ಕನ್ನಡ ಚಿತ್ರಕರ್ಮಿಗಳಿಗೆ ಕೋವಿಡ್ ಕೇಂದ್ರವನ್ನು ತೆರೆದು, ಸೂಕ್ತ ಚಿಕಿತ್ಸೆ ನೀಡಲು ಮನವಿ ಮಾಡಿಕೊಂಡ ಭಾ.ಮಾ ಹರೀಶ್.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯಕಾರಿ ಸಮಿತಿ ಸದಸ್ಯರಾದ ಭಾ.ಮಾ ಹರೀಶ್ ಮಾನ್ಯ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯುವ ಮೂಲಕ ಚಿತ್ರೋದ್ಯಮ ಸದಸ್ಯರಿಗೆ ವಿಶೇಷ ಪ್ಯಾಕೇಜ್ ಹಾಗೂ ಕೋವಿಡ್ ಕೇಂದ್ರಗಳನ್ನು ಆರಂಭಿಸುವ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ.
100 ಕಾರ್ಮಿಕರಿಗೆ 5000 ಸಾವಿರ ರೂ. ಧನ ಸಹಾಯ ಮಾಡಿದ ನಟ ಮನೋರಂಜನ್ ರವಿಚಂದ್ರನ್!
ಕೋವಿಡ್ ಕೇಂದ್ರ:
ಕನ್ನಡ ಚಲನಚಿತ್ರ ಕಲಾವಿದರ ಸಂಘ, ಬಿಗ್ ಬಾಸ್ ಮನೆ ಮತ್ತು ಕಂಠೀರವ ಸ್ಟುಡಿಯೋದಲ್ಲಿ ಕೋವಿಡ್ ಕೇಂದ್ರವನ್ನು ತೆರೆದು ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಸದಸ್ಯರಿಗೆ ಹಾಗೂ ಅವರ ಕುಟುಂಬದವರಿಗೆ ಸೂಕ್ತ ಚಿಕಿತ್ಸೆಯ ನೆರವನ್ನು ನೀಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಸಿಎಂ ಸಹಾಯ ಕೋರಿ ನಿರ್ದೇಶಕರ ಸಂಘದಿಂದ ಮನವಿ ಪತ್ರ!
ವಿಶೇಷ ಪ್ಯಾಕೇಜ್:
ಕೊರೋನಾ ಸೋಂಕು ಹೆಚ್ಚಾಗುತ್ತಿದ್ದಂತೆ, ಮುಂದೆಯೂ ಲಾಕ್‌ಡೌನ್ ವಿಸ್ತರಣೆಯಾಗುವ ಸಂಭವವಿರುವುದರಿಂದ ಸರ್ಕಾರ ಚಿತ್ರಕರ್ಮಿಗಳಿಗೂ ವಿಶೇಷ ಪ್ಯಾಕೇಜ್‌ನಲ್ಲಿ ನೆರವು ನೀಡಿ ಕನ್ನಡ ಚಲನಚಿತ್ರರಂಗದ ಸದಸ್ಯರ ಕುಟುಂಬ ವರ್ಗದವರಿಗೂ ಆಸರೆ ಆಗಬೇಕೆಂದು ಈ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈ ಎರಡು ಪತ್ರಗಳನ್ನು ಈಗಾಗಲೇ ಮುಖ್ಯಮಂತ್ರಿಗಳಿಗೆ ತಲುಪಿಸಿದ್ದಾರೆ.
