ಕೇವಲ ದರ್ಶನ್ ಗೆ ಮಾತ್ರ ಷರತ್ತು ಸಡಿಸಿ ಆದೇಶಿಸಿದ ಹೈಕೋರ್ಟ್.. ಸಿನಿಮಾ ನಟನಾಗಿದ್ದು ಚಿತ್ರಿಕರಣಕ್ಕಾಗಿ ಬೆಂಗಳೂರು ಬಿಟ್ಟು ಬೇರೆಡೆ ಹೋಗಲು ಅವಕಾಶಕ್ಕೆ ಮನವಿ ಮಾಡಿದ್ದ ದರ್ಶನ್.. ಸದ್ಯ ಬೆಂಗಳೂರು ಬಿಟ್ಟು ಹೋಗಲು ಅವಕಾಶ ನೀಡಿದ ಹೈಕೋರ್ಟ್..
ಕನ್ನಡದ ನಟ ದರ್ಶನ್‌ಗೆ (Darshan) ಮತ್ತೊಂದು ಬಿಗ್ ರಿಲೀಫ್ ಸಿಕ್ಕಿದೆ.. ಬೆಂಗಳೂರು ಬಿಟ್ಟು ಹೋಗದಂತೆ ಇದ್ದ ಷರತ್ತು ಸಡಿಲಿಕೆ ಆಗಿದೆ. ವಿದೇಶಕ್ಕೆ ಹೋಗುವುದಾದರೆ ಮಾತ್ರ ಕೋರ್ಟ್ ಅನುಮತಿ ಬೇಕು.. ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಈ ಆದೇಶ ಮಾಡಲಾಗಿದೆ. ಷರತ್ತು ಸಡಿಲಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ದರ್ಶನ್ ಮನವಿಗೆ ಸ್ಪಂದಿಸಿದ ಹೈಕೋರ್ಟ್ ಈ ಸಡಿಲಿಕೆ ನೀಡಿದೆ.
ನ್ಯಾ. ವಿಶ್ವಜಿತ್ ಶೆಟ್ಟಿ ಅವರಿಂದ ಈ ಆದೇಶ ಹೊರಬಿದ್ದಿದ್ದು, ಕೇವಲ ನಟ ದರ್ಶನ್ ಗೆ ಮಾತ್ರ ಷರತ್ತು ಸಡಿಸಿಲಿ ಹೈಕೋರ್ಟ್ ಆದೇಶಿಸಿದೆ .. ಸಿನಿಮಾ ನಟನಾಗಿದ್ದು ಚಿತ್ರಿಕರಣಕ್ಕಾಗಿ ಬೆಂಗಳೂರು ಬಿಟ್ಟು ಬೇರೆಡೆ ಹೋಗಲು ಅವಕಾಶಕ್ಕೆ ಮನವಿ ಮಾಡಿದ್ದ ದರ್ಶನ್ ಅವರಿಗೆ ಸದ್ಯ ಬೆಂಗಳೂರು ಬಿಟ್ಟು ಹೋಗಲು ಹೈಕೋರ್ಟ್ ಅವಕಾಶ ನೀಡಿದೆ. ಈ ಮೂಲಕ ಸ್ವತಃ ನಟ ದರ್ಶನ್‌ಗೆ ಮಾತ್ರವಲ್ಲದೇ ಅವರನ್ನು ನಂಬಿ ಬಹಳಷ್ಟು ಕೋಟಿ ಬಂಡವಾಳ ಹೂಡಿದ್ದ ನಿರ್ಮಾಪಕರಿಗೆ ಈಗ ನಿರಾಳತೆ ಅನುಭವ ಆಗಿದೆ.
ದರ್ಶನ್-ರಚಿತಾ ರಾಮ್ ಕೂಡ ಇದೇ ಕೆಟಗರಿಗೆ ಸೇರಿದವ್ರು.. ಇವ್ರೆಲ್ಲಾ ಒಂದೇ ಥರದವ್ರು ನೋಡಿ..!
ಆದರೆ, ವಿದೇಶಕ್ಕೆ ಹೊಗಲು ಸೆಷನ್ಸ್ ಕೋರ್ಟ್ ಅನುಮತಿ ಅಗತ್ಯ ಎನ್ನಲಾಗಿದೆ. ವಿಚಾರಣೆ ವೇಳೆ ಸಿನಿಮಾ ಶೂಟಿಂಗ್ ವಿಚಾರ ಪ್ರಸ್ತಾಪಿಸಿದ್ದ ದರ್ಶನ್ ವಕೀಲರು, 8 ವಾರಗಳ ಹಿಂದೆ ನಿಲ್ಲಲು ಸಾಧವಿಲ್ಲ ಎಂದು ಹೇಳಿದ್ರು. ಈಗ ಸಿನಿಮಾ ಶೂಟಿಂಗ್ ಗಾಗಿ ಅವಕಾಶ ಕೇಳುತ್ತಿರುವುದು ಸರಿಯಲ್ಲ ಎಂದು ಎಸ್ಪಿಪಿ ಆಕ್ಷೇಪಿಸಿದ್ರು.. ಅಂತಿಮವಾಗಿ ಷರತ್ತು ಸಡಿಸಿಲಿ ಹೈಕೋರ್ಟ್ ಆದೇಶ ನೀಡಿದೆ. ಇದೀಗ, ಅರ್ಧಕ್ಕೆ ನಿಂತಿರುವ ಮಿಲನಾ ಪ್ರಕಾಶ್ ನಿರ್ದೇಶನದ 'ದಿ ಡೆವಿಲ್' ಚಿತ್ರದ ಶೂಟಿಂಗ್ ಮುಂದುವರೆಯುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.
ಸದ್ಯ ನಟ ದರ್ಶನ್ ಬೆನ್ನುನೋವು ಮಾತ್ರವಲ್ಲದೇ ಕಾಲು ನೋವಿನಿಂದ ಕೂಡ ಬಳಲುತ್ತಿದ್ದಾರೆ. ನಿನ್ನೆ, ಅಂದರೆ 27 ಫೆಬ್ರವರಿ 205 ರಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತಾಯಿ ಚಾಮುಂಡೇಶ್ವರಿ ದರ್ಶನ ಮಾಡಲು ಹೋಗಿದ್ದ ವೇಳೆ, ದರ್ಶನ್ ಕುಂಟುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಶೂಟಿಂಗ್‌ನಲ್ಲಿ ಆಕ್ಷನ್ ದೃಶ್ಯಗಳಲ್ಲಿ ಭಾಗಿಯಾಗಲು ನಟ ದರ್ಶನ್‌ಗೆ ಇನ್ನೂ ಸಾಕಷ್ಟು ಸಮಯ ಹಿಡಯಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹುಚ್ಚ ವೆಂಕಟ್‌ಗೆ ಅಣ್ಣಾವ್ರ ಟಿಪ್ಸ್.. ಮತ್ತೆ ಬಂದ ವೆಂಕ; ವಿಡಿಯೋ ನೋಡಿದ್ರೆ ತಲೆ ಸುತ್ತಿ ಬೀಳಲ್ಲ ಬಿಡಿ..!
ಒಟ್ಟಿನಲ್ಲಿ, ಸದ್ಯ ಆರೋಗ್ಯದಲ್ಲಿ ಬಹುಬೇಗ ಸಾಕಷ್ಟು ಸುಧಾರಣೆ ಆಗಿಬಿಟ್ಟರೆ ನಟ ದರ್ಶನ್ ಮತ್ತೆ ಎಂಟು ತಿಂಗಳ ಬಳಿಕ ಶೂಟಿಂಗ್‌ಗೆ ಸೆಟ್‌ಗೆ ಹಾಜರಾಗಲಿದ್ದಾರೆ. 2023ರಲ್ಲಿ ಬಿಡುಗಡೆಯಾಗಿದ್ದ ಕಾಟೇರ ಸೂಪರ್ ಸಕ್ಸಸ್ ಸಿನಿಮಾ ಬಳಿಕ ಅವರ ಅಭಿಮಾನಿಗಳು ಡೆವಿಲ್ ಸಿನಿಮಾ ತೆರೆಯಲ್ಲಿ ನೋಡಲು ಕಾಯುತ್ತಿದ್ದಾರೆ. ಸದ್ಯವೇ ಈ ಡೆವಿಲ್ ಶೂಟಿಂಗ್ ಮುಂದುವರೆದರೆ ಈ ವರ್ಷದ ಅಂತ್ಯದೊಳಗೆ ಆ ಸಿನಿಮಾ ತೆರೆಗೆ ಬಂದು ಡಿ ಬಾಸ್ ಅಭಿಮಾನಿಗಳಿಗೆ ಖುಷಿ ಕೊಡಬಹುದು.
