- ಪ್ರಿಯಾ ಕೆರ್ವಾಶೆ

ರಾಬರ್ಟ್‌ ಸಿನಿಮಾ ರಿಲೀಸ್‌ ಯಾವಾಗ?

ಅದನ್ನು ಟೀಮ್‌ ನಿರ್ಧರಿಸಬೇಕು. ಬಹುಶಃ ಈ ಕೋವಿಡ್‌ ಭಯ ದೂರಾಗಿ, ಜನ ತಾವೇ ತಾವಾಗಿ ಖುಷಿಯಿಂದ ಥಿಯೇಟರ್‌ಗೆ ಬರುವಾಗ ಬಿಡುಗಡೆ ಆಗಬಹುದು.

ದರ್ಶನ್ ‘ರಾಬರ್ಟ್’ ಚೆಲುವೆ, ಏನ್ ಸಂದಾಗವ್ಳೆ! 

ರಾಬರ್ಟ್‌ ಸಿನಿಮಾ ನಿರೀಕ್ಷಿತ ಟೈಮ್‌ಗೆ ರಿಲೀಸ್‌ ಆಗದೇ ಇರೋದಕ್ಕೆ ಬೇಜಾರಿಲ್ವಾ?

ಖಂಡಿತಾ ಇದೆ. ಈ ಕೊರೋನಾ ಸಮಸ್ಯೆ ಬರದೇ ಹೋಗಿದ್ರೆ ಈಗ ಕತೆನೇ ಬೇರೆ ಆಗಿರ್ತಿತ್ತು. ಆದ್ರೆ ಈ ಟೈಮ್‌ನಲ್ಲಿ ಜನರನ್ನು ಥಿಯೇಟರ್‌ಗೆ ಬನ್ನಿ ಅಂತ ಹೇಳೋಕೂ ನಮಗೆ ಧೈರ್ಯ ಬರಲ್ಲ. ಇದೆಲ್ಲ ಹತೋಟಿಗೆ ಬರೋ ತನಕ ಏನೂ ಮಾಡೋದಕ್ಕಾಗಲ್ಲ.

ನಟನೆ ಇಲ್ಲದ ಈ ಕಾಲದಲ್ಲಿ ಹೇಗೆ ಕಾಲ ಕಳೆಯುತ್ತೀರಿ?

ಈಗೀಗ ಫೋಟೋಶೂಟ್‌, ಬೇರೆ ಬೇರೆ ಪ್ರಾಜೆಕ್ಟ್ ಕೆಲಸಗಳಲ್ಲಿ ಕಳೆಯುತ್ತೇನೆ. ನನ್ನ ವರ್ಕೌಟ್‌ಗಳು, ಹೊಸ ಕಲಿಕೆ ಸಾಗ್ತಾ ಇದೆ.

ರಾಬರ್ಟ್‌ ಸಿನಿಮಾ ನಿಮ್ಮ ಲುಕ್‌ ಬೋಲ್ಡ್‌ ಆ್ಯಂಡ್‌ ಬ್ಯೂಟಿಫುಲ್‌ ಆಗಿದೆ. ಪಾತ್ರವೂ ಹಾಗಿರುತ್ತೆ ಅಂದ್ಕೋಬಹುದಾ?

ದಯವಿಟ್ಟು ಪಾತ್ರದ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೇ ಥಿಯೇಟರ್‌ಗೆ ಬನ್ನಿ. ಒಂದುಮೂಟೆ ಸರ್‌ಪ್ರೈಸ್‌ಗಳು ನಿಮಗಾಗಿ ಕಾಯ್ತಿವೆ ಅಲ್ಲಿ.

ಕನ್ನಡದ ಜೀರೋ ಸೈಜ್ ನಟಿ ಆಶಾ ಭಟ್ ಫಿಟ್ ನೆಸ್ ಸೀಕ್ರೆಟ್! 

ನಿಮ್‌ ಪಾತ್ರದ ಬಗ್ಗೆ ತೃಪ್ತಿ ಇದೆಯಾ?

ಶೇ.100 ರಷ್ಟುತೃಪ್ತಿ ಇದೆ. ತರುಣ್‌ ಸುಧೀರ್‌ ಅವ್ರು ಮೊದಲ ಭೇಟಿಯಲ್ಲೇ ನನ್ನ ಪಾತ್ರದ ಬಗ್ಗೆ ವಿವರಿಸಿದರು. ಅರೆ, ತುಂಬ ಚೆನ್ನಾಗಿದ್ಯಲ್ಲಾ ಪಾತ್ರ ಅಂತ ಅನಿಸ್ತು. ಆ ಕ್ಷಣವೇ ಒಪ್ಪಿಕೊಂಡೆ. ಮುಂದೆ ಯಾವತ್ತೂ ಒಂದು ಪರ್ಸೆಂಟೂ ನಂಗೆ ಬೇಸರ ಆಗ್ಲಿಲ್ಲ.

ದರ್ಶನ್‌ ಜೊತೆಗೆ ನಿಮ್‌ ಕೆಮಿಸ್ಟ್ರಿ?

ಅಷ್ಟುದೊಡ್ಡ ಹೀರೋ ಆದ್ರೂ ಅವ್ರು ಡೌನ್‌ ಟು ಅಥ್‌ರ್‍. ಶೂಟಿಂಗ್‌ನಲ್ಲಿ ದರ್ಶನ್‌ ಅವರದ್ದು ಹೆಚ್ಚಿನೆಲ್ಲಾ ಶಾಟ್‌ಗಳೂ ಒಂದು ಟೇಕ್‌ಗೇ ಓಕೆ ಆಗ್ತಿದ್ದವು. ಆದರೆ ನಾವು ಹೊಸಬರಲ್ವಾ, ಕೆಲವೊಮ್ಮೆ ಇನ್ನೊಂದು ಟೇಕ್‌ ಬೇಕಾಗ್ತಿತ್ತು. ಆಗೆಲ್ಲ ಒಂಚೂರೂ ಬೇಸರ ಮಾಡಿಕೊಳ್ಳದೇ, ಅದಕ್ಕೇನು, ಮಾಡಾಣ ಅಂತ ಬರ್ತಿದ್ರು. ಅವರು ಪ್ರತೀ ನಟ ನಟಿಯರನ್ನು ಹುರಿದುಂಬಿಸುತ್ತಿದ್ದದ್ದು, ಟೀಮ್‌ ಜೊತೆಗೆ ಕೆಲಸ ಮಾಡ್ತಿದ್ದ ರೀತಿ ಎಲ್ಲವೂ ಸ್ಫೂರ್ತಿ ಕೊಡುವ ಹಾಗಿತ್ತು.

ನಿಮ್ಮ ಸ್ಯಾಂಡಲ್‌ವುಡ್‌ ಡೆಬ್ಯೂಟ್‌ ದರ್ಶನ್‌ ಜೊತೆಗೆ. ಏನನಿಸುತ್ತೆ?

ಖುಷಿ ಅನಿಸುತ್ತೆ. ಕನ್ನಡದ ಮೊದಲ ಸಿನಿಮಾವೇ ದರ್ಶನ್‌ನಂಥಾ ಸ್ಟಾರ್‌ ನಟರ ಜೊತೆಗೆ ಅನ್ನೋದು ಎಂಥವರಿಗಾದ್ರೂ ಹೆಮ್ಮೆಯೇ.

ದರ್ಶನ್ ಬಗ್ಗೆ ಆ ನಟಿ ಹಾಗೆ ಹೇಳಿದ್ಯಾಕೆ? ಏನಿದು ಮ್ಯಾಟ್ರು? 

ಬಾಲಿವುಡ್‌ನಲ್ಲೂ ಒಂದು ಸಿನಿಮಾ ಮಾಡಿದ್ರಿ. ಬೇಡ ಬೇಡ ಅಂದ್ರೂ ಮನಸು ಅಲ್ಲಿಗೂ ಇಲ್ಲಿಗೂ ಕಂಪೇರ್‌ ಮಾಡಿಯೇ ಮಾಡುತ್ತೆ ಅಲ್ವಾ?

ನನ್ನ ಮನಸ್ಸು ಹಾಗೆಲ್ಲ ಕಂಪೇರ್‌ ಮಾಡಲ್ಲ. ಆದರೂ ಇಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಕೆಲಸ ಮಾಡುವಾಗ ನಮ್ಮ ನೆಲದ್ದೇ ಸಿನಿಮಾ ಅನ್ನೋ ಅಭಿಮಾನ ಇದ್ದೇ ಇರುತ್ತೆ. ಇಲ್ಲಿ ಜನರಿಗೆ ಕನೆಕ್ಟ್ ಆಗೋದು ಹೆಚ್ಚು.

ಬಾಲಿವುಡ್‌ ಅಥವಾ ಬೇರೆ ಕಡೆ ಹೋಗಲ್ವಾ ಹಾಗಾದ್ರೆ?

ನನಗೆ ಕೈ ತುಂಬ ಕೆಲಸ ಇದ್ದರೆ ಬಹಳ ಖುಷಿ. ಅವಕಾಶ ಎಲ್ಲಿಂದ ಬಂದರೂ ಹೋಗ್ತೀನಿ. ಜನರಿಗೆ ಭರಪೂರ ಮನರಂಜನೆ ಕೊಡುವ ಯಾವ ಅವಕಾಶವನ್ನೂ ನಿರಾಕರಿಸೋದಿಲ್ಲ. ಆದರೆ ಕೆಲವೊಮ್ಮೆ ಡೇಟ್ಸ್‌ ಸಮಸ್ಯೆ ಆಗುತ್ತೆ. ಡೇಟ್‌ ಕ್ಲಾಶ್‌ ಬರದ ಹಾಗೆ ನೋಡ್ಕೊಳ್ಬೇಕಷ್ಟೇ.

ಸಖತ್ತಾಗಿ ಬಾಕ್ಸಿಂಗ್‌ ಮಾಡ್ತೀರಿ?

ನಾನು ಕಾಲೇಜ್‌ ದಿನಗಳಿಂದ ಎನ್‌ಸಿಸಿಯಲ್ಲಿದ್ದವಳು. ಮಾರ್ಷಲ್‌ ಆಟ್ಸ್‌ರ್‍ ಬಗ್ಗೆ ತುಂಬ ಆಸಕ್ತಿ. ನಾನು ವರ್ಕೌಟ್‌ ಅಂತ ಮಾಡೋದೇ ಮಾರ್ಷಲ್‌ ಆಟ್ಸ್‌ರ್‍ಗಳನ್ನು. ಶೂಟಿಂಗ್‌ ಇದ್ದಾಗ ಇದು ಸಾಧ್ಯವಾಗಲ್ಲ. ಅಲ್ಲಿ ಸಿಂಪಲ್‌ ವರ್ಕೌಟ್‌ ಮಾಡ್ತೀನಿ. ಉಳಿದಂತೆ ಮಾರ್ಷಲ್‌ ಆಟ್ಸ್‌ರ್‍, ವೇಯ್‌್ಟಟ್ರೈನಿಂಗ್‌ ಮಾಡ್ತೀನಿ.

ಬೆಂಗಳೂರಲ್ಲಿದ್ದೀರಾ, ಬಾಂಬೆನಾ?

ನಾನು ಮುಂಬಯಿಯಲ್ಲಿರೋದು. ಕೆಲಸ ಇದ್ದಾಗ ಬೆಂಗಳೂರು, ಬಾಂಬೆ ನಡುವೆ ಓಡಾಡ್ತಿರ್ತೀನಿ.