ಶಿವರಾಜ್‌ಕುಮಾರ್-ಶಿಲ್ಪಾ ಜೋಡಿಯ ಜನುಮದ ಜೋಡಿ ಚಿತ್ರವು ಬಾಕ್ಸ್‌ ಆಫೀಸ್‌ ಕಲೆಕ್ಷನ್ ದೃಷ್ಟಿಯಿಂದ ಮಾತ್ರವಲ್ಲ, ಇದು ಮ್ಯೂಸಿಕಲ್ ಹಿಟ್ ಸಿನಿಮಾ ಕೂಡ. ಈ ಚಿತ್ರದ ಹಾಡುಗಳು ತುಂಬಾ ಜನಪ್ರಿಯ ಆಗಿದ್ದವು. ಈಗಲೂ...

ಜನುಮದ ಜೋಡಿ ಶಿವರಾಜ್‌ಕುಮಾರ್ ಅವರ ಬ್ಲಾಕ್ ಬಸ್ಟರ್ ಚಿತ್ರ. ಅದರಲ್ಲಿ ಶಿವಣ್ಣನಿಗೆ ಜೋಡಿಯಾಗಿ ನಟಿ ಶಿಲ್ಪಾ (Shilpa) ನಟಿಸಿದ್ದಾರೆ. ಕೆಲವರಿಗೆ ಶಿಲ್ಪಾ ಅಂದ್ರೆ ಗೊತ್ತಾಗ್ಲಿಕ್ಕಿಲ್ಲ, ಅದ್ರೆ ಕನಕ ಅಂದ್ರೆ ಗೊತ್ತಾಗುತ್ತೆ.. ಅಷ್ಟರಮಟ್ಟಿಗೆ ಶಿಲ್ಪಾರ ಕನಕ ಪಾತ್ರ ಫೇಮಸ್ ಆಗಿತ್ತು. ಹೌದು, ಜನುಮದ ಜೋಡಿಯ (Janumada Jodi) ಕನಕ ಪಾತ್ರದಲ್ಲಿ ಅಕ್ಷರಶಃ ಜೀವಿಸಿದಂತೆ ನಟಿಸಿದ್ದಾರೆ ಈ ಶಿಲ್ಪಾ. ಆ ಬಳಿಕ ಕೂಡ ಅವರು ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಮುಂಗಾರಿನ ಮಿಂಚು, ಧರ್ಮ ದೇವತೆ, ಭೂಮಿತಾಯಿಯ ಚೊಚ್ಚಲು ಮಗ ಹೀಗೆ ಸಾಲು ಸಾಲು ಚಿತ್ರಗಳು. ಕನ್ನಡದಲ್ಲಿ ಪಾಂಡವ ನಟಿ ಶಿಲ್ಪಾರ ಕೊನೆಯ ಚಿತ್ರ. 

Add Asianetnews Kannada as a Preferred SourcegooglePreferred

ಅಂತಹ ಖ್ಯಾತ ನಟಿ ಶಿಲ್ಪಾ ಈಗೇನು ಮಾಡುತ್ತಿದ್ದಾರೆ? ಬಹಳಷ್ಟು ಸಿನಿಮಾ ಪ್ರೇಮಿಗಳಿಗೆ ಈ ಕುತೂಹಲ ಸಹಜ. ಶಿಲ್ಪಾ ಅವರು 2004ರಲ್ಲಿ ಕನ್ನಡದಲ್ಲಿ ಪಾಂಡವ ಸಿನಿಮಾದಲ್ಲಿ ನಟಿಸಿದ್ದೇ ಲಾಸ್ಟ್ . ಆ ಬಳಿಕ ಅವರು ಮಲಯಾಳಂನ ಖ್ಗಯಾತ ನಿರ್ಮಾಪಕ ಎಂ ರಂಜಿತ್ ಅವರನ್ನು ವಿವಾಹವಾದರು. ಧಾರಾವಾಹಿ ಹಾಗೂ ದೂರದರ್ಶನದಲ್ಲಿ ಸಹ ನಟಿಸುತ್ತಿದ್ದರು ಈ ಶಿಲ್ಪಾ. ಬಳಿಕ, ಸ್ವಂ ನಿರ್ಮಾಣ ಸಂಸ್ಥೆಯ ಮೂಲಕ ಮಲಯಾಳಂ ಸಿನಿಮಾ ನಿರ್ಮಾಣವನ್ನೂ ಸಹ ಮಾಡಿದ್ದಾರೆ. ಕೇರಳದಲ್ಲಿ ಸೆಟ್ಲ್ ಆಗಿದ್ದಾರೆ.

'ರಾಜ್‌ ಲೀಲಾ ವಿನೋದ' ಬಗ್ಗೆ ನೇರವಾಗಿ ಶಿವಣ್ಣಗೇ ಪ್ರಶ್ನೆ: ಸಿಕ್ಕ ಉತ್ತರವೇ ಅಂತಿಮ ಸತ್ಯ, ದೂಸ್ರಾ ಮಾತಿಲ್ಲ!

ಆದ್ರೆ, ಸಿನಿಮಾ ನಿರ್ಮಾಣ ಶಿಲ್ಪಾರ ಪ್ರೊಡಕ್ಷನ್‌ ಹೌಸ್‌ಗೆ ಸಿಕ್ಕಾಪಟ್ಟೆ ನಷ್ಟ ತಂದಿಟ್ಟಿತು. ಬಳಿಕ ಅವರು ಸಿನಿಮಾ ಬದಲು ಸೀರಿಯಲ್ ನಿರ್ಮಾಣಕ್ಕೆ ಇಳಿದರು. ಅದು ಶಿಲ್ಪಾ-ರಂಜಿತ್ ಜೋಡಿಯ ಕೈ ಹಿಡಿಯಿತು. ಈ ಜೋಡಿಯ ನಿರ್ಮಾಣ ಸಂಸ್ಥೆ ಹೆಸರು ಆವಂತಿಕಾ ಕ್ರಿಯೇಷನ್ಸ್. ಇದು ಅವರಿಬ್ಬರ ಮಗಳ ಹೆಸರು! ಗಂಡ ನಿರ್ದೇಶನದಲ್ಲಿ ಬ್ಯುಸಿ ಆಗಿದ್ದಾಗ ಹೆಂಡತಿ ಶಿಲ್ಪಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಮಲಯಾಳಂನ ಎರಡು ಸೀರಿಯಲ್‌ಗಳು ಅವರ ಕೈ ಹಿಡಿಯಿತು. ಹೀಗೆ, ಮೊದಲು ನಟಿಯಾಗಿದ್ದ ಶಿಲ್ಪಾ ಈಗ ನಿರ್ಮಾಪಕಿಯಾಗಿದ್ದಾರೆ. 

ಶಿವರಾಜ್‌ಕುಮಾರ್-ಶಿಲ್ಪಾ ಜೋಡಿಯ ಜನಿಮದ ಜೋಡಿ ಚಿತ್ರವು ಬಾಕ್ಸ್‌ ಆಫೀಸ್‌ ಕಲೆಕ್ಷನ್ ದೃಷ್ಟಿಯಿಂದ ಮಾತ್ರ ಸೂಪರ್ ಹಿಟ್ ಚಿತ್ರವಲ್ಲ. ಇದು ಮ್ಯೂಸಿಕಲ್ ಹಿಟ್ ಸಿನಿಮಾ ಕೂಡ. ಈ ಚಿತ್ರದ ಹಾಡುಗಳು ತುಂಬಾ ಜನಪ್ರಿಯ ಆಗಿದ್ದವು. ಈಗಲೂ ಕೂಡ ಕನ್ನಡ ಸಿನಿಪ್ರೇಮಿಗಳು ಈ ಚಿತ್ರದ ಹಾಡುಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಈ ಚಿತ್ರದಲ್ಲಿ ನಟಿ ಪವಿತ್ರಾ ಲೋಕೇಶ್ ಅವರು ಇದೇ ಶಿಲ್ಪಾರ ಸ್ನೇಹಿತೆ ಪಾತ್ರದಲ್ಲಿ ನಟಿಸಿದ್ದಾರೆ. ಅಂದಹಾಗೆ ಈ ಚಿತ್ರವು 1996ರಲ್ಲಿ ತೆರೆಗೆ ಬಂದಿತ್ತು. 
ಹೆಚ್‌ಡಿ ಕುಮಾರಸ್ವಾಮಿ ಮಾತು ಭಾರೀ ವೈರಲ್, ಅಣ್ಣಾವ್ರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೇಳಿದ್ದೇನು?