ಶಿವಣ್ಣನ ದೊಡ್ಡ ಮನಸ್ಸಿಗೆ ಧ್ರುವ ಸರ್ಜಾ ಫಿದಾ: ಮಾರ್ಟಿನ್ ಗೆ ದಾರಿ ಮಾಡಿಕೊಟ್ಟ ಬೈರತಿ ರಣಗಲ್
ಧ್ರುವ ಸರ್ಜಾ ಅವರ ಮಾರ್ಟಿನ್ ಸಿನಿಮಾಗೆ ದಾರಿ ಮಾಡಿಕೊಡಲು ಶಿವರಾಜ್ ಕುಮಾರ್ ಅವರ ಬೈರತಿ ರಣಗಲ್ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಧ್ರುವ ಅವರ ಕೋರಿಕೆಯ ಮೇರೆಗೆ ಶಿವಣ್ಣ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ನಟ ಪ್ರಥಮ್ ಹೇಳಿದ್ದಾರೆ.
ಬೆಂಗಳೂರು (ಸೆ.25): ನಮ್ಮ ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ ಮೂರು ವರ್ಷಗಳ ಕಾಲ ಸುಮಾರು 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಧ್ರುವ ಸರ್ಜಾ ಅವರ ಮಾರ್ಟಿನ್ ಸಿನಿಮಾ ರಾಜ್ಯ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಲು ಸಿದ್ಧವಾಗಿದೆ. ಹೀಗಾಗಿ, ನಟ ಶಿವರಾಜ್ ಕುಮಾರ್ ಅವರ ಬೈರತಿ ರಣಗಲ್ ಸಿನಿಮಾ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ನಟ ಒಳ್ಳೆ ಹುಡುಗ ಪ್ರಥಮ್ ಹೇಳಿದ್ದಾರೆ.
ಈ ಕುರಿತು ಸಿನಿಮಾ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ಪ್ರಥಮ್ ಅವರು, ರಾಜ್ಯದಲ್ಲಿ ನಟ ಶಿವರಾಜ್ ಕುಮಾರ್ ಅವರ ಬೈರತಿ ರಣಗಲ್ ಸಿನಿಮಾ ಸೆ.27ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿಯ ಒಪ್ಪಿಗೆ ಸಮಸ್ಯೆಯಿಂದಾಗಿ ಈ ಸಿನಿಮಾ ಬಿಡುಗಡೆ ದಿನಾಂಕ ಒಂದು ವಾರ ತಡವಾಗಿ ಅ.4ಕ್ಕೆ ಮುಂದೂಡಿಕೆ ಆಯಿತು. ಇದೇ ಅ.4ರಂದು ಬೈರತಿ ರಣಗಲ್ ಸಿನಿಮಾ ರಿಲೀಸ್ ಮಾಡಲು ಶಿವರಾಜ್ ಕುಮಾರ್ ಹಾಗೂ ಗೀತಕ್ಕ ಅವರು ಎಲ್ಲವನ್ನೂ ನಿಗದಿ ಮಾಡಿದ್ದರು. ಆದರೆ, ಕನ್ನಡದ ಬಿಗ್ ಬಜೆಟ್ ಸಿನಿಮಾ ಮಾರ್ಟಿನ್ ಇದೇ ಅ.11ರಂದು ರಿಲೀಸ್ ಆಗಲಿದ್ದು, ಶಿವಣ್ಣನ ಸಿನಿಮಾ ಬಂದರೆ ಥಿಯೇಟರ್ ಸಮಸ್ಯೆ ಕಾಡಬಹುದು ಎಂದು ಬೈರತಿ ರಣಗಲ್ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ. ಇದು ನಮ್ಮ ಶಿವಣ್ಣನ ಕನ್ನಡ ಪ್ರೇಮ ಹಾಗೂ ಕನ್ನಡ ಚಿತ್ರರಂಗದಲ್ಲಿರುವ ನಾಯಕತ್ವ ಗುಣ ಎಂದು ಪ್ರಥಮ್ ಹೊಗಳಿದರು. ಎಂದು ಮಾಹಿತಿ ನೀಡಿದರು.
2024ರಲ್ಲಿ ರಿಲೀಸ್ ಆಗಿ ಕನ್ನಡ ಚಿತ್ರರಂಗದ ಮರ್ಯಾದೆ ಉಳಿಸಲಿವೆಯೇ ಈ ಪ್ಯಾನ್ ಇಂಡಿಯಾ ಸಿನಿಮಾಗಳು?
ಒಂದು ಸಿಂಗಲ್ ಸಿನಿಮಾಕ್ಕೆ ಕನ್ನಡದಲ್ಲಿ 150 ಕೋಟಿ ರೂ. ಖರ್ಚು ಮಾಡಿದ್ದಾರೆ. ಮಾರ್ಟಿನ್ ಸಿನಿಮಾ ಹೀರೋ ಧ್ರುವ ಸರ್ಜಾ ಹಾಗೂ ಶಿವರಾಜ್ ಕುಮಾರ್ ಅವರ ಒಡನಾಡಕ್ಕೆ ಹೇಗಿದೆ ಎಂಬುದಕ್ಕೆ ಸಿನಿಮಾ ರಿಲೀಸ್ ದಿನಾಂಕ ಹೊಂದಾಣಿಕೆಯೇ ಸಾಕ್ಷಿ ಆಗುತ್ತಿದೆ. ಬೈರತಿ ರಣಗಲ್ ಸಿನಿಮಾ ಅ.4ರಂದು ರಿಲೀಸ್ ಆದರೆ, ಧ್ರುವ ಅವರ ದೊಡ್ಡ ಬಜೆಟ್ ಸಿನಿಮಾಗೆ ಆಗುವ ಸಮಸ್ಯೆ ಬಗ್ಗೆ ಹೇಳಿದೆ. ಆಗ ಧ್ರುವ ಕೂಡ ಶಿವಣ್ಣಗೆ ಕರೆ ಮಾಡಿ ಅಣ್ಣ ನಾನು ಮೂರು ವರ್ಷದಿಂದ ದೊಡ್ಡ ಬಜೆಟ್ ಹಾಕಿ ಸಿನಿಮಾ ಮಾಡಿದ್ದೇನೆ. ಈಗಾಗಲೇ ಅ.11ಕ್ಕೆ ರಿಲೀಸ್ ಮಾಡುವುದಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಲ್ಲ ರಾಜ್ಯಗಳಲ್ಲಿಯೂ ಅನೌನ್ಸ್ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳುತ್ತಾರೆ. ಇದಕ್ಕೆ ಶಿವಣ್ಣ ಹೌದಲ್ಲಮ್ಮಾ.., ಆದ್ರೆ ನಾನು ದಸರಾ ರಜೆ ಸಂದರ್ಭದಲ್ಲಿ ಅ.4ರಂದು ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದೆವು ಎಂದು ಹೇಳುತ್ತಾರೆ.
ಇದಾದ ನಂತರ ಉದಯ್ ಮೆಹ್ತಾ ಶಿವಣ್ಣನ ಬಳಿಗೆ ಬಂದು ಮಾತನಾಡಿಕೊಂಡು ಹೋಗುತ್ತಾರೆ. ಇದಾದ ಹತ್ತು ನಿಮಿಷದಲ್ಲಿ ಬೈರತಿ ರಣಗಲ್ ಸಿನಿಮಾದ ಬಿಡುಗಡೆ ದಿನಾಂಕ ಬದಲಾಗುತ್ತದೆ. ನಂತರ ಶಿವಣ್ಣ ಹಾಗೂ ಗೀತಕ್ಕ ಅವರು ಕುಳಿತುಕೊಂಡು ಮಾರ್ಟಿನ್ ಸಿನಿಮಾ ನಮ್ಮ ಧ್ರುವನದ್ದು ಅಲ್ವಾ, ಅ.4ರಂದು ಬೈರತಿ ರಣಗಲ್ ಬಿಡುಗಡೆ ಆದರೆ ಥಿಯೇಟರ್ ಸಮಸ್ಯೆ ಆಗಬಹುದು ಅಲ್ವಾ., ನಾನೇ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡ್ತೀನಿ ಎಂದು ಒಂದು ತಿಂಗಳ ಕಾಲ ಬೈರತಿ ರಣಗಲ್ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ ಮಾಡುತ್ತಾರೆ ಎಂದು ನಟ ಪ್ರಥಮ್ ಮಾಹಿತಿ ನೀಡಿದ್ದಾರೆ.
ಅಂದು ಶಿವಣ್ಣ ಫೋನ್ ಮಾಡಿ ಹೇಳಿದ್ದೇನು? DKD ವೇದಿಕೆಯಲ್ಲಿ ಕಣ್ಣೀರಿಟ್ಟ ನಟಿ ಛಾಯ ಸಿಂಗ್
ಇದೆಲ್ಲವೂ ನಡೆದಿದ್ದು ಕ್ಯಾರವಾನ್‌ನಲ್ಲಿ. ಶಕ್ತಿಧಾಮದಲ್ಲಿ ಬೈರತಿ ರಣಗಲ್ ಸಿನಿಮಾವನ್ನು ಒಂದು ತಿಂಗಳ ಕಾಲ ಮುಂದೂಡಿಕೆ ಮಾಡಿದ್ದಾರೆ. ಧ್ರುವ ಒಂದೇ ಒಂದು ಫೋನ್ ಕರೆಗೆ ಶಿವಣ್ಣ ಗೌರವ ಕೊಟ್ಟು ಸಿನಿಮಾ ಮುಂದೂಡಿಕೆ ಮಾಡಿದ್ದಾರೆ. ಇದು ಶಿವಣ್ಣ ಕನ್ನಡ ಚಿತ್ರರಂಗದ ಮೇಲೆ, ಕನ್ನಡ ಸಿನಿಮಾದ ಬಗ್ಗೆ ದೊಡ್ಡ ಅಭಿಮಾನ ಇಟ್ಟುಕೊಂಡಿದ್ದಾರೆ. ಈ ಎಲ್ಲ ಘಟನೆ ಆ.27ರಂದು ನಡೆದ ಘಟನೆ ಆಗಿದೆ ಎಂದು ನಟ ಪ್ರಥಮ್ ಮಾಹಿತಿ ನೀಡಿದರು.