ಕಿರಿಕ್ ಕೀರ್ತಿ ಸದ್ಯ ನಿರೂಪಕರಾಗಿ ಸಾಕಷ್ಟು ಫೇಮಸ್. ವೈಯಕ್ತಿಕ ಜೀವನದಲ್ಲಿ ನೊಂದುಬೆಂದರೂ ತಮ್ಮ ವೃತ್ತಿ ಜೀವನವನ್ನು ಚೆಂದವಾಗಿಯೇ ನಡೆಸಿಕೊಂಡು ಹೋಗುತ್ತಿದ್ದಾರೆ ಕಿರಿಕ್ ಕೀರ್ತಿ. ಆದರೆ ಸದ್ಯಕ್ಕೆ ಅವರು ಸಿಂಗಲ್ ಎಂಬ ಕಾರಣಕ್ಕೆ ಕಂಡಕಂಡವರೊಡನೆ ಅವರ ಹೆಸರನ್ನು..

ಕರ್ನಾಟಕದಲ್ಲಿ ಕಿರಿಕ್ ಕೀರ್ತಿ (Kirik Keerthi) ಗೊತ್ತಿಲ್ಲ ಅನ್ನೋರು ತುಂಬಾ ಕಡಿಮೆ! ನಟ, ನಿರೂಪಕ, ರೈಟರ್ ಹೀಗೆ ಬಹುರೂಪಿ ಕೀರ್ತಿಕೆ ಆ 'ಕಿರಿಕ್' ಅನ್ನೋ ಅಲಂಕಾರ ಬೇರೆ ಸೇರಿಕೊಂಡು ತುಂಬಾನೇ ಫೇಮಸ್ ಮಾಡಿಬಿಟ್ಟಿದೆ. ಇತ್ತೀಚೆಗಂತೂ ಕಿರಿಕ್ ಕೀರ್ತಿ ಏನೂ ಕಿರಿಕ್ ಮಾಡ್ತಿಲ್ಲ, ಆದ್ರೆ ಕೀರ್ತಿಗೇನೇ ಕಿರಿಕ್ ಮಾಡೋರ ಸಂಖ್ಯೆ ಜಾಸ್ತಿಯಾಗಿದೆ. ಮೊನ್ನೆ ಯಾರೋ ಸೋಷಿಯಲ್ ಮೀಡಿಯಾದಲ್ಲಿ ಏನೋ ಅಂದಿದಾರೆ, ಅದಕ್ಕೆ ನಿನ್ನೆ ಕೀರ್ತಿ ಸರಿಯಾಗಿಯೇ ಕೌಂಟರ್ ಕೊಟ್ಟಿದ್ದೂ ಆಗಿದೆ. 

ಕಿರಿಕ್ ಕೀರ್ತಿ ಬಿಗ್ ಬಾಸ್ ಸೀಸನ್‌ 4ರ ರನ್ನರ್ ಅಪ್ ಎಂಬುದನ್ನು ಕರ್ನಾಟಕವಿನ್ನೂ ಮರೆತಿಲ್ಲ. ಆ ಸೀಸನ್‌ನಲ್ಲಿ ಕೊನೆಯ ಕ್ಷಣದವರೆಗೂ ಕಿರಿಕ್ ಗೆಲ್ತಾರೆ ಎಂದೇ ಬಹಳಷ್ಟು ಕಿರುತೆರೆ ವೀಕ್ಷಕರು, ಬಿಗ್ ಬಾಸ್ ಪ್ರಿಯರು ಭಾವಿಸಿದ್ದರು. ಆದರೆ, ಹಾಗಾಗಲಿಲ್ಲ. ಕೀರ್ತಿ ಬದಲು ಪ್ರಥಮ್ ಕಪ್ ಗೆದ್ದರು, ಕೀರ್ತಿ ರನ್ನರ್ ಅಪ್ ಆಗಿ ಸಮಾಧಾನ ಪಟ್ಟುಕೊಂಡರು. ಆದರೆ, ಅಂದಿನಿಂದ ಕಿರಿಕ್ ಕೀರ್ತಿ ಗ್ರಾಫ್, ಹವಾ ಸಾಕಷ್ಟು ಮೇಲೇರಿದ್ದಂತೂ ಹೌದು. 

ಚೈತ್ರಾ ಕುಂದಾಪುರ ಜೊತೆ ಮದುವೆ ಎಂದು ಟ್ರೋಲ್‌ ಮಾಡಿದವರಿಗೆ ಬೀಪ್‌ ಪದಗಳಿಂದ ಕ್ಲಾಸ್‌ ತೆಗೆದುಕೊಂಡ ಕಿರಿಕ್ ಕೀರ್ತಿ!

ಕಿರಿಕ್ ಕೀರ್ತಿ ಸದ್ಯ ನಿರೂಪಕರಾಗಿ ಸಾಕಷ್ಟು ಫೇಮಸ್. ವೈಯಕ್ತಿಕ ಜೀವನದಲ್ಲಿ ನೊಂದುಬೆಂದರೂ ತಮ್ಮ ವೃತ್ತಿ ಜೀವನವನ್ನು ಚೆಂದವಾಗಿಯೇ ನಡೆಸಿಕೊಂಡು ಹೋಗುತ್ತಿದ್ದಾರೆ ಕಿರಿಕ್ ಕೀರ್ತಿ. ಆದರೆ ಸದ್ಯಕ್ಕೆ ಅವರು ಸಿಂಗಲ್ ಎಂಬ ಕಾರಣಕ್ಕೆ ಕಂಡಕಂಡವರೊಡನೆ ಅವರ ಹೆಸರನ್ನು ತಳುಕು ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಕೆಲವರು ಟಾರ್ಗೆಟ್ ಮಾಡುತ್ತಲೇ ಇರುತ್ತಾರೆ. ಯಾರ ಜೊತೆ ಕೀರ್ತಿ ಮಾತನ್ನಾಡಿದರೂ ಮಾರನೇ ದಿನ ಅವರ ಜೊತೆ ಕೀರ್ತಿಗೆ ಲವ್ ಅಥವಾ ಮದುವೆ ಮಾತು ಆಡುತ್ತಾರೆ. 

ಮೊನ್ನೆ, ಬಿಗ್ ಬಾಸ್ ಕನ್ನಡ ಈ ಸೀಸನ್‌ ಸ್ಪರ್ಧಿಯಾಗಿದ್ದ ಚೈತ್ರಾ ಕುಂದಾಪುರ ಅವರೊಂದಿಗೆ ಕಿರಿಕ್ ಕೀರ್ತಿ ಹೆಸರು ಓಡಾಡುತ್ತಿತ್ತು. ಅದ್ಯಾವುದೋ ಯೂಟ್ಯೂಬ್ ಚಾನೆಲ್ ವೈರಲ್ ಮಾಡಿದ್ದ ಅ ಸುದ್ದಿಗೆ ಕಿರಿಕ್ ಕಿರ್ತಿ ಕೆಂಡಾಮಂಡಲ ಆಗಿದ್ದಾರೆ. ಅವರಿಗೆ ಕೌಂಟರ್ ಕೊಟ್ಟಿರುವ ವಿಡಿಯೋ ಪೋಸ್ಟ್ ಮಾಡಿ ಅವರ ಜನ್ಮ ಜಾಲಾಡಿದ್ದಾರೆ ಕೀರ್ತಿ. ಅನಾವಶ್ಯಕ ಟೀಕೆ, ವಿವಾದ ಸೃಷ್ಟಿಸುವವರ ಬಗ್ಗೆ, ಸುಳ್ಳು ಸುದ್ದಿ ಹಬ್ಬಿಸುವವರ ಬಗ್ಗೆ ಕೀರ್ತಿಗೆ ಯಾವತ್ತೂ ಅಸಮಾಧಾನ ಹಾಗೂ ಸಿಟ್ಟು ಇದ್ದೇ ಇದೆ. 

SPBಯಂತೆ ಮತ್ತೆ ಕನ್ನಡ ಹಾಡನ್ನು ಹೊಗಳಿದ ಸೋನು ನಿಗಮ್, ಕನ್ನಡದವರೇ ದೂರ ಯಾಕೆ?!

ಇಂಥ ಕಿರಿಕ್ ಕೀರ್ತಿ ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಳೆಯ ನೆನಪೊಂದನ್ನು ಹಂಚಿಕೊಂಡಿದ್ದಾರೆ. 'ಯಾರಿಗೆಲ್ಲಾ ನೆನಪಿದೆ... ಕುಂಯ್‌ಕಾ‌ ಕುಂಯ್‌ಕಾ..' ಎಂದು ತಮ್ಮ ಮಗ ಆವಿಷ್ಕಾರ್ ಕೀರ್ತಿ ಬಿಗ್ ಬಾಸ್ ಮನೆಗೆ ಬಂದಿದ್ದು, ಕಿಚ್ಚ ಸುದೀಪ್ ಅವರನ್ನು ಎತ್ತಿಕೊಂಡಿದ್ದನ್ನು ನೆನಪಿಸಿದ್ದಾರೆ. ಕಿರಿಕ್ ಕೀರ್ತಿ ಈ ಪೋಸ್ಟ್‌ಗೆ ಹಲವರು ತಮ್ಮ ನೆನಪನ್ನೂ ಸೇರಿಸಿ ರಿಪ್ಲೈ ಮಾಡಿದ್ದಾರೆ. ಒಟ್ಟಿನಲ್ಲಿ, ಕಿರಿಕ್ ಕೀರ್ತಿ ಬಿಗ್ ಬಾಸ್ ಹಾಗೂ ಆವಿಷ್ಕಾರ್‌ ಈ ಎರಡನ್ನೂ ಒಟ್ಟಿಗೇ ನೆನಪಿಸಿಕೊಂಡು ತಮ್ಮ ಅಭಿಮಾನಿಗಳ ಮುಖದಲ್ಲಿ ಮುಗುಳ್ನಗೆ ಮೂಡಿಸಿದ್ದಾರೆ.