'ಪ್ರೀತಿಸುವ ಫ್ಯಾನ್‌ಗಳಿರುವಾಗ ಗೌರವಿಸದವರ ಅನುಮೋದನೆ ಏಕೆ ಬೇಕು?' ಬರ್ತ್‌ಡೇ ದಿನ ಭೂಮಿ ಶೆಟ್ಟಿ ಟಾಂಗ್ ಕೊಟ್ಟಿದ್ದು ಯಾರಿಗೆ?
ಫೆಬ್ರವರಿ 20ರಂದು ನಟಿ ಭೂಮಿ ಶೆಟ್ಟಿಯ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ. ಈ ಪೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಆಕೆ, ಅಭಿಮಾನಿಗಳ ಬಗ್ಗೆ ಚೆಂದದ ಟಿಪ್ಪಣಿ ಬರೆದಿದ್ದಾರೆ.
ಫೆಬ್ರವರಿ 20ರಂದು ನಟಿ ಭೂಮಿ ಶೆಟ್ಟಿಯ ಹುಟ್ಟುಹಬ್ಬ. ಈ ದಿನ ಬಿಳಿ ವರ್ಲಿ ಡಿಸೈನ್ ಹೊಂದಿರುವ ಕಪ್ಪು ಸೀರೆ ಉಟ್ಟಿರುವ ಭೂಮಿ ಅದಕ್ಕೆ ಕೆಂಪು ಸ್ಲೀವ್‌ಲೆಸ್ ಬ್ಲೌಸ್ ಮ್ಯಾಚ್ ಮಾಡಿದ್ದಾರೆ. ತಲೆಗೆ ಕಿರೀಟ ಧರಿಸಿ ಕೇಕ್ ಕಟ್ ಮಾಡುತ್ತಿರುವ ಕುಂದಾಪುರ ಬೆಡಗಿಯ ಬರ್ತ್‌ಡೇಯನ್ನು ಆಕೆಯ ಫ್ಯಾನ್‌ಗಳೇ ಆಚರಿಸಿದ್ದು, ಭೂಮಿಯ ಖುಷಿಯನ್ನು ಇಮ್ಮಡಿಗೊಳಿಸಿದೆ.
ಇದೇ ಉತ್ಸಾಹದಲ್ಲಿ ಹುಟ್ಟುಹಬ್ಬದ ಫೋಟೋಗಳನ್ನು ಹಂಚಿಕೊಂಡಿರುವ ಭೂಮಿ, ಅಭಿಮಾನಿಗಳಿಗಾಗಿ ಕೆಲ ಸಾಲುಗಳನ್ನು ಬರೆದು ತಮ್ಮ ಕೃತಜ್ಞತೆ ಹೇಳಿದ್ದಾರೆ.
'ಜನ್ಮದಿನದ ವೈಬ್ಸ್ ಜೋರಾಗಿದೆ. ನನ್ನ ಅದ್ಭುತ ಫ್ಯಾನ್ಸ್‌ಗೆ ಧನ್ಯವಾದಗಳು! ಅವರ ಉತ್ಸಾಹದ ಮಟ್ಟ ಎಷ್ಟು ಹೆಚ್ಚಿತ್ತೆಂದರೆ ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ವಿಶೇಷವಾಗಿ ಆಚರಿಸಲಾಯಿತು. ನಿಜವಾದ ಪ್ರೀತಿಯನ್ನು ತೋರಿಸುವ ಜನರ ಗುಂಪೇ ಇರುವಾಗ ನಮ್ಮನ್ನು ಗೌರವಿಸದವರಿಂದ ಏಕೆ ಅನುಮೋದನೆ ಪಡೆಯಬೇಕು? ಎಂಬ ಯೋಚನೆ ನನ್ನನ್ನು ತಟ್ಟಿತು. ನನ್ನ ಹುಟ್ಟುಹಬ್ಬವನ್ನು ನಾನು ಎಂದೆಂದಿಗೂ ನೆನಪಿಡುವ ಆಚರಣೆಯನ್ನಾಗಿ ಪರಿವರ್ತಿಸಿದ್ದಕ್ಕಾಗಿ ನನ್ನ ಅಭಿಮಾನಿಗಳಿಗೆ ಧನ್ಯವಾದ. ಚೀರ್ಸ್ ಮತ್ತು ಕೇಕ್ ಜೊತೆಗೆ ಯಾವುದೇ ನಿರೀಕ್ಷೆ ಇಲ್ಲದೆ ನಮ್ಮನ್ನು ಬೆಂಬಲಿಸುವ ಮತ್ತು ಗೌರವಿಸುವವರಲ್ಲಿ ನಿಜವಾದ ಮೌಲ್ಯವಿದೆ ಎಂದು ನಾನು ಅರಿತುಕೊಂಡೆ. ಈ ಅಭಿಮಾನಿಗಳು ನನ್ನನ್ನು ರಾಕ್‌ಸ್ಟಾರ್ ಭಾವನೆ ಬರಿಸುವಂತೆ ಪಾರ್ಟಿ ನೀಡಿದರು. ನಿಮ್ಮೆಲ್ಲ ಪ್ರೀತಿಗಾಗಿ ಕೃತಜ್ಞತೆ. 🌟🎈Iloveyousso much' ಎಂದು ಭೂಮಿ ಬರೆದಿದ್ದಾರೆ.
ಇಂಗ್ಲಿಷ್ ಗೊತ್ತಿಲ್ಲದೆ ಪರದಾಡಿದ ಸುರಭಿ ಪಾಸಾಗಿದ್ದು UPSC ಮಾತ್ರವಲ್ಲ, ಗೇಟ್, ಬಾರ್ಕ್, ಇಸ್ರೋ, SAIL, SSC-CGL, IES..!
ಅಭಿನಯದ ವಿಷಯಕ್ಕೆ ಬಂದರೆ, ಭೂಮಿ ಶೆಟ್ಟಿ ಅಭಿನಯದ ಕೆಂಡದ ಸೆರಗು ಚಿತ್ರ ಸಿದ್ಧವಾಗಿದೆ. ಇದರಲ್ಲಿ ಕುಸ್ತಿಪಟು ಪಾತ್ರವನ್ನ ನಿರ್ವಹಿಸಿದ್ದು, ಇದಕ್ಕಾಗಿ ಆಕೆ ನಿಜವಾಗಿ ಕುಸ್ತಿ ಕಲಿತಿದ್ದಾರೆ. ಇನ್ನು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಭೂಮಿ, 'ಶರತಲು ವರ್ತಿಸ್ತಾಯಿ' ಅನ್ನೋ ಚಿತ್ರದಲ್ಲಿ ನಟಿಸಿದ್ದು, ಇದು ಬಿಡುಗಡೆಗೆ ಸಿದ್ಧವಾಗಿದೆ.