Badava Raskal: ಧನಂಜಯ್‌ಗೆ ಯಶಸ್ಸು ಕೊಡೋ ಸಿನಿಮಾ ಇದು ಎಂದ ಶಿವಣ್ಣ
‘ಧನಂಜಯ್ ತುಂಬಾ ಪ್ರತಿಭೆ ಇರುವ ಕಲಾವಿದ. ಅವರನ್ನು ನೋಡುವಾಗಲೆಲ್ಲ, ಯಾಕೆ ಇವರಿಗೆ ಒಳ್ಳೆಯ ಯಶಸ್ಸು ಸಿಗುತ್ತಿಲ್ಲ ಎನ್ನುವ ಪ್ರಶ್ನೆ ಕಾಡುತ್ತಿತ್ತು. ಬಡವ ರಾಸ್ಕಲ್ ಸಿನಿಮಾ ಅದಕ್ಕೆ ಉತ್ತರ ಕೊಡುತ್ತದೆ ಎಂದುಕೊಂಡಿದ್ದೇನೆ’ ಎಂದು ಹೇಳಿದ್ದು ಶಿವರಾಜ್‌ಕುಮಾರ್.
ಧನಂಜಯ್ ನಟಿಸಿ, ನಿರ್ಮಿಸಿದ ‘ಬಡವ ರಾಸ್ಕಲ್’ ಚಿತ್ರದ ಪ್ರಿ- ರಿಲೀಸ್ ಈವೆಂಟ್ ಹೀಗೆ ಎಲ್ಲಾ ಅಂಶಗಳ ಹಂಗಾಮವಾಗಿ ಮೂಡಿ ಬಂತು. ಇಡೀ ಚಿತ್ರತಂಡ ಸೇರಿದ್ದ ಅಪರೂಪದ ಕಾರ್ಯಕ್ರಮ ಅದು. ‘ಸ್ನೇಹಿತರಾಗಿ ಚಿತ್ರರಂಗಕ್ಕೆ ಬಂದು ಸ್ನೇಹಿತರಿಗಾಗಿ, ಸ್ನೇಹಿತರೆಲ್ಲರು ಸೇರಿ ಮಾಡಿರುವ ಸಿನಿಮಾ ಇದು. ಶಂಕರ್ ಗುರು ತುಂಬಾ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಹೊಸ ರೀತಿಯ ಸಿನಿಮಾ ಇದು’ ಎಂದು ಹೇಳಿದ್ದು ಧನಂಜಯ್.
‘ಧನಂಜಯ್ ತುಂಬಾ ಪ್ರತಿಭೆ ಇರುವ ಕಲಾವಿದ. ಅವರನ್ನು ನೋಡುವಾಗಲೆಲ್ಲ, ಯಾಕೆ ಇವರಿಗೆ ಒಳ್ಳೆಯ ಯಶಸ್ಸು ಸಿಗುತ್ತಿಲ್ಲ ಎನ್ನುವ ಪ್ರಶ್ನೆ ಕಾಡುತ್ತಿತ್ತು. ಬಡವ ರಾಸ್ಕಲ್ ಸಿನಿಮಾ ಅದಕ್ಕೆ ಉತ್ತರ ಕೊಡುತ್ತದೆ ಎಂದುಕೊಂಡಿದ್ದೇನೆ’ ಎಂದು ಹೇಳಿದ್ದು ಶಿವರಾಜ್‌ಕುಮಾರ್.
‘ಒಂದು ಮಧ್ಯಮ ವರ್ಗದ ಕುಟುಂಬದ ಕತೆ. ನಾನು ಡಾ ರಾಜ್‌ಕುಮಾರ್ ಅಭಿಮಾನಿ. ಹೀಗಾಗಿ ನನ್ನ ಹೆಸರನ್ನು ಶಂಕರ್‌ಗುರು ಎಂದು ಇಟ್ಟುಕೊಂಡಿದ್ದೇನೆ. ಚಿತ್ರಕ್ಕೆ ಬಡವ ರಾಸ್ಕಲ್ ಅಂತ ಹೆಸರಿಟ್ಟಿದ್ದು ಕೂಡ ಅಣ್ಣಾವ್ರ ಸ್ಫೂರ್ತಿಯಿಂದಲೇ. ಚಿತ್ರವನ್ನು ನೋಡಿ ಗೆಲ್ಲಿಸಿ’ ಎಂದು ಮನವಿ ಮಾಡಿಕೊಂಡರು.
ಈ ವಾರ ಬೆಳ್ಳಿತೆರೆ ಮೇಲೆ ಬಡವ ರಾಸ್ಕಲ್-ರೈಡರ್ ಜರ್ನಿ.!
ಹಂಸಲೇಖ, ನಟಿಯರಾದ ರಚಿತಾ ರಾಮ್, ನಿಧಿ ಸುಬ್ಬಯ್ಯ, ನಿರ್ದೇಶಕರಾದ ವಿಜಯಪ್ರಸಾದ್, ಸಂಭಾಷಣೆಕಾರ ಮಾಸ್ತಿ, ನಿರ್ಮಾಪಕರಾದ ಕೆ ಪಿ ಶ್ರೀಕಾಂತ್, ಸುರೇಶ್ ಕೆ ಎಂ, ನಾಗೇಂದ್ರ, ಹರಿ ರೆಡ್ಡಿ, ರಾಮ್ಕೋ ಸೋಮಣ್ಣ ಸೇರಿದಂತೆ ಹಲವರು ಆಗಮಿಸಿ ಚಿತ್ರತಂಡಕ್ಕೆ ಬೆಂಬಲ
ಸೂಚಿಸಿದರು. ರಂಗಾಯಣ ರಘು ಹಾಗೂ ತಾರಾ ಅವರು ಇಲ್ಲಿ ನಾಯಕನ ತಂದೆ, ತಾಯಿ ಪಾತ್ರ ಮಾಡುತ್ತಿದ್ದಾರೆ. ಅಮೃತಾ
ಅಯ್ಯಂಗಾರ್ ಚಿತ್ರದ ನಾಯಕಿ. ಪೂರ್ಣಚಂದ್ರ ಮೈಸೂರು, ನಾಗಭೂಷಣ್, ಶಮಂತ್, ಹರ್ಷ, ಲಲ್ಲು, ಅಭಿಲಾಷ್ ಚಿತ್ರದ ಉಳಿದ ಪಾತ್ರಧಾರಿಗಳು. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಇದೆ.
ನೀವು ನಮ್ಮ ನಾಯಕರಾಗಿ ಶಿವಣ್ಣ
ಚಿತ್ರರಂಗದ ನಾಯಕತ್ವದ ವಿಷಯವನ್ನು ‘ಬಡವ ರಾಸ್ಕಲ್’ ಚಿತ್ರತಂಡ ಕಾರ್ಯಕ್ರಮ ಮತ್ತೆ ಮುನ್ನೆಲೆಗೆ ತಂತು. ‘ನೀವು ಹೂಂ ಅನ್ನಿ ಸಾಕು. ನಾವು ನಿಮ್ಮ ಜತೆಗೆ ಇರುತ್ತೇವೆ. ಚಿತ್ರರಂಗಕ್ಕೆ ಒಬ್ಬ ನಾಯಕನ ಅಗತ್ಯ ಇದೆ. ಕನ್ನಡ ಸಿನಿಮಾ, ಕನ್ನಡ ಭಾಷೆ, ಕನ್ನಡ ಪ್ರೇಕ್ಷಕರ ವಿಚಾರ ಬಂದರೆ ಚಿತ್ರರಂಗ ಗಟ್ಟಿಯಾಗಿ ಧ್ವನಿ ಎತ್ತುತ್ತದೆ. ಅದಕ್ಕೊಂದು ನಾಯಕ ಬೇಕು. ಆ ನಾಯಕತ್ವ ನೀವೇ ವಹಿಸಿಕೊಳ್ಳಿ’ ಎಂದು ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರು ಮನವಿ ಮಾಡಿಕೊಂಡರು. ‘ನಾನು ನಾಯಕ ಎನ್ನುವುದಕ್ಕಿಂತ, ನಾನು ನಿಮ್ಮ
ಜತೆ ಬರುತ್ತೇನೆ ಎಲ್ಲರೂ ಸೇರಿ ಹೋರಾಟ ಮಾಡೋಣ’ ಎಂದು ಹೇಳಿದ್ದು ಶಿವರಾಜ್‌ಕುಮಾರ್.
- ನಮ್ಮ ತಂಟೆಗೆ ಬಂದ್ರೆ ಸುಮ್ಮನೆ ಇರಲ್ಲ ಎಂದು ಆವಾಜ್ ಹಾಕಿದ ಶಿವಣ್ಣ ಭಾಷೆಗಾಗಿ ಪ್ರಾಣ ಕೊಡ್ತೀನಿ ಅಂದ್ರು.
- ಶಿವಣ್ಣ ನನ್ನ ಆಯಸು ನಿಮಗೆ ಕೊಡ್ತೀನಿ ಎಂದರು ಡಾಲಿ ಧನಂಜಯ್.
- ವೇದಿಕೆ ಮೇಲೆ ಇದ್ದ ನಿರೂಪಕಿ ಅನುಶ್ರೀ, ವೇದಿಕೆ ಮುಂದೆ ಕೂತಿದ್ದ ನಟಿ ತಾರಾ ಭಾವುಕರಾದರು.
- ವೇದಿಕೆ ಮೇಲೆ ಬಂದ ನಾಗಭೂಷಣ್, ವಾಸುಕಿ ವೈಭವ್ ನಗಿಸಿದರು.
- ನೀನಾಸಂ ಸತೀಶ್, ವಸಿಷ್ಠ ಸಿಂಹ, ಯೋಗೀಶ್, ನಿರ್ದೇಶಕ ವಿಜಯ್ ಪ್ರಸಾದ್ ಮಾತಿನ ಮೋಡಿ ಮಾಡಿದರು.
- ಹಂಸಲೇಖ, ರಂಗಾಯಣ ರಘು, ದುನಿಯಾ ವಿಜಯ್ ಅವರು ಶಿವಣ್ಣ ಅವರನ್ನು ಚಿತ್ರರಂಗಕ್ಕೆ ಲೀಡರ್ ಆಗುವಂತೆ ಕೇಳಿದರು.
- ಡಿ.24ರಂದು ತೆರೆ ಮೇಲೆ ಬರುತ್ತಿರುವ ಬಡವ ರಾಸ್ಕಲ್ ಸಿನಿಮಾ ನೋಡಿ ಎಂದು ಬಂದಿದ್ದ ಅತಿಥಿಗಳು ಮನವಿ ಮಾಡಿದರು.