ಕಿರಿಕ್ ಕೀರ್ತಿ ಹತ್ತು ವರ್ಷಗಳ ದಾಂಪತ್ಯದ ಬಳಿಕ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದಾರೆ. ಯಾವುದೇ ದ್ವೇಷ, ಆರೋಪಗಳಿಲ್ಲದೆ ಬೇರೆಯಾಗುವ ನಿರ್ಧಾರ ಕೈಗೊಂಡಿದ್ದಾರೆ. ಮಾನಸಿಕ ಒತ್ತಡ, ಆತ್ಮಹತ್ಯೆ ಪ್ರಯತ್ನದಿಂದ ಹೊರಬಂದು, ಹೊಸ ಬದುಕು ಆರಂಭಿಸಿದ್ದಾರೆ. ಮಾಜಿ ಪತ್ನಿಗೆ ಗೌರವ ಉಳಿಸಿಕೊಂಡಿದ್ದಾರೆ. ಇದು ಅನೇಕರಿಗೆ ಜೀವನ ಪಾಠ.

ಕಿರಿಕ್ ಕೀರ್ತಿಗೆ (Kirik Keerthi) ಇಷ್ಟೊಂದು ಮೆಚ್ಯೂರಿಟಿ ಇದ್ಯಾ? ಈ ಪ್ರಶ್ನೆಗೆ ಉತ್ತರವನ್ನು ಈ ಸ್ಟೋರಿ ನೋಡಿದ ಬಳಿಕ ನೀವೇ ಕಂಡುಕೊಳ್ಳಿ.. ನಟ, ಆಂಕರ್ ಹಾಗೂ ಬಿಗ್ ಬಾಸ್ ರನ್ನರ್‌-ಅಪ್ ಕಿರಿಕ್ ಕೀರ್ತಿ ಸದ್ಯ ಮದುವೆಯಾಗಿಯೂ ಮತ್ತೆ ಸಿಂಗಲ್ ಎಂಬುದು ಬಹುತೇಕರಿಗೆ ಗೊತ್ತು. ಆದರೆ, ನಿಜವಾಗಿಯೂ ಅವರ ಮಾಜಿ ಪತ್ನಿ ಹಾಗೂ ಕೀರ್ತಿ ಮಧ್ಯೆ ಏನಾಯ್ತು ಎಂಬುದು ಗೊತ್ತಾ? ಯೂಟ್ಯೂಬರ್ ರಾಜೇಶ್ ಗೌಡ (Rajesh Gowda) ಜೊತೆಗಿನ ಸಂದರ್ಶನದಲ್ಲಿ ಈ ಬಗ್ಗೆ ಸ್ವತಃ ಕಿರಿಕ್ ಕೀರ್ತಿ ಅದೇನು ಹೇಳಿದ್ದಾರೆ ನೋಡಿ.. ಓವರ್ ಟು ಕಿರಿಕ್ ಕೀರ್ತಿ.. 

'ನಮ್ಮಿಬ್ಬರ ಮಧ್ಯೆ ಏನಾಯ್ತು ಎಂಬುದು ಬೇರೆ ಯಾರಿಗೂ ಗೊತ್ತಾಗಿಲ್ಲ, ಗೊತ್ತಾಗೋದೂ ಇಲ್ಲ, ಗೊತ್ತಾಗಬೇಕಾಗಿಯೂ ಇಲ್ಲ. 2 ವರ್ಷ ಲವ್ ಮಾಡಿ, ಮನೆಯವರ ಜೊತೆ ಫೈಟ್ ಮಾಡಿ ಮದುವೆಯಾಗಿ 10 ವರ್ಷ ಸಂಸಾರ ಮಾಡಿದ ಮೇಲೆ ಎಲ್ಲೋ ಒಂದು ಕಡೆ ಇನ್ನು ಸಾಧ್ಯವಿಲ್ಲ ಮುಂದಕ್ಕೆ ಹೀಗೇ ಜೊತೆಯಾಗಿ ಹೋಗೋಕೆ ಅಂತ ಅರಿವಾಯ್ತು.. ನೋ ಮೋರ್ ಫೈಟ್ಸ್‌, ನೋ ಮೋರ್ ಕಾಂಪ್ರೋಮೈಸ್‌ ಅಂತ ನಿರ್ಧಾರ ಆಗಿಹೋಯ್ತು.. ಇಲ್ಲಿಗೇ ಈ ಸಂಸಾರಕ್ಕೆ ಎಂಡ್ ಕೊಡೋದು ಅಂತಾನೂ ನಿರ್ಧಾರ ಮಾಡಿಯೂ ಆಯ್ತು.. 

ಕುಂಯ್‌ಕಾ‌ ಕುಂಯ್‌ಕಾ..,ಯಾರಿಗೆಲ್ಲಾ ನೆನಪಿದೆ; ಇದು ಕಿರಿಕ್ ಕೀರ್ತಿ ಹೊಸ ಕಿರಿಕ್ಕಾ?

ನಮ್ಮಿಬ್ಬರ ಮಧ್ಯೆ ಯಾವುದೇ ದ್ವೇಷ ಇರಲಿಲ್ಲ, ಪರಸ್ಪರ ಆರೋಪ-ಪ್ರತ್ಯಾರೋಪ ಇರಲಿಲ್ಲ. ಇಬ್ಬರಲ್ಲೂ ಬೇರೆಬೇರೆಯಾಗುವ ಸ್ಪಷ್ಟ ನಿರ್ಧಾರ ಇತ್ತು. ಆದರೆ, ಈಗ ಒಂದು ವರ್ಷದ ಹಿಂದೆ ನಾನು ಡಿಪ್ರೆಶನ್‌ಗೆ ಹೋಗಿದ್ದೆ, ನನ್ನ ಜೀವನಕ್ಕೆ ಶಾಶ್ವತವಾದ ಅಂತ್ಯ ಹಾಡೋದಕ್ಕೂ ಟ್ರೈ ಮಾಡಿದ್ದೆ.. ಆದರೆ, ಇವತ್ತು ಮತ್ತೆ ಎಲ್ಲಾ ಸಮಸ್ಯೆಗಳಿಂದ ಹೊರಬಂದು ಉತ್ತಮ ರೀತಿಯಲ್ಲಿ ಲೈಫ್ ಲೀಡ್ ಮಾಡ್ತಾ ಇದೀನಿ.. ಯಾರನ್ನೂ ಬ್ಲೇಮ್ ಮಾಡಲ್ಲ, ಯಾರ ಬಗ್ಗೆಯೂ ಮನಸ್ಸಲ್ಲಿ ದ್ವೇಷವಿಲ್ಲ..

ನನಗೆ ನೀನು ನಿನಗೆ ನಾನು ಅನ್ನೋ ತರ ಇದ್ದ ಜೀವನ 'ನನಗೆ ನಾನೇ ನಿನಗೆ ನೀನೇ' ಅನ್ನೋ ತರ ಆಗೋಯ್ತು.. ನಾನು ಒಳ್ಳೆಯವನು ಆ ಇನ್ನೊಬ್ಬರು ಕೆಟ್ಟವರು ಅನ್ನೋ ಭಾವನೆ ನನಗಿಲ್ಲ. ಅಥವಾ ನಾನೇ ಕೆಟ್ಟವನು ಆ ಇನ್ನೊಬ್ಬರು ಒಳ್ಳೆಯವರು ಅನ್ನೋ ಅಪರಾಧಿ ಭಾವವೂ ಕಾಡುತ್ತಿಲ್ಲ.. ಇನ್ನು ಸಾಗದು ಎಂದಾಗ ದೂರ ಆಗಿದ್ದೇವೆ. ಆದರೆ, ಈಗಲೂ ಅವರು ನನ್ನ ಮಗನ ತಾಯಿ ಎಂಬ ಗೌರವ ನನಗಿದೆ, ಅದು ಯಾವತ್ತಿಗೂ ಇರಲಿದೆ.. 'ಎಂದಿದ್ದಾರೆ ಕಿರಿಕ್ ಕೀರ್ತಿ.

ರಾಜಮೌಳಿ-ಮಹೇಶ್ ಬಾಬು ಮಾಡ್ತಿರೋದು ಅಂತಿಂಥದ್ದಲ್ಲ, ಆಫ್ರಿಕಾದಲ್ಲೇ ಯಾಕೆ ಶೂಟ್? 

ಕೆಲವರ ಪಾಲಿಗೆ ಇದು ಅಚ್ಚರಿ ಎನಿಸಬಹುದಾದರೂ, ಕಿರಿಕ್ ಕೀರ್ತಿ ಅವರು ರಾಜೇಶ್ ಗೌಡ ಜೊತೆಗಿನ ಸಂದರ್ಶನದಲ್ಲಿ ತುಂಬಾ ಪ್ರಬುದ್ಧತೆಯಿಂದ ಮಾತನ್ನಾಡಿದ್ದಾರೆ. ಜೀವನವನ್ನು ಅವರು ಅರ್ಥ ಮಾಡಿಕೊಂಡ ರೀತಿ, ಅವರು ವೈಯಕ್ತಿಕ ಸಮಸ್ಯೆಯಿಂದ ಹೊರಬಂದು ಹೊಸ ಬದುಕು ಕಟ್ಟಿಕೊಂಡ ಸಾಹಸ, ಹಲವರಿಗೆ ಮಾದರಿ ಆಗಲಿರುವುದಂತೂ ಖಂಡಿತ. 

ಜೀವನದ ಯಾವುದೋ ಘಳಿಗೆಯಲ್ಲಿ ಎರಡು ಜೀವಗಳು ಪರಸ್ಪರ ಪ್ರೀತಿಸಿ ಮಿಂಗಲ್ ಆಗಿ, ಬಳಿಕ ಎದುರಾದ ವಿಷಮ ಪರಿಸ್ಥಿತಿಯಲ್ಲಿ ದೂರವಾಗಿ ಮತ್ತೆ ಸಿಂಗಲ್ ಆಗಿರುವ ಕೀರ್ತಿ ಸ್ಟೋರಿ ಎಂಥವರಿಗೂ ಕಣ್ಣೀರು ತರಿಸುವಂತಿದೆ. ನಮ್ಮನಿಮ್ಮ ನಡುವೆ ಇರುವ ಸೆಲೆಬ್ರಿಟಿಯ ಲೈಫ್ ಸ್ಟೋರಿ ಇದು.. ಇದನ್ನೊಂದು 'ಜೀವನ ಪಾಠ' ಎನ್ನಬಹುದೇ?

ಹಳೆಯದ್ದನ್ನು ಮರೆತಿರುವೆ: ಡಿವೋರ್ಸ್​ ಬಗ್ಗೆ ಕಿರಿಕ್​ ಕೀರ್ತಿ ಓಪನ್​ ಮಾತೇನು? |Kirik Keerthi | Rajesh Reveals