ಹುಚ್ಚ ವೆಂಕಟ್ ಪ್ರಶ್ನೆಗೆ ಡಾ ರಾಜ್‌ಕುಮಾರ್ ಉತ್ತರ ಹೀಗಿದೆ: 'ಎಂಥಾ ಮಾತು ಹೇಳ್ಬಿಟ್ರಿ ವೆಂಕಟ್.. ಒಂದು ವಿಷ್ಯ ತಿಳ್ಕೊಳೀ.. ನೀವೊಬ್ರೇ ಈ ಸಮಸ್ಯೆ ಎದಿರಿಸ್ತಾ ಇಲ್ಲ.. ಜನ್ರ ಮೆಚ್ಚುಗೆ ಗಳಿಸೋದಕ್ಕೆ ತುಂಬಾ ಪ್ರಯತ್ನ ಮಾಡೋದು ಮುಖ್ಯ ಅಲ್ಲ.. ಅದ್ರ ಬದಲಿಗೆ..

ಇದು ಹುಚ್ಚ ವೆಂಕಟ್ (Huccha Venkat) ಹಾಗೂ ಡಾ ರಾಜ್‌ಕುಮಾರ್ (Dr Rajkumar) ಮಾತುಕತೆ: ಅಣ್ಣಾವ್ರೇ.. ನಾನು ಜನ್ರನ್ನ ಎಷ್ಟು ಪ್ರೀತಿಸ್ತೀನಿ ಅಂತ ಗೊತ್ತಾ ನಿಮ್ಗೆ? ಆದ್ರೂ ಕೂಡ ಜನ್ರು ನನ್ನನ್ನು ಇಷ್ಟಪಡ್ತಾ ಇಲ್ಲ.. ನಾನ್ ಎಷ್ಟು ಕಷ್ಟಪಟ್ರೂ ಅವ್ರು ನನ್ನನ್ನ ಸುಲಭವಾಗಿ ಒಪ್ಕೊಳ್ತಾ ಇಲ್ಲ.. ನಾನ್ ಏನ್ ತಪ್ ಮಾಡಿದೀನಿ ಅಂತ ಗೊತ್ತಾಗ್ತಾನೇ ಇಲ್ಲ.. ಇದು ಏನಕ್ಕೆ ಅಂತ ಸ್ವಲ್ಪ ಹೇಳ್ತೀರಾ?.. ಅಥ್ ಆಯ್ತಾ' ಎಂದು ಬಿಗ್ ಬಾಸ್ ಖ್ಯಾತಿಯ ನಟ ಹುಚ್ಚ ವೆಂಕಟ್ ಕೇಳಿದ್ದಾರೆ. ಅದಕ್ಕೆ ನಟಸಾರ್ವಭೌಮ, ಗಾನ ಗಂಧರ್ವ ಡಾ ರಾಜ್‌ಕುಮಾರ್ ಉತ್ತರಿಸಿದ್ದಾರೆ. 

ಹುಚ್ಚ ವೆಂಕಟ್ ಪ್ರಶ್ನೆಗೆ ಡಾ ರಾಜ್‌ಕುಮಾರ್ ಉತ್ತರ ಹೀಗಿದೆ: 'ಎಂಥಾ ಮಾತು ಹೇಳ್ಬಿಟ್ರಿ ವೆಂಕಟ್.. ಒಂದು ವಿಷ್ಯ ತಿಳ್ಕೊಳೀ.. ನೀವೊಬ್ರೇ ಈ ಸಮಸ್ಯೆ ಎದಿರಿಸ್ತಾ ಇಲ್ಲ.. ಜನ್ರ ಮೆಚ್ಚುಗೆ ಗಳಿಸೋದಕ್ಕೆ ತುಂಬಾ ಪ್ರಯತ್ನ ಮಾಡೋದು ಮುಖ್ಯ ಅಲ್ಲ.. ಅದ್ರ ಬದಲಿಗೆ ಜನ್ರ ಮನಸ್ಸಿನ್ನ ಹೇಗೆ ಗೆಲ್ಲಬೇಕು ಅನ್ನೋದು ಮುಖ್ಯ...ಈವಾಗ ಇದನ್ನ ಸರಳವಾಗಿ ವಿವರಿಸ್ತೀನಿ ನೋಡಿ..' ಅಂತ ಮಾತು ಮುಂದುವರಿಸ್ತಾರೆ ಅಣ್ಣಾವ್ರು..

ಕಾರು ಕೇಳಿದ ಶಿವಣ್ಣಗೆ ಹೀಗೆ ಹೇಳಿದ್ದ ಅಪ್ಪು.. ಈಗ ಬೇಕಾ ಇವೆಲ್ಲಾ ಅಂದ್ರೂ ಯಾರೋ ಬಿಡ್ತಿಲ್ಲ..!

ಮೊದಲನೆಯದಾಗಿ, ನೀವು ಜನರ ಜೊತೆ ಮಾತನ್ನಾಡುವಾಗ ಅವರ ಬಾಡಿ ಲಾಂಗ್ವೇಜ್ ಗಮನಿಸಿ ಅದರಂತೆ ನೀವು ಕೂಡ ಸ್ವಲ್ಪ ಅನುಕರಣೆ ಮಾಡಿ.. ಇದ್ರಿಂದ ನೀವು ಮಾತನ್ನಾಡುತ್ತಿರುವ ವ್ಯಕ್ತಿಗೆ ನಿಮ್ಮ ಮೇಲೆ ನಂಬಿಕೆ ಉಂಟಾಗುತ್ತೆ.. ಜೊತೆಗೆ, ಸಾಧ್ಯ ಆದಾಗಲೆಲ್ಲಾ ಅವ್ರ ಹೆಸರನ್ನು ಹೆಚ್ಚುಹೆಚ್ಚು ಬಳಸಿಕೊಂಡು ಮಾತನ್ನಾಡಿ.. ಯಾರೇ ಆಗ್ಲಿ ತಮ್ಮ ಹೆಸರನ್ನು ಕೇಳಿದಾಗ ನಿಮ್ಮ ಮಾತನ್ನು ಹೆಚ್ಚು ಆಲಿಸುತ್ತಾರೆ.. ಜೊತೆಗೆ ನೀವು ಅವ್ರಿಗೆ ಇಷ್ಟ ಆಗ್ಬಿಡ್ತೀರಾ.. ಗೊತ್ತಾಯ್ತಾ ವೆಂಕಾ...?

ಮೂರನೆಯದು, ನಿಜವಾಗಿ ಅವ್ರ ಬಗ್ಗೆ ಕಾಂಪ್ಲಿಮೆಂಟ್ ಮಾಡ್ಬೇಕು.. ಸಾಮಾನ್ಯ ಕಾಂಪ್ಲಿಮೆಂಟ್ ಬದಲಿಗೆ ವಿಶೇಷವಾದ ಹಾಗೂ ಪ್ರಾಮಾಣಿಕವಾದ ಹೊಗಳಿಕೆ ಮಾಡ್ಬೇಕು.. ನಿಮ್ಮ ಕೆಲಸ ನನಗೆ ಇಷ್ಟ ಆಯ್ತು, ನಿಮ್ಮ ಧೈರ್ಯ್ ನನಗೆ ಸ್ಪೂರ್ತಿ ತುಂಬಿದೆ ಅಂತ ಹೇಳ್ಬೇಕು.. 

ಕತ್ರಿನಾರನ್ನು ವಿಕ್ಕಿ ಕೌಶಲ್ ಲವ್ ಮಾಡಿ ಮದ್ವೆ ಆಗಿದ್ದಲ್ಲ, ಮದ್ವೆ ಆಗೋರನ್ನೇ Love ಮಾಡಿದ್ದು: ಸೀಕ್ರೆಟ್ ಇಲ್ಲಿದೆ..!

ನಾಲ್ಕನೆಯದಾಗಿ, ಅವ್ರ ಮಾತನ್ನು ಸಕ್ರಿಯವಾಗಿ, ಅಂದ್ರೆ ತುಂಬಾ ಗಮನವಿಟ್ಟು ಕೇಳ್ಬೇಕು.. ಮಧ್ಯೆ ಮಧ್ಯೆ ತಲೆ ಅಲ್ಲಾಡಿಸಬೇಕು, ಅವ್ರ ಮಾತಿಗೆ ವಾಪಸ್ ನಾವು ಪ್ರತಿಕ್ರಿಯೆ ನೀಡುವಾಗ ಯಾವುದೇ ಕೃತಕತೆ ಇಲ್ಲದೇ ಪ್ರತಿಕ್ರಿಯೆ ನೀಡಬೇಕು.. ಇದ್ರಿಂದ ಜನ್ರಿಗೆ ನಿಮ್ಮ ಮೇಲೆ ನಂಬಿಕೆ, ಪ್ರೀತಿ ಹುಟ್ಟುತ್ತೆ.. ಅವ್ರ ಮಾತಿಗೆ ನೀವು ಬೆಲೆ ಕೊಟ್ಟಿದ್ದು ನೋಡಿ ಅವ್ರೇ ನಿಮ್ಮ ಹತ್ರ ಬಂದುಬಿಡ್ತಾರೆ..' 

ಹೀಗೆ ಹುಚ್ಚ ವೆಂಕಟ್‌ಗೆ ಕನ್ನಡದ ಕಣ್ಮಣಿ ಡಾ ರಾಜ್‌ಕುಮಾರ್ ಅವ್ರು ಟಿಪ್ಸ್ ಕೊಡುವ ವಿಡಿಯೋ ಒಂದು ಯೂಟ್ಯೂಬ್‌ನಲ್ಲಿ ವೈರಲ್ ಆಗ್ತಿದೆ. ಇದನ್ನು ನೋಡಿದ ಹಲವರು 'ಅಣ್ಣಾವ್ರಿಗೆ ಜೈ' ಎಂದು ಕಾಮೆಂಟ್ ಹಾಕಿದ್ದಾರೆ. ಕೆಲವರು ಲೈಟಾಗಿ ಹುಚ್ಚ ವೆಂಕಟ್ ಕಾಲೆಳೆದಿದ್ದಾರೆ. ಇನ್ನೂ ಕೆಲವರು ಸ್ವಲ್ಪ ಮುಂದಕ್ಕೆ ಹೋಗಿ ಹುಚ್ಚ ವೆಂಕಟ್‌ಗೆ ಬುದ್ಧಿ ಕಲಿಸೋಕೆ ಅಣ್ಣಾವ್ರ ಬಿಟ್ರೆ ಇನ್ಯಾರಿಗೆ ಸಾಧ್ಯ? ಚೆನ್ನಾಗಿದೆ, ಒಳ್ಳೇ ಐಡಿಯಾ..' ಅಂತ ಕಾಮೆಂಟ್ ಮಾಡಿದ್ದಾರೆ. 

ಮೀಸೆ ತೆಗೆದು ರೋಡಿಗಿಳಿದ ಚಂದನ್ ಶೆಟ್ಟಿಗೆ ಟಾನಿಕ್ ಸಿಕ್ತು.. ಯಾಕಂತೀರಾ? ಇಲ್ನೋಡ್ರೀ ಸ್ವಾಮೀ..! 

'ಅಪರಿಮಿತ ವರ್ಲ್ಡ್‌' ಹೆಸರಿನ ಈ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ವಿಡಿಯೋ ಪೋಸ್ಟ್ ಆಗಿದ್ದು ಅದೀಗ ಭಾರೀ ಸೌಂಡ್ ಮಾಡುತ್ತಿದೆ. ಈ ವಿಡಿಯೋ ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡ್ಬೇಕು ಅನ್ನೋ ತರ ಆಗ್ತಿದೆ.. ಒಮ್ಮೆ ನೀವೂ ನೋಡಿ, ಆಮೇಲೆ ಮತ್ತೊಮ್ಮೆ ಹೇಗೂ ನೋಡೇ ನೋಡ್ತೀರಾ..


ಜನರ ಮೆಚ್ಚುಗೆಯನ್ನು ಗಳಿಸಲು ಬೇಕಾದ ನಾಲ್ಕು ಸೂತ್ರಗಳು.(ಡಾ:ರಾಜ್‌ ಮತ್ತು ಹುಚ್ಚವೆಂಕಟ್)