* ಭಾರತ್ ಬಂದ್‌ಗೆ ಕನ್ನಡ ಚಿತ್ರರಂಗದಿಂದ ನೈತಿಕ ಬೆಂಬಲ* ಸಿನಿಮಾದ ಶೂಟಿಂಗ್, ಸಿನಿಮಾ ಪ್ರದರ್ಶನ ಸೇರಿದಂತೆ ಸಿನಿಮಾದ ಕೆಲಸಗಳು ಎಂದಿನಂತೆ ಇರುತ್ತೆ* ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಬಂದ್
ಬೆಂಗಳೂರು(ಸೆ. 26) ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಸೋಮವಾರ ಸೆ. 27 ರಂದು ಭಾರತ್ ಬಂದ್‌ಗೆ(Bharat Bandh) ಕರೆ ಕೊಟ್ಟಿದೆ. ಹಲವು ಸಂಘಟನೆಗಳು ತಮ್ಮಿಂದ ನೈತಿಕ ಬೆಂಬಲ ಮಾತ್ರ ಇದೆ ಎಂದು ತಿಳಿಸಿವೆ.
ದೇಶವ್ಯಾಪಿ ಬಂದ್ ಹಿನ್ನೆಲೆ ಕರ್ನಾಟಕ ಚಲನಚಿತ್ರರಂಗ(Sandalwood) ನೈತಿಕ ಬೆಂಬಲ ಘೋಷಿಸಿದೆ. ನಾವು ಯಾವುದೇ ಕೆಲಸ ಕಾರ್ಯ ನಿಲ್ಲಿಸುವುದಿಲ್ಲ. ಸಿನಿಮಾದ ಶೂಟಿಂಗ್, ಸಿನಿಮಾ ಪ್ರದರ್ಶನ ಸೇರಿದಂತೆ ಸಿನಿಮಾದ ಕೆಲಸಗಳು ಎಂದಿನಂತೆ ಇರುತ್ತೆ.. ಇಷ್ಟು ದಿನ ಸಿನಿಮಾದ ಯಾವ ಕೆಲಸವೂ ನಡೆದಿಲ್ಲ. ಮತ್ತೆ ಬಂದ್ ಮಾಡಿ ಕೂತುಕೊಂಡ್ರೆ ಕಷ್ಟ ಆಗುತ್ತೆ. ನಾವು ನೈತಿಕ ಬೆಂಬಲವನ್ನ ಮಾತ್ರ ಕೊಡುತ್ತೇವೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ತಿಳಿಸಿದ್ದಾರೆ.
ಒಂದೇ ದಿನ ಸಲಗ ಮತ್ತು ಕೋಟಿಗೊಬ್ಬ.. ದುನಿಯಾ ವಿಜಯ್ ನಂಬಿಕೆ!
ಭಾರತ್ ಬಂದ್ ಗೆ ಕರೆ ನೀಡಿದ್ದರೂ ಸಿನಿಮಾ ಪ್ರದರ್ಶನಗಳು ಎಂದಿನಂತೆ ಇರಲಿವೆ. ಇನ್ನೊಂದು ಕಡೆ ಸ್ಯಾಂಡಲ್ ವುಡ್ ಗೆ ರಾಜ್ಯ ಸರ್ಕಾರ ಶುಭ ಸುದ್ದಿ ಕೊಟ್ಟಿದೆ. ಅಕ್ಟೋಬರ್ 14 ರಂದು ಎರಡು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಹಲವು ದಿನಗಳ ಸಿನಿಪ್ರಿಯರ ಮತ್ತು ಸ್ಯಾಂಡಲ್‌ವುಡ್ ನ ಬೇಡಿಕೆಗೆ ಸರ್ಕಾರ ಕೊನೆಗೂ ಅಸ್ತು ಎಂದಿದ್ದು ಅಕ್ಟೋಬರ್ 1 ರಿಂದ ಚಿತ್ರಮಂದಿರಗಳಲ್ಲಿ ಶೇ. 100 ಹಾಜರಾತಿಗೆ ಅವಕಾಶ ನೀಡಲಾಗುತ್ತಿದೆ. ಅಕ್ಟೋಬರ್ 14 ರಂದು ಸಲಗ ಮತ್ತು ಕಿಚ್ಚ ಸುದೀಪ್ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗುತ್ತಿದ್ದು ಸಿನಿಪ್ರಿಯರಿಗೆ ಹಬ್ಬ ಇದೆ.
ದಸರಾ ರಜೆ ಕಾರಣಕ್ಕೆ ತೆರೆಗೆ ಚಿತ್ರಗಳು ಅಪ್ಪಳಿಸುತ್ತಿವೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಚಿತ್ರ ಸಹ ಅಕ್ಟೋಬರ್ 29 ರಂದು ಭಜರಂಗಿ 2 ರಿಲೀಸ್ ಆಗಲಿದೆ. ಸಿನಿ ಪ್ರಿಯರಿಗೆ ಅಕ್ಟೋಬರ್ ತಿಂಗಳು ಹಬ್ಬದ ಊಟ ಎಂದೇ ಹೇಳಬಹುದು.
