ನಟನೆಯಾಗಲಿ ಸಿನಿಮಾ ಸಂಬಂಧಿ ಯಾವ ಡಿಪಾರ್ಟ್‌ಮೆಂಟ್‌ನಲ್ಲಿ ಬೇಕಿದ್ದರೂ ತೊಡಗಿಸಿಕೊಳ್ಳುವೆ ಎನ್ನುವ ಆಸೆ ಹೊತ್ತಿದ್ದ ಅಂಜಲಿ ನಟನೆಗೆ ಓಕೆ ಎಂದಿದ್ದಾರೆ. ಅದಾದ ಮೇಲೆ ‘ಪದವಿ ಪೂರ್ವ’ ಮೂಲಕ ಅವಕಾಶದ ಬಾಗಿಲು ತೆರೆದಿದೆ.
ಅಮ್ಮ, ಅಪ್ಪ, ಅಣ್ಣ ಲಾಯರ್. ಇವರು ಓದುತ್ತಿರುವುದೂ ಲಾ. ಹೀಗೆ ಇಡೀ ಕುಟುಂಬವೇ ಕಾನೂನು ಕ್ಷೇತ್ರದಲ್ಲಿ ಇದ್ದರೆ ಅಂಜಲಿ ಅನೀಶ್ ಮಾತ್ರ ಅಲ್ಲಿಂದ ತುಸು ಜಾರಿ ಸ್ಯಾಂಡಲ್‌ವುಡ್‌ಗೆ ಧುಮುಕಿದ್ದಾರೆ. ಅದು ಹರಿಪ್ರಸಾದ್ ಜಯಣ್ಣ ನಿರ್ದೇಶನ ಹೊಸ ಚಿತ್ರ ‘ಪದವಿ ಪೂರ್ವ’ಗೆ ನಾಯಕಿಯಾಗುವ ಮೂಲಕ.
ಬೆಂಗಳೂರು ಮೂಲದ ಅಂಜಲಿ ಕಡೆಯ ವರ್ಷದ ಲಾ ಓದುತ್ತಿದ್ದರೂ ಶಿಕಾಗೋದಲ್ಲಿ ನಟನೆ ತರಬೇತಿ ಮುಗಿಸಿದವರು. ಕನ್ನಡ ಮತ್ತು ಹಿಂದಿಯ ಕೆಲ ಚಿತ್ರಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿರುವವರು. ‘ಲಾ ನನ್ನ ಪ್ರೊಫೆಷನ್, ಫಿಲ್ಮ್ ಪ್ಯಾಷನ್’ ಎನ್ನುವ ಅಂಜಲಿ ಸಿನಿಮಾದಲ್ಲಿ ಯಾವುದೇ ಸ್ಟ್ರಾಂಗ್ ಹಿನ್ನೆಲೆ ಇಲ್ಲದೇ ಅಖಾಡಕ್ಕೆ ಇಳಿದವರು.
ಮೋದಿ ಉದ್ಘಾಟಿಸಿದ ಅಟಲ್ ಟನಲ್ ಮೂಲಕ ಪ್ರಣಿತಾ ಪ್ರಯಾಣ..!
ಒಮ್ಮೆ ಹೀಗಾಗಿದೆ, ಯೋಗರಾಜ್ ಭಟ್ಟರ ‘ಮುಂಗಾರು ಮಳೆ’, ‘ಗಾಳಿಪಟ’ ಚಿತ್ರಗಳನ್ನು ನೋಡಿ ಮೆಚ್ಚಿದ್ದ ಅಂಜಲಿ ಸೀದಾ ಭಟ್ಟರ ಬಳಿ ಹೋಗಿ ನಾನು ನಿಮ್ಮ ಸಿನಿಮಾಗಳಿಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತೇನೆ, ಅವಕಾಶ ಕೊಡಿ ಎಂದು ಕೇಳಿದ್ದಾರೆ. ಪೂರ್ವಾಪರ ವಿನಿಮಯ ಆದ ಬಳಿಕ ಭಟ್ಟರು ಅವಕಾಶ ನೀಡುವುದಾಗಿ ಹೇಳಿದ್ದಾರೆ, ಜೊತೆಗೆ ನಟನೆ ಇಷ್ಟವೇ ಎಂದೂ ಕೇಳಿದ್ದಾರೆ, ನಿರ್ದೇಶನವಾಗಲಿ, ನಟನೆಯಾಗಲಿ ಸಿನಿಮಾ ಸಂಬಂಧಿ ಯಾವ ಡಿಪಾರ್ಟ್‌ಮೆಂಟ್‌ನಲ್ಲಿ ಬೇಕಿದ್ದರೂ ತೊಡಗಿಸಿಕೊಳ್ಳುವೆ ಎನ್ನುವ ಆಸೆ ಹೊತ್ತಿದ್ದ ಅಂಜಲಿ ನಟನೆಗೆ ಓಕೆ ಎಂದಿದ್ದಾರೆ. ಅದಾದ ಮೇಲೆ ‘ಪದವಿ ಪೂರ್ವ’ ಮೂಲಕ ಅವಕಾಶದ ಬಾಗಿಲು ತೆರೆದಿದೆ.
‘ಸಿಂಪಲ್ ಹುಡುಗಿ, ಇಷ್ಟವಾಗದ್ದನ್ನು ನೇರವಾಗಿ ಹೇಳುವ ಗುಣ ಇರುವ ಪಾತ್ರಕ್ಕೆ ಪ್ರಾರಂಭದಲ್ಲಿಯೇ ಬಣ್ಣ ಹಚ್ಚುತ್ತಿರುವ ಖುಷಿ ನನಗಿದೆ. ಯಾವ ಕೆಲಸವೇ ಆಗಲಿ ಮನಸ್ಸಿಟ್ಟು ಮಾಡುತ್ತೇನೆ, ಅದರಲ್ಲಿ ಯಶ ಕಾಣುವ ಪ್ರಯತ್ನ ಮಾಡುತ್ತೇನೆ. ನನಗೆ ಲಾ ಇಷ್ಟ. ಸಿನಿಮಾ ಎಂದರೆ ಪ್ರಾಣ. ಅದಕ್ಕಾಗಿಯೇ ಎರಡನ್ನೂ ಮಾಡುತ್ತಿದ್ದೇನೆ. ಮಾಡೆಲಿಂಗ್, ಫೋಟೋಶೂಟ್ ನನ್ನ ಮಿಕ್ಕ ಆಸಕ್ತಿಯ ಕ್ಷೇತ್ರ. ಜಗತ್ತಿನಲ್ಲಿ ಒಂದೇ ಕೆಲಸ ಮಾಡಬೇಕು, ಒಂದೇ ಕ್ಷೇತ್ರಕ್ಕೆ ಸಿಮೀತವಾಗಬೇಕು ಎಂದೇನೂ ಇಲ್ಲ. ಇಷ್ಟವಿರುವ ಎಲ್ಲಾ ಕ್ಷೇತ್ರದಲ್ಲೂ ಕಾಣಿಸಿಕೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯ’ ಎನ್ನುವ ಅಂಜಲಿ ಇದೀಗ ತಮ್ಮ ಹೊಸ ಚಿತ್ರದ ನಾಯಕ ಪೃಥ್ವಿ ಶಾಮನೂರು ಮತ್ತು ತಂಡದೊಂದಿಗೆ ವರ್ಕ್ಶಾಪ್‌ನಲ್ಲಿ ತೊಡಗಿಕೊಂಡಿದ್ದಾರೆ.
