‘ಭಾವಚಿತ್ರ’ ಚಿತ್ರದ ಆಡಿಯೋ ಬಿಡುಗಡೆ ಟ್ರೇಲರ್‌ಗೆ ತುಂಬಾ ಒಳ್ಳೆಯ ರೆಸ್ಪಾನ್ಸ್
ಚಕ್ರವರ್ತಿ ಹಾಗೂ ಗಾನವಿ ಲಕ್ಷ್ಮಣ್ ನಟನೆಯ ‘ಭಾವಚಿತ್ರ’(Bhavachithra) ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಗಿರೀಶ್ ಕುಮಾರ್(Girish Kumar) ಈ ಚಿತ್ರವನ್ನು ನಿರ್ದೇಶಿಸಿದ್ದು, ಇದೊಂದು ಥ್ರಿಲ್ಲರ್ ಜಾನರ್ ಸಿನಿಮಾ. ‘ಈ ಹಿಂದೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದಾಗ ತುಂಬಾ ಒಳ್ಳೆಯ ರೆಸ್ಪಾನ್ಸ್ ಬಂತು. ಅದೇ ಉತ್ಸಾಹದಲ್ಲಿ ಆಡಿಯೋ ಬಿಡುಗಡೆ ಮಾಡುತ್ತಿದ್ದೇವೆ. ಈ ಹಾಡುಗಳು ಟ್ರೇಲರ್‌ನಂತೆಯೇ ಪ್ರೇಕ್ಷಕರಿಗೆ ಮೆಚ್ಚುಗೆ ಆಗುತ್ತವೆಂಬ ನಂಬಿಕೆ ಇದೆ. ಹಾಡು ನೋಡಬೇಕೆಂದು ರಾಜೇಶ್ ಕೃಷ್ಣನ್ ಅವರೇ ಬಂದಿದ್ದು ನಮ್ಮ ಖುಷಿಗೆ ಮತ್ತೊಂದು ಕಾರಣ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಫೋಟೋಗ್ರಫಿ ಹಾಗೂ ಪ್ರೀತಿ ಇವೆರಡನ್ನೂ ಒಟ್ಟಿಗೆ ತೆರೆ ಮೇಲೆ ತೋರಿಸುವ ಪ್ರಯತ್ನ ಇಲ್ಲಿದೆ. ಒಂದು ಚೆಂದದ ಭಾವಚಿತ್ರದಂತೆಯೇ ಇಡೀ ಸಿನಿಮಾ ಮೂಡಿ ಬಂದಿದೆ’ ಎಂದು ಗಿರೀಶ್ ಕುಮಾರ್ ಹೇಳಿಕೊಂಡರು.
ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಫೋಟೋಗ್ರಫಿಯಲ್ಲಿ ಆಸಕ್ತಿ ಬೆಳೆಸಿಕೊಂಡು, ಆತ ತನಗೆ ಇಷ್ಟವಾದದ್ದನ್ನು ಫೋಟೋ ತೆಗೆಯುತ್ತಾ ಹೋಗುತ್ತಾನೆ. ಹಾಗೆ ಫೋಟೋಗಳನ್ನು ತೆಗೆಯುವಾಗ ಆತನ ಜೀವನದಲ್ಲಿ ಕೆಲ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಆ ಘಟನೆಗಳು ಏನು, ಅವರು ಭಾವಚಿತ್ರಗಳಾಗಿ ಹೇಗೆ ಮೂಡುತ್ತಾರೆ ಎನ್ನುವ ಥ್ರಿಲ್ಲಿಂಗ್ ಅಂಶ ಕೂಡ ಚಿತ್ರದಲ್ಲಿದೆ. ‘ಯಾನ ಚಿತ್ರದ ನಂತರ ಮಾಡುತ್ತಿರುವ ಸಿನಿಮಾ ಇದು. ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಹಾಡುಗಳನ್ನು ತುಂಬಾ ಚೆನ್ನಾಗಿ ರೂಪಿಸಿದ್ದಾರೆ’ ಎಂದು ನಾಯಕ ಚಕ್ರವರ್ತಿ ಹೇಳಿಕೊಂಡರು. ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ, ಚಿತ್ರದ ನಟಿಸಿರುವ ಪ್ರಮುಖರಾದ ಪೂಜಾ ಭಟ್, ಜೆನ್ನಿಫರ್ ಚಿತ್ರದ ಕುರಿತು ಹೇಳಿಕೊಂಡರು. ರಾಜೇಶ್ ಕೃಷ್ಣನ್ ಚಿತ್ರತಂಡದ ಹಾಡುಗಳನ್ನು ನೋಡಿ ಮೆಚ್ಚಿದರು. ಶಂಕರ್, ಸಚಿನ್, ರತೀಶ್ ಕುಮಾರ್ ಈ ಚಿತ್ರದ ನಿರ್ಮಾಪಕರು.
ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್:
ಬಿಡುಗಡೆಗೆ ತಯಾರಿ ಮಾಡಿಕೊಂಡಿರುವ ‘ಭಾವಚಿತ್ರ’(Bhavachithra) ಚಿತ್ರದ ಟ್ರೇಲರ್ ಬಿಡುಗಡೆ ಇತ್ತೀಚೆಗೆ ನಡೆಯಿತು. ಚಕ್ರವರ್ತಿ, ಗಾನವಿ ಲಕ್ಷ್ಮಣ್ ನಟನೆಯ, ಗಿರೀಶ್ ಕುಮಾರ್ ನಿರ್ದೇಶನದ ಚಿತ್ರವಿದು. ವುಡ್‌ಕ್ರೇಪರ್ಸ್ ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.
ಟೆಕ್ನೋ ಥ್ರಿಲ್ಲರ್ ಸಿನಿಮಾ ತೆರೆಗೆ ಬರೋಕೆ ಸಿದ್ಧ
‘ಈ ಹಿಂದೆ ನಾನು ಆವಾಹಯಾಮಿ ಚಿತ್ರ ಮಾಡಿದ್ದೆ. ಭಾವಚಿತ್ರ ನನ್ನ ಎರಡನೇ ಸಿನಿಮಾ. ಇದು ಫೋಟೋಗ್ರಫಿ(Photography) ಮೇಲೆ ರೂಪಿಸಲಾಗಿರುವ ಕತೆ. ಇಡೀ ಚಿತ್ರ ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿ ಬಂದಿದೆ. ಭಾವನೆಗಳು, ಥ್ರಿಲ್ಲರ್ ಹಾಗೂ ಸೆಂಟಿಮೆಂಟ್ ಈ ಚಿತ್ರದ ಹೈಲೈಟ್. ಒಂದು ಭಾವಚಿತ್ರ ಹಾಗೂ ಅದನ್ನು ಸೆರೆ ಹಿಡಿಯುವ ಕ್ಯಾಮೆರಾ ಮೇಲೆ ಕತೆ ಸಾಗುತ್ತದೆ. ಟ್ರೇಲರ್‌ನಷ್ಟೇ ಸಿನಿಮಾ ಚೆನ್ನಾಗಿರುತ್ತದೆ’ ಎಂದು ನಿರ್ದೇಶಕ ಗಿರೀಶ್ ಕುಮಾರ್ ಹೇಳಿಕೊಂಡರು.
