ಹಣ ಮತ್ತು ಕತೆ ನೋಡಿ ಸಿನಿಮಾ ಆಯ್ಕೆ ಮಾಡುತ್ತೇನೆ: ರವಿಚಂದ್ರನ್
‘ಪೇಮೆಂಟ್, ಕತೆ ಇವೆರಡನ್ನು ನೋಡಿ ಸಿನಿಮಾ ಒಪ್ಕೊಳ್ತೇನೆ’ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ. ಕೀರ್ತಿ ನಿರ್ದೇಶನದ ‘ಅಂದೊಂದಿತ್ತು ಕಾಲ’ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಮೊದಲಿಂದ ಇಲ್ಲೀವರೆಗೂ ಪಾತ್ರಗಳ ಆಯ್ಕೆಯಲ್ಲಿ ನನಗೆ ಗೊಂದಲ ಇಲ್ಲ. ಪೋಷಕ ಪಾತ್ರ ಮಾಡಲು ಶುರು ಮಾಡಿ ಸಾಕಷ್ಟುಕಾಲವಾಯ್ತು. ಪೋಷಕ ಪಾತ್ರಕ್ಕೆ ಸಂಭಾವನೆ ಹೆಚ್ಚಿರುತ್ತೆ. ಹೀಗಾಗಿ ಒಪ್ಕೊಳ್ತೇನೆ. ನಾನು ಆ ಕಾಲಕ್ಕೂ, ಈ ಕಾಲಕ್ಕೂ ಸಲ್ಲುವ ನಟ. ಆ ಕಾಲ ಚಂದ ಇತ್ತು ಅಂತ ಗೊಣಗದೇ ಕಾಲಕ್ಕೆ ತಕ್ಕಂತೆ ನಡೆಯೋದರಲ್ಲೇ ನನಗೆ ಆಸಕ್ತಿ. ಈ ಚಿತ್ರದಲ್ಲಿ ವೀಕೆಂಡ್ ವಿತ್ ರಮೇಶ್ ಥರದ ಪಾತ್ರ. ಮೆಮೊರೀಸ್ ವಿತ್ ರವಿಚಂದ್ರನ್ ಅಂತ ಕಾರ್ಯಕ್ರಮದ ಹೆಸರು. ನನ್ನ ನಿರೂಪಣೆಯಲ್ಲಿ ನಿರ್ದೇಶಕನ ಪಾತ್ರ ಮಾಡುತ್ತಿರುವ ಹೀರೋ ವಿನಯ್ ರಾಜ್‌ಕುಮಾರ್ ಸ್ಟೋರಿ ತೆರೆದುಕೊಳ್ಳುತ್ತೆ. ಅವರ ಬದುಕಿನ ಕಷ್ಟ, ಲೈಫಲ್ಲಿ ಬಂದ ಹುಡುಗಿಯರು ಎಲ್ಲ ವಿಚಾರ ರಿವೀಲ್ ಆಗುತ್ತೆ’ ಎಂದರು.
ನಾಯಕ ವಿನಯ್ ರಾಜ್‌ಕುಮಾರ್ ಮಾತನಾಡಿ, ‘ನನಗೆ ಹಸಿರು, ಪರಿಸರ ಅಂದರೆ ಬಹಳ ಇಷ್ಟ. ಈ ಸಿನಿಮಾದ ಶೂಟಿಂಗ್ ನಡೆದ ತೀರ್ಥಹಳ್ಳಿ ಪರಿಸರ ಬಹಳ ಇಷ್ಟವಾಯ್ತು. 90ರ ದಶಕದ ಕತೆ. ನಿರ್ದೇಶಕನ ಲೈಫ್ ಜರ್ನಿ ಸಿನಿಮಾದ ಹೈಲೈಟ್’ ಎಂದರು.
ನಿರ್ದೇಶಕ ಕೀರ್ತಿ, ‘90ರ ದಶಕದ ಕಥೆ ಹೊಂದಿರುವ ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಮೊದಲ ಚಿತ್ರದಲ್ಲೇ ಡಾ.ರಾಜ್ ಕುಟುಂಬದ ಕುಡಿ ವಿನಯ್ ರಾಜ್‌ಕುಮಾರ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಆ್ಯಕ್ಷನ್ ಕಟ್ ಹೇಳಿದ್ದು ಖುಷಿಕೊಟ್ಟಿತು’ ಎಂದರು. ನಾಯಕಿ ಅದಿತಿ ಪ್ರಭುದೇವ ಅವರಿಗೆ ಮೆಚ್ಯೂರ್ಡ್ ಹುಡುಗಿ ಪಾತ್ರ ನಿರ್ವಹಿಸಿದ್ದು ಖುಷಿ ಕೊಟ್ಟಿದೆಯಂತೆ.
ಈ ವೇಳೆ ರವಿಚಂದ್ರನ್ ಅವರು ನಾಯಕ ವಿನಯ್ ಅವರ ಜೊತೆಗೆ ಗೋಲಿ, ಬುಗುರಿ ಆಡುವ, ರಂಗನಾಯಕಿ ಚಿತ್ರದ ಕುರಿತು ವಿನಯ್ ಅವರನ್ನು ಮಾತನಾಡಿಸುವ ದೃಶ್ಯವನ್ನು ಸಿನಿಮಾಟೋಗ್ರಾಫರ್ ಅಭಿಷೇಕ್ ಕಾಸರಗೋಡು ಚಿತ್ರೀಕರಿಸಿದರು. ನಿರ್ಮಾಪಕ ಭುವನ್ ಸುರೇಶ್ ಇದ್ದರು.
ನರ್ತಕಿ ಚಿತ್ರಮಂದಿರದಲ್ಲಿ 'ಅಂದೊಂದಿತ್ತು ಕಾಲ' ಸಿನಿಮಾ ಶೂಟಿಂಗ್!‘ಅಂದೊಂದಿತ್ತು ಕಾಲ’ ಸಿನಿಮಾ ಹಳೆಯ ನಿಷ್ಕಲ್ಮಶಸ್ನೇಹದ ಕತೆ ಹೇಳುವ ಚಿತ್ರ. ಮೊಬೈಲ್ ಇಲ್ಲದ ಕಾಲವನ್ನು ರೀಕಾಲ್ ಮಾಡುವ ಪ್ರಯತ್ನಇಲ್ಲಾಗಿದೆ. ಹೀರೋ ವಿನಯ್ ರಾಜ್‌ಕುಮಾರ್ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿಹೀರೋಯಿಸಂ, ಅಬ್ಬರಗಳಿಲ್ಲ. ಒಬ್ಬ ಮಧ್ಯಮ ವರ್ಗದ ಹುಡುಗನ ವಿವಿಧ ಮುಖಗಳನ್ನುವಿನಯ್ ಪಾತ್ರದ ಮೂಲಕ ಅನಾವರಣ ಮಾಡುತ್ತಿದ್ದೇನೆ. ನಾಯಕಿ ಅದಿತಿ ಪ್ರಭುದೇವ ತೀರ್ಥಹಳ್ಳಿಯಲ್ಲಿಸಂಗೀತ ವಿದ್ಯಾರ್ಥಿನಿ.ಗಾಯಕ ವಿಜಯ ಪ್ರಕಾಶ್ ಅವರನ್ನು ನಮ್ಮ ಸಿನಿಮಾಕ್ಕೆಕರೆತರುವ ಪ್ರಯತ್ನ ಜಾರಿಯಲ್ಲಿದೆ. ಜೊತೆಗೆ ಒಬ್ಬ ಸ್ಟಾರ್ ನಿರ್ದೇಶಕ ನಟಿಸುತ್ತಿದ್ದಾರೆ.ಅವರ್ಯಾರು ಅನ್ನೋದನ್ನು ಸದ್ಯದಲ್ಲೇ ರಿವೀಲ್ ಮಾಡ್ತೀನಿ.ಮೂರನೇ ಹಂತದ ಚಿತ್ರೀಕರಣ ಬೆಂಗಳೂರುಸುತ್ತಮುತ್ತ ನಡೆಯಲಿದೆ. ಅದಾಗಿ ತೀರ್ಥಹಳ್ಳಿಯಲ್ಲಿ ಕೊನೆಯ ಹಂತದ ಚಿತ್ರೀಕರಣನಡೆಯುತ್ತದೆ. ಸುರೇಶ್ ಹಾಗೂ ಎನ್. ಲೋಕೇಶ್ ಈ ಸಿನಿಮಾದ ನಿರ್ಮಾಪಕರು. ನನ್ನ ಬಳಿಕತೆಯನ್ನೂ ಕೇಳದೇ, ವಿಶ್ವಾಸದಿಂದ ಬಂಡವಾಳ ಹೂಡಿದ್ದು ನನ್ನ ಜವಾಬ್ದಾರಿ ಹೆಚ್ಚಿಸಿದೆ.' ಎಂದು ನಿರ್ದೇಶಕ ಕೀರ್ತಿ ಮಾತನಾಡಿದ್ದಾರೆ.
ಭುವನ್ ಸಿನಿಮಾಸ್ ಮೂಲಕ ಸುರೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಶೂಟಿಂಗ್ ಯೂನಿಟ್‌ಗಳನ್ನು ಒದಗಿಸುವ ಕಾಯಕ ಮಾಡಿಕೊಂಡಿದ್ದ ಇವರು ಈಗ ಸಿನಿಮಾ ನಿರ್ಮಾಣ ಮಾಡಲು ಹೊರಟಿದ್ದಾರೆ.‘ನನಗೆ ಉಪೇಂದ್ರ ನಿರ್ದೇಶನದ ಸಿನಿಮಾಗಳು ಇಷ್ಟ. ಈ ಚಿತ್ರದಲ್ಲಿ ನಾನು ನಿರ್ದೇಶಕನ ಪಾತ್ರವನ್ನು ಮಾಡಲು ಸಹ ನನಗೆ ಅವರೇ ಸ್ಫೂರ್ತಿ. ಮೂರು ಕಾಲಘಟ್ಟದಲ್ಲಿ ನಡೆಯುವ ಕತೆ. ಹೈಸ್ಕೂಲ್, ಕಾಲೇಜ್ ವಿದ್ಯಾರ್ಥಿ ಹಾಗೂ ಪ್ರಬುದ್ಧ ಯುವಕನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಮೊಬೈಲ್, ಇಂಟರ್‌ನೆಟ್ ಇಲ್ಲದಾಗಿನ ಕಾಲದಲ್ಲಿ ಜನರ ಜೀವನ ಹೇಗಿತ್ತು, ಅವರ ನಡುವೆ ಕಮ್ಯೂನಿಕೇಷನ್ ಯಾವ ರೀತಿ ನಡೆಯುತ್ತಿತ್ತು ಅನ್ನೋದನ್ನು ಈ ಚಿತ್ರದಲ್ಲಿ ಹೇಳಲು ಪ್ರಯತ್ನಿಸಲಾಗುತ್ತಿದೆ. ನನ್ನ ಕುಟುಂಬದವರೆಲ್ಲ ಸೇರಿ ಈ ಕತೆಯನ್ನು ಒಪ್ಪಿದ್ದಾರೆ’ ಎಂದು ವಿನಯ್ ರಾಜ್‌ಕುಮಾರ್ ಹೇಳಿಕೊಂಡರು.