ಮತ್ತೆ ದೊಡ್ಡ ಸುದ್ದಿ ಮಾಡುತ್ತಿದೆ ನಟಿ ಶ್ರುತಿ ಹರಿಹರನ್ ಮೀಟೂ ಕೇಸ್. ವಿಚಾರಣೆಗೆ ಬರ್ತಿಲ್ವಾ ನಟಿ? ಎಲ್ಲಿದ್ದಾರೆ?
ಇಡೀ ಭಾರತೀಯ ಚಿತ್ರರಂಗದ ಸ್ಟಾರ್ ನಟಿಯರು ತಾವು ಲೈಂಗಿನ ಶೋಷಣೆಗೆ ಗುರಿಯಾಗಿರುವುದರ ಬಗ್ಗೆ 2018ರಲ್ಲಿ ಶುರುವಾದ ಮೀ ಟೂ (Me Too) ಅಭಿಯಾನದಲ್ಲಿ ತಮ್ಮ ನೋವು, ಯಾತನೆ ಹಂಚಿಕೊಂಡಿದ್ದರು. ಕೆಲವರು ಸೋಷಿಯಲ್ ಮೀಡಿಯಾ (Social Media) ಮತ್ತು ಮಾಧ್ಯಮಗಳಲ್ಲಿ (News) ತಿಳಿದು, ಸುಮ್ಮನಾದರು ಆದರೆ ಇನ್ನೂ ಕೆಲವರು ಪೊಲೀಸರಿಗೆ ದೂರು ನೀಡಿ, ವಿಚಾರಣೆ ಎದುರಿಸುತ್ತಿದ್ದಾರೆ. ಅವರಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ರುತಿ ಹರಿಹರನ್ ಕೂಡ ಒಬ್ಬರು.
ಈ ಜನೆರೇಷನ್‌ನ ದುಶ್ಯಾಸನ ಕೀಚಕರು ಹೆಣ್ಣು ಮಕ್ಕಳ ಜೊತೆ ಹೇಗೆ ವರ್ತಿಸುತ್ತಿದ್ದಾರೆ, ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ, ಎಂದು ಈಗಾಗಲೆ ಹಲವು ಮಹಿಳಾ ಸಂಘಟನೆಗಳು ಮೀಟಿಂಗ್ ನಡೆಸಿ ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದಾರೆ.
2018ರಲ್ಲಿ ನಟಿ ಶ್ರುತಿ ಹರಿಹರನ್ (Sruthi Hariharan) ಅವರು ದಕ್ಷಿಣ ಭಾರತೀಯ ಖ್ಯಾತ ನಟರಲ್ಲಿ ಒಬ್ಬರಾದ ಅರ್ಜುನ್ ಸರ್ಜಾ (Arjun Sarja) ವಿರುದ್ಧ ಮೀಟೂ ಆರೋಪ ಮಾಡಿದ್ದರು. ಬೆಂಗಳೂರಿನ ಮೂರ್ನಾಲ್ಕು ಕಡೆ ಪೊಲೀಸ್ ಠಾಣೆಗಳಲ್ಲಿ (Police Station) ಭಾರತೀಯ ದಂಡ ಸಂಹಿತೆ 354, 354 ಎ ಮತ್ತು 506 ಸೆಕ್ಷನ್ ಅಡಿಯಲ್ಲಿ ದೂರು ದಾಖಲಾಗಿತ್ತು. ಮೂರು ವರ್ಷಗಳ ಬಳಿಕ ಪೊಲೀಸರು ಇದೀಗ ಮತ್ತೆ ವಿಚಾರಣೆಗೆ ಕರೆದಿದ್ದಾರೆ.
![]()
ಇಡೀ ಪ್ರಕರಣ ಅಂತಿಮ ಹಂತಕ್ಕೆ ತಲುಪಿದೆ. ಹೀಗಾಗಿ ಕಬನ್ ಪಾರ್ಕ್ ಪೊಲೀಸರು (Cubbon Park Police) ವಿಚಾರಣೆಗೆ ಹಾಜರು ಆಗುವಂತೆ ನಟಿಗೆ ನೋಟಿಸ್ ನೀಡಿದ್ದಾರೆ. ವಿಚಾರಣೆ ನೋಟಿಸ್ ನೀಡಿ, ಮೂರು ದಿನಗಳಲ್ಲಿ ಹಾಜರ್ ಆಗಬೇಕಿದೆ. ಈವರೆಗೂ ನಡೆದ ವಿಚಾರಣೆಯಲ್ಲಿ ಶ್ರುತಿ ಯಾವುದೇ ಗಟ್ಟಿ ಸಾಕ್ಷಿ ತೋರಿಸದ ಕಾರಣ ಪೊಲೀಸರು ಬಿ ರಿಪೋರ್ಟ್ (B report) ತಯಾರಿಸಿದ್ದಾರೆ ಎನ್ನಲಾಗುತ್ತಿದೆ. ಶ್ರುತಿ ಸುಮ್ಮನೆ ಕಥೆ ಕಟ್ಟಿಟ್ರಾ? ಯಾವ ಸಾಕ್ಷಿ ಇಲ್ಲದೆಯೂ ಯಾಕೆ ಕೇಸ್ ಹಾಕುವುದಕ್ಕೆ ಮುಂದಾದರು ಎನ್ನುವ ಪ್ರಶ್ನೆ ಶುರುವಾಗಿದೆ.
ಮದುವೆಯ ಚಂದದ ಫೋಟೋಸ್ ಶೇರ್ ಮಾಡಿದ ಶ್ರುತಿ..!
ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ ದೊಡ್ಡದಾಗುತ್ತಿದ್ದಂತೆ, ಕನ್ನಡ ಚಲನ ಚಿತ್ರ ಮಂಡಳಿ, ಸ್ಯಾಂಡಲ್‌ವುಡ್ ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಸೇರಿ ಹಿರಿಯ ಕಲಾವಿದರು ಮಾತುಕತೆ ನಡೆಸಿ, ಘಟನೆಗೆ ಸುಖಾಂತ್ಯ ಹಾಡಲು ಮುಂದಾಗಿದ್ದರು. ಆದರೆ, ಯಾರ ಮಾತಿಗೂ ಬಗ್ಗದ ನಾತಿಚರಾಮಿ ನಟಿ ಶೃತಿ, ದೂರು ದಾಖಲಿಸಲು ನಿರ್ಧರಿಸಿದ್ದರು. ಮೀ ಟೂ ಆರೋಪದ ನಂತರ ಶ್ರುತಿ ಚಿತ್ರರಂಗದಿಂದಲೇ ದೂರ ಉಳಿದರು. ಯಾವ ಸಿನಿಮಾಗೂ ಸಹಿ ಮಾಡಿರಲಿಲ್ಲ. ವಿಚಾರಣೆ ವೇಳೆ ಶ್ರುತಿ ಸಹಿ ಮಾಡುವಾಗ, ಪತಿ ರಾಮ್‌ಕುಮಾರ್ (Ramkumar) ಹೆಸರು ಸೇರಿಸಿದ್ದರು. ಅಲ್ಲೀವರೆಗೂ ಈ ನಟಿ ದಾಂಪತ್ಯಕ್ಕೆ ಕಾಲಿಟ್ಟ ವಿಚಾರವೇ ಯಾರಿಗೂ ಗೊತ್ತಿರಲಿಲ್ಲ. 2019ರಲ್ಲಿ ತಾವು ತಾಯಿ ಆಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. 2019ರ ಕೊನೆಯಲ್ಲಿ ಕುಟುಂಬಕ್ಕೆ ಹೆಣ್ಣು ಮಗುವನ್ನು (Baby girl) ಬರ ಮಾಡಿಕೊಂಡಿದ್ದರು.
ಬೆಳ್ಳಿತೆರೆ ಕಮ್‌ಬ್ಯಾಕ್ ಬಗ್ಗೆ ಮೌನ ಮುರಿದ ನಟಿ ಶ್ರುತಿ ಹರಿಹರನ್!
ಶೃತಿಯ ಈ ಹೋರಾಟದಲ್ಲಿ ಆ ದಿನಗಳು ಖ್ಯಾತಿಯ ನಟ ಚೇತನ್ ಸಾಥ್ ನೀಡಿದ್ದು, ದೂರು ಸಲ್ಲಿಸಲು ಬೆಂಬಲಿಸಿದ್ದರು. ನಂತರ ನಡೆದ ಬೆಳವಣಿಗೆಳಿಂದ ಈ ಮೂ ಟೂ ಸದ್ದು ತಣ್ಣಗಾಗಿತ್ತು. ಕನ್ನಡ ಚಿತ್ರರಂಗ ಮಾತ್ರವಲ್ಲ, ತೆಲಗು ಹಾಗೂ ಬಾಲಿವುಡ ಚಿತ್ರರಂಗದಲ್ಲಿಯೂ ಅನೇಕ ದಿಗ್ಗಜ ನಟರ ವಿರುದ್ಧ ಲೈಂಗಿಕ ದೌರ್ಜನ್ಯವೆಸಗಿದ ಸುದ್ದಿ ಸಿಕ್ಕಾಪಟ್ಟ ಸದ್ದು ಮಾಡಿತ್ತು.
ಮಗಳಿಗೆ ಎರಡು ವರ್ಷ ತುಂಬುತ್ತಿದ್ದಂತೆ, ಶ್ರುತಿ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಡಾಲಿ ಧನಂಜಯ್ (Dolly Dhananjay) ನಟನೆಯ ಹೆಡ್‌ಬುಷ್ (Headbush) ಚಿತ್ರದಲ್ಲಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ.
"
