ಕನ್ನಡ ಹಾಗೂ ತಮಿಳು ಚಿತ್ರದಲ್ಲಿ ಡಿಂಗ್ರಿ ನಾಗರಾಜ್‌ ಪುತ್ರ ರಾಜವರ್ಧನ್‌. ಮಾಸ್‌ ಹೀರೋ ಆಗುವುದರಲ್ಲಿ ಡೌಟೇ ಇಲ್ಲ...

ಸ್ಯಾಂಡಲ್‌ವುಡ್‌ ಸ್ಟಾರ್‌ ಲಿಸ್ಟ್‌ ಸೇರ್ಪಡೆಯಾಗುತ್ತಿರುವ ಡಿಂಗ್ರಿ ನಾಗರಾಜ್‌ ಅವರ ಪುತ್ರ ರಾಜವರ್ಧನ್‌ ದ್ವಿಭಾಷಾ ಚಿತ್ರಕ್ಕೆ ಸಹಿ ಮಾಡಿದ್ದಾರೆ. ನಟಿ ಹರಿಪ್ರಿಯಾ ಜೊತೆ 'ಬಿಚ್ಚುಗತ್ತಿ' ನಂತರ ಎಲ್ಲಿಯೂ ಕಾಣಿಸಿಕೊಳ್ಳದ ರಾಜ 'ಪ್ರೊಡಕ್ಷನ್‌ 1' ಶೀರ್ಷಿಕೆ ಇರೋ ಪೋಸ್ಟರ್ ಲುಕ್ ರಿವೀಲ್ ಮಾಡಿದ್ದಾರೆ.

ಡಿಂಗ್ರಿ ನಾಗರಾಜ್‌ ಪುತ್ರ ರಾಜವರ್ಧನ್‌ ಕಮಾಲ್‌; 'ಬಿಚ್ಚುಗತ್ತಿ' ಬಗ್ಗೆ ನೀವೇ ಕೇಳಿ!

'ನನ್ನ ಮುಂದಿನ ಚಿತ್ರದ ಫಸ್ಟ್ ಲುಕ್. ಬಿಚ್ಚುಗತ್ತಿ ಯಶಸ್ಸಿನ ನಂತರ ನಾನು ಈ ಸಿನಿಮಾ ಒಪ್ಪಿಕೊಂಡಿರುವೆ. ತುಂಬಾನೇ ಫ್ರೆಶ್‌ ಲುಕ್‌. ಹೊಸ ಟ್ರ್ಯಾನ್ಸ್‌ಫಾರ್ಮೇಶನ್. ಟೈಟಲ್‌ ಶೀಘ್ರದಲ್ಲಿಯೇ ರಿವೀಲ್ ಮಾಡಲಾಗುತ್ತದೆ. ದಯವಿಟ್ಟು ನೀವೆಲ್ಲರೂ ಪ್ರೋತ್ಸಾಹಿಸಬೇಕು' ಎಂದು ಬರೆದುಕೊಂಡಿದ್ದಾರೆ.

View post on Instagram

Massive Star ರಾಜವರ್ಧನ್‌ ಎರಡನೇ ಚಿತ್ರ ಏಕಕಾಲಕ್ಕೆ ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್‌ ಆಗುತ್ತಿದೆ. ಕುಮಾರೇಶ್ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರಕ್ಕೆ ರೆಡ್‌ ಡೈಮೆಂಡ್‌ ಪ್ರೊಡಕ್ಷನ್‌ ಬಂಡವಾಳ ಹಾಕುತ್ತಿದೆ. ಚಿತ್ರದ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲವಾದರೂ ಪೋಸ್ಟರ್‌ನಲ್ಲಿ 'ಅತಿದೊಡ್ಡ ಹಗರಣ ಆಧರಿಸಿದ ಸಿನಿಮಾ' ಎಂದು ಹೇಳಲಾಗಿದೆ. ಚಿತ್ರತಂಡ ಸದ್ಯದಲ್ಲೇ ಟೀಸರ್‌ ಲಾಂಚ್‌ ಮಾಡಬೇಕೆಂದು ಪ್ಲಾನ್‌ ಮಾಡುತ್ತಿದೆ.

ಚಿತ್ರ ವಿಮರ್ಶೆ: ಬಿಚ್ಚುಗತ್ತಿ 

ರಾಮಾಯಣವನ್ನು ರಾವಣನ ಮೂಲಕ ನೋಡಿದರೆ ಹೇಗಿರುತ್ತದೆ, ಗೌತಮ ಬುದ್ಧನ ಅಹಿಂಸೆಯನ್ನು ಅಂಗುಲಿಮಾಲನ ದೃಷ್ಟಿಕೋನದಲ್ಲಿ ನೋಡಿದಾಗ ಏನನ್ನಿಸುತ್ತದೆ, ಹಾಗೆ ಚರಿತ್ರೆಯಲ್ಲಿ ವಿಲನ್‌ಗಳು ಎಂದು ಕರೆಯಿಸಿಕೊಂಡವರ ನೆರಳಿನಲ್ಲಿ ಆ ದಿನಗಳ ಕಥೆಗಳನ್ನು ಓದಿದಾಗ ಎಂಥ ರೋಚಕ ಮೂಡತ್ತದೆ ಎಂಬುದಕ್ಕೆ ಬಿ.ಎಲ್.ವೇಣು ಅವರ 'ದಳವಾಯಿ ದಂಗೆ' ಕಾದಂಬರಿ ಉದಾಹಣೆ. ಇಂಥದ್ದೇ ಕಥೆಯಾಧಾರಿತ ಚಿತ್ರ ಬಿಚ್ಚುಗತ್ತಿಯಾಗಿತ್ತು. ರಾಜವರ್ಧನ್ ಅವರ ಈ ಚಿತ್ರ ಹೇಗಿರುತ್ತೋ ನೋಡಬೇಕು.