‘ಕ್ರೇಜಿಸ್ಟಾರ್‌’ ರವಿಚಂದ್ರನ್‌ ಸೇರಿದಂತೆ ಮೂವರು ಗಣ್ಯರಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯ ಗೌರವ ಡಾಕ್ಟರೆಟ್‌ ಘೋಷಿಸಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಏ.11ರಂದು ನಡೆಯಲಿದ್ದು, ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಿದ್ದಾರೆ.

ಬೆಂಗಳೂರು (ಏ.10): ‘ಕ್ರೇಜಿಸ್ಟಾರ್‌’ ರವಿಚಂದ್ರನ್‌ (V Ravichandran) ಸೇರಿದಂತೆ ಮೂವರು ಗಣ್ಯರಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಘೋಷಿಸಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯದ (Bengaluru City University) ಪ್ರಥಮ ಘಟಿಕೋತ್ಸವ ಏ.11ರಂದು ನಡೆಯಲಿದ್ದು, ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ (Thawar Chand Gehlot) ಗೌರವ ಡಾಕ್ಟರೆಟ್‌ (Honorary Doctorate) ಪ್ರದಾನ ಮಾಡಲಿದ್ದಾರೆ. 41 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ.

ಅರಮನೆ ರಸ್ತೆಯ ಸೆಂಟ್ರಲ್‌ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ 10.30ಕ್ಕೆ ಚೊಚ್ಚಲ ಘಟಿಕೋತ್ಸವ ನಡೆಯಲಿದೆ. ಸಿನಿಮಾ ಕ್ಷೇತ್ರದ ಸೇವೆಗಾಗಿ ನಟ ರವಿಚಂದ್ರನ್‌, ಸಮಾಜ ಸೇವೆಗೆ ಎಂ.ಆರ್‌.ಜೈಶಂಕರ್‌, ವೈದ್ಯಕೀಯ ವಿಭಾಗದಲ್ಲಿ ಡಾ.ಸತ್ಯನಾರಾಯಣ ಅವರಿಗೆ ಗೌರವ ಡಾಕ್ಟರೆಟ್‌ ಪ್ರದಾನ ಮಾಡಲಾಗುತ್ತದೆ. ಇಸ್ರೋ ವಿಶ್ರಾಂತ ಅಧ್ಯಕ್ಷ ಡಾ.ಕೆ. ಕಸ್ತೂರಿರಂಗನ್‌ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

ಹೃದಯಪೂರ್ವಕ ನಮನಗಳು: ಗೌರವ ಡಾಕ್ಟರೆಟ್‌ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ರವಿಚಂದ್ರನ್‌, ಬೆಂಗಳೂರು ನಗರ ವಿವಿಗೆ ಹೃದಯಪೂರ್ವಕ ನಮನಗಳು ಎಂದು ಟ್ವೀಟ್‌ (Tweet) ಮಾಡಿದ್ದಾರೆ. ಇದು ರವಿಚಂದ್ರನ್‌ ಅವರಿಗೆ ಲಭಿಸುತ್ತಿರುವ ಎರಡನೇ ಗೌರವ ಡಾಕ್ಟರೆಟ್‌ ಆಗಿದೆ. ಈ ಹಿಂದೆ ಅವರಿಗೆ ಬೆಂಗಳೂರಿನ ಸಿಎಂಆರ್‌ ವಿದ್ಯಾಲಯ ಗೌರವ ಡಾಕ್ಟರೆಟ್‌ ನೀಡಿತ್ತು.

ಹಣ ಮತ್ತು ಕತೆ ನೋಡಿ ಸಿನಿಮಾ ಆಯ್ಕೆ ಮಾಡುತ್ತೇನೆ: ರವಿಚಂದ್ರನ್‌

ನಗರ ವಿವಿ ಬೊಚ್ಚಲ ಘಟಿಕೋತ್ಸವ: ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಏ.11ರಂದು ನಡೆಯಲಿದ್ದು, ರಾಜ್ಯಪಾಲ ತಾವರ್‌ಚಂದ್‌ ಗೆಹಲೋತ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕ್ರೇಜಿಸ್ಟಾರ್‌ ರವಿಚಂದ್ರನ್‌ ಸೇರಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಗುವುದು. 41 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ವಿವಿ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಮನೆ ರಸ್ತೆಯ ಸೆಂಟ್ರಲ್‌ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ಬೆಳಗ್ಗೆ 10.30ಕ್ಕೆ ಚೊಚ್ಚಲ ಘಟಿಕೋತ್ಸವ ನಡೆಯಲಿದೆ. ಸಿನಿಮಾ ಕ್ಷೇತ್ರದ ಸೇವೆಗಾಗಿ ನಟ ರವಿಚಂದ್ರನ್‌, ಸಮಾಜ ಸೇವೆಗೆ ಎಂ.ಆರ್‌.ಜೈಶಂಕರ್‌, ವೈದ್ಯಕೀಯ ವಿಭಾಗದಲ್ಲಿ ಡಾ.ಸತ್ಯನಾರಾಯಣ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು. ಇಸ್ರೋ ವಿಶ್ರಾಂತ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್‌ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು.

84 ವಿದ್ಯಾರ್ಥಿಗಳಿಗೆ ಚಿನ್ನದ ಪದಕ: ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತಿತರ ಗಣ್ಯರು ಉಪಸ್ಥಿತರಿರುವರು. ಪದವಿ ಮತ್ತು ಸ್ನಾತಕೋತ್ತರ ಸೇರಿದಂತೆ ಒಟ್ಟು 41,768 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಇದರಲ್ಲಿ 14,823 ವಿದ್ಯಾರ್ಥಿನಿಯರು, 26,945 ವಿದ್ಯಾರ್ಥಿಗಳಿದ್ದಾರೆ. ಪ್ರಥಮ ರಾರ‍ಯಂಕ್‌ ಪಡೆದ 84 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಚಿನ್ನದ ಪದಕ ಮತ್ತು .20 ಸಾವಿರ ನಗದು ನೀಡಿ ಗೌರವಿಸಲಾಗುವುದು ಎಂದು ಲಿಂಗರಾಜ ಗಾಂಧಿ ಹೇಳಿದರು.

ಚಿನ್ನದ ಪದಕ ವಿಜೇತರಿಗೆ ನಗದು ಬಹುಮಾನಕ್ಕಾಗಿ ವಿವಿಯು 2 ಕೋಟಿ ಮೀಸಲಿಟ್ಟಿದೆ. 7 ದಾನಿಗಳು ಚಿನ್ನದ ಪದಕ ನೀಡಲು ಠೇವಣಿ ಇಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಶ್ವೇತ ವಸ್ತ್ರದ ಬಟ್ಟೆಧರಿಸಿ ಘಟಿಕೋತ್ಸವಕ್ಕೆ ಆಗಮಿಸುವಂತೆ ತಿಳಿಸಲಾಗಿದೆ. ಅತಿಥಿಗಳು ಮತ್ತು ಅಧಿಕಾರಿಗಳು ಖಾದಿ ವಸ್ತ್ರ ಧರಿಸಲು ತೀರ್ಮಾನಿಸಿದ್ದಾರೆ. ಖಾದಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ರೀತಿ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ವಿವಿಯ ಆಡಳಿತ ವಿಭಾಗದ ಕುಲಸಚಿವ ಸಿ.ಎನ್‌.ಶ್ರೀಧರ್‌, ಮೌಲ್ಯಮಾಪನ ವಿಭಾಗದ ಕುಲಸಚಿವ ರಮೇಶ್‌ ಮತ್ತಿತರರು ಹಾಜರಿದ್ದರು.

ಪುನೀತ್ ರಾಜ್ ಕುಮಾರ್ ಗೆ ಮೈಸೂರು ವಿವಿಯಿಂದ ಡಾಕ್ಟರೇಟ್; ಭಾವುಕರಾದ ಅಶ್ವಿನಿ

ಪೂರ್ವಗೆ 3 ಚಿನ್ನದ ಪದಕ: ವಿವಿ ಪುರದ ಭಗವಾನ್‌ ಮಹಾವೀರ್‌ ಜೈನ್‌ ಸಂಜೆ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಪೂರ್ವ ಎನ್‌.ಗಾಂಧಿ ಅವರು ಅತಿ ಹೆಚ್ಚು ಅಂದರೆ ಮೂರು ಚಿನ್ನದ ಪದಕ ಗಳಿಸಿದ್ದಾರೆ. ಇನ್ನುಳಿದಂತೆ ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜಿನ ಬಿಬಿಎ ವಿದ್ಯಾರ್ಥಿನಿ ತಾಕಿಯ ಖಾನಮ್‌, ರೇವಾ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿಯ ಎಂಬಿಎ ವಿದ್ಯಾರ್ಥಿನಿ ದುವ್ವುರು ಅಲೇಕ್ಯಾ, ಎಂ.ಎಸ್‌.ರಾಮಯ್ಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಎಂಎಸ್ಸಿ ವಿದ್ಯಾರ್ಥಿನಿ ಆನ್‌ ಮೇರಿ ಸೆಬಾಸ್ಟಿಯನ್‌, ನಗರ ವಿವಿಯ ಜೀವ ರಸಾಯನ ಶಾಸ್ತ್ರ ವಿಭಾಗದ ಎಂಎಸ್ಸಿ ವಿದ್ಯಾರ್ಥಿನಿ ಬಿ.ಎಸ್‌.ನಿವೇದಿತಾ ಮತ್ತು ವಿದೇಶಿ ಭಾಷಾ ವಿಭಾಗದ ಎಂಎ (ಫ್ರೆಂಚ್‌) ವಿದ್ಯಾರ್ಥಿನಿ ಅನಿತಾ ಕರೆನ್‌ ಪೆರೈರಾ ಅವರು ತಲಾ 2 ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

Scroll to load tweet…