿಮಾ ಮಾಡೋದು ಕಷ್ಟಕಣ್ರೀ ಅಂದರು ಎಸ್‌ವಿ ರಾಜೇಂದ್ರ ಸಿಂಗ್‌ ಬಾಬು. ಕನ್ನಡದಲ್ಲಿ ಬಿಗ್‌ ಬಜೆಟ್‌ ಸಿನಿಮಾಗಳ ಹರಿಕಾರ ಅವರು. 30 ವರ್ಷಗಳ ಹಿಂದೆಯೇ ಮುತ್ತಿನಹಾರದಂಥ ದೊಡ್ಡ ಬಜೆಟ್ಟಿನ ಸಿನಿಮಾ ಕೊಟ್ಟವರು.

ಯುಕೆ ಮತ್ತು ಯುಎಸ್‌ಎಗಳಲ್ಲಿ ದೊಡ್ಡ ಥೇಟರ್‌ ಚೈನ್‌ ಹೊಂದಿದ್ದ ಸಿನಿ ವಲ್‌ರ್‍್ಡ ಬಾಗಿಲು ಹಾಕಿದೆ. 663 ಥೇಟರುಗಳನ್ನು ಬಂದು ಮಾಡಿದೆ. ಅಲ್ಲಿಗೆ ಸುಮಾರು ಒಂಬತ್ತು ಸಾವಿರ ಸ್ಕ್ರೀನುಗಳು ಶಾಶ್ವತ ಕತ್ತಲಿಗೆ ಸರಿದಿವೆ.

ಯೋಗರಾಜ್‌ ಭಟ್ ಸಿನಿಮಾದಲ್ಲಿ ಲಾ ಸ್ಟುಡೆಂಟ್‌ ಅಂಜಲಿ ಅನೀಶ್‌: ಸ್ಯಾಂಡಲ್‌ವುಡ್‌ಗೆ ಹೊಸ ಮುಖ

ಅಂಥ ದೊಡ್ಡ ಥೇಟರ್‌ ಸರಪಣಿಯೇ ವ್ಯಾಪಾರ ಇಲ್ಲದೇ ಬಾಗಿಲು ಮುಚ್ಚಿರುವಾಗ ನಮ್ಮ ಸ್ಥಿತಿಯೇನು ಅನ್ನುವ ಪ್ರಶ್ನೆ ಬಾಬು ಅವರದು. ಅವರ ಪ್ರಕಾರ ಈ ಕಾರಣಗಳಿಂದಾಗಿ ದೊಡ್ಡ ಸಿನಿಮಾಗಳಿವೆ ಏಟು ಬೀಳಲಿದೆ.

1. ಕೇವಲ ಶೇ.50ರಷ್ಟುಸೀಟಿಂಗ್‌ ಇರಬೇಕು ಎಂಬ ವ್ಯವಸ್ಥೆಯಿಂದಾಗಿ ಗಳಿಕೆ ಕುಸಿಯಲಿದೆ.

2. ಒಂದು ವಾರದಲ್ಲಿ ಸಂಪಾದಿಸುವುದನ್ನು ದುಡಿಯಲು ನಾಲ್ಕು ವಾರ ಬೇಕು. ಅಷ್ಟುದಿನ ಸಿನಿಮಾ ಚಿತ್ರಮಂದಿರದಲ್ಲಿರುವ ಖಾತ್ರಿ ಇಲ್ಲ.

3. ಹಾಕಿದ ಹಣವನ್ನು ಒಂದೆರಡು ದಿನದಲ್ಲಿ ಗಳಿಸದೇ ಹೋದರೆ, ನಿರ್ಮಾಪಕನಿಗೆ ಲಾಭವಿಲ್ಲ.

4. ಸಿನಿಮಾ ಚೆನ್ನಾಗಿಲ್ಲ ಅಂತ ಸುದ್ದಿಯಾದರೆ ಗಳಿಕೆ ಬಿದ್ದು ಹೋಗುತ್ತದೆ. ಹೀಗಾಗಿ ದೊಡ್ಡ ಬಜೆಟ್‌ ಖರ್ಚು ಮಾಡಲು ನಿರ್ಮಾಪಕರು ಹಿಂಜರಿಯುತ್ತಾರೆ.

5. ಓಟಿಟಿ ಪ್ಲಾಟ್‌ಫಾರ್ಮುಗಳಿಂದ ಹಣ ವಾಪಸ್ಸು ಬರುವುದು ಖಾತ್ರಿಯಿಲ್ಲ. ಈಗಾಗಲೇ ಅವರು ಕನ್ನಡದ ಸಹವಾಸ ಬೇಡ ಅನ್ನುತ್ತಿದ್ದಾರೆ.

6. ಥೇಟರ್‌ ಓಪನ್‌ ಆದರೂ ಜನ ಬರುವ ನಂಬಿಕೆ ಯಾವ ಪ್ರದರ್ಶಕರಿಗೂ ಇಲ್ಲ. ಮಕ್ಕಳನ್ನು ಶಾಲೆಗೇ ಕಳಿಸದ ಪೋಷಕರು ಥೇಟರಿಗೆ ಕರೆತರುತ್ತಾರೆಯೇ?

ಈ ಮಧ್ಯೆ ಕೇಂದ್ರ ಸರ್ಕಾರ ಚಿತ್ರಪ್ರದರ್ಶನಕ್ಕೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅವುಗಳನ್ನು ಪಾಲಿಸಿ ಚಿತ್ರಮಂದಿರ ನಡೆಸುವುದು ಸಾಧ್ಯವೇ ಇಲ್ಲ ಅನ್ನುವುದು ಪ್ರದರ್ಶಕರ ಅಭಿಪ್ರಾಯ. ಆರು ಅಡಿ ಅಂತರ, ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ರೀನಿಂಗ್‌, ಮಾಸ್ಕ್‌ ಕಡ್ಡಾಯ, ಉಗುಳುವಂತಿಲ್ಲ, ಕೆಮ್ಮುವಂತಿಲ್ಲ, ಎರಡು ಪ್ರದರ್ಶನಗಳ ನಡುವೆ ಹೆಚ್ಚು ಕಾಲಾವಧಿಯ ಅಂತರ, ಶೇ. 50 ಸೀಟಿಂಗ್‌ ಮುಂತಾದ ಕಟ್ಟುಪಾಡುಗಳನ್ನಿಟ್ಟುಕೊಂಡರೆ ಪ್ರದರ್ಶಕರಿಗೂ ಲಾಭವಿಲ್ಲ, ನಿರ್ಮಾಪಕರಿಗೂ ಲಾಭವಿಲ್ಲ.

ಮೋದಿ ಉದ್ಘಾಟಿಸಿದ ಅಟಲ್ ಟನಲ್ ಮೂಲಕ ಪ್ರಣಿತಾ ಪ್ರಯಾಣ..!

ಇದು ಜಾರಿಗೆ ಬರಬೇಕಾದರೆ ಥೇಟರ್‌ ಬಾಡಿಗೆ ಕಡಿಮೆ ಮಾಡಬೇಕು. ಈಗ ವಾರಕ್ಕೆ ಆರು ಲಕ್ಷ ಪಡೆಯುವ ಚಿತ್ರಮಂದಿರದ ಮಾಲಿಕ ಮೂರು ಲಕ್ಷಕ್ಕೆ ಚಿತ್ರಮಂದಿರ ಕೊಡಬೇಕು. ಹತ್ತು ಲಕ್ಷ ಗಳಿಸುವ ಚಿತ್ರಮಂದಿರದಿಂದ ಕೇವಲ 5 ಲಕ್ಷ ಮಾತ್ರ ಗಳಿಕೆಯಾಗುತ್ತದೆ. ಈ ಲೆಕ್ಕಾಚಾರದಲ್ಲಿ ಹಾಕಿದ 20 ಕೋಟಿ ಪಡೆಯುವುದು ಕಷ್ಟಎನ್ನುವುದು ಗಾಂಧೀನಗರದ ಲೆಕ್ಕಾಚಾರ. ಈ ಪ್ರಕಾರ ಇನ್ನು ಬ್ಲಾಕ್‌ಬಸ್ಟರ್‌ ಚಿತ್ರಗಳಿಗೆ ಕಷ್ಟವಿದೆ ಎನ್ನುವ ಮಾತನ್ನು ರಾಜೇಂದ್ರ ಸಿಂಗ್‌ ಬಾಬು ಸೇರಿದಂತೆ ಎಲ್ಲರೂ ಹೇಳುತ್ತಾರೆ.

ನವೆಂಬರ್‌ನಿಂದ ರಾಜವೀರ ಮದಕರಿ

ಈ ಮಧ್ಯೆ ಸಿಂಗ್‌ ಬಾಬು ನಿರ್ದೇಶಿಸಬೇಕಾಗಿದ್ದ ದರ್ಶನ್‌ ಸಿನಿಮಾದ ಚಿತ್ರೀಕರಣ ನವೆಂಬರಿನಿಂದ ಆರಂಭವಾಗಲಿದೆ. ಆದರೆ ಅಷ್ಟುಹೊತ್ತಿಗೆ ಚಿತ್ರಮಂದಿರಗಳು ತೆರೆದು, ಈಗಾಗಲೇ ಚಿತ್ರೀಕರಣಗೊಂಡಿರುವ ಸಿನಿಮಾಗಳ ಪ್ರದರ್ಶನ ಆರಂಭವಾದರೆ, ಅವುಗಳ ಪ್ರಚಾರದಲ್ಲಿ ದರ್ಶನ್‌ ಬಿಜಿಯಾಗಲಿದ್ದಾರೆ. ಹಾಗೇನಾದರೂ ಅದರೆ ಚಿತ್ರೀಕರಣ ಮತ್ತಷ್ಟುಮುಂದಕ್ಕೆ ಹೋಗುವುದು ಖಚಿತ.

Follow Us:
Download App:
  • android
  • ios