'ನೀನು ನಿನ್ನ ಮನಸ್ಸಲ್ಲಿ ಅದೇನು ಕನಸು ಕಂಡಿದ್ದೀಯೋ ಅದು ಬಿಟ್ಟ ಸ್ಥಳ ತುಂಬಿ ಎಂದಂತೆ. ಅದು ಈಗಾಗ್ಲೇ ಅಲ್ಲಿದೆ. ನೀವು ಹೋಗಿ ಆ ಜಾಗವನ್ನು ತುಂಬಿಕೊಳ್ಳಬೇಕು ಅಷ್ಟೇ. ಅದೇ ಅವ್ನಿಗೆ ಮ್ಯಾಜಿಕಲ್ ಮಂತ್ರ ಇದ್ದಂಗೆ. ..

ದಿವಂಗತ ನಟ ಶಂಕರ್‌ ನಾಗ್ (Shankar Nag) ಅವರ ಪತ್ನಿ ಅರುಂಧತಿ (Arundhati Nag) ಅವರು ತಮ್ಮ ನೆನಪುಗಳ ಸುರುಳಿ ಬಿಚ್ಚಿ ಪತಿ ಶಂಕರ್‌ ಬಗ್ಗೆ ಮಾತನಾಡಿದ್ದಾರೆ. ಇಡೀ ಕನ್ನಡ ನಾಡು ನಟ-ನಿರ್ದೇಶಕ ಶಂಕರ್‌ ನಾಗ್ ಅವರನ್ನು ಎಂದೂ ಮರೆಯಲಾಗದು. ಇನ್ನು, ಅವರ ಪತ್ನಿ ಅರುಂಧತಿ ನಾಗ್ ಹೇಗೆ ಮರೆಯಲು ಸಾಧ್ಯ? ಶಂಕರ್‌ ಅವರನ್ನು ಪ್ರೀತಿಸಿ, ಮದುವೆಯಾಗಿ, ಅಷ್ಟು ವರ್ಷ ಸಂಸಾರ ಮಾಡಿರುವ ಅರುಂಧತಿ ಅವರ ಮಾನಸ್ಸಿನ ನೋವು ಎಂದೂ ಮಾಯವಾಗದು!

ಇಂಥ ಶಂಕರ್‌ ನಾಗ್ ಅವರ ಜನ್ಮದಿನ ಎರಡು ದಿನಗಳ ಹಿಂದಷ್ಟೇ ಕಳೆಯಿತು. ನವೆಂಬರ್ 09 'ಆಟೋ ರಾಜ' ಖ್ಯಾತಿಯ ನಟ ಶಂಕರ್‌ ನಾಗ್ ಅವರ ಜನ್ಮದಿನ. ಈ ಕಾರಣಕ್ಕೆ ಅವರ ಆಪ್ತರು ಸಹಜವಾಗಿಯೇ ನಟ ಶಂಕರ್‌ ನಾಗ್ ನೆನಪನ್ನು ಹಂಚಿಕೊಂಡಿದ್ದಾರೆ. ಮನೆಯವರು, ಆಪ್ತರು ಹಾಗೂ ಅಭಿಮಾನಿಗಳು ಶಂಕರ್‌ ನಾಗ್ ಅವರ ನೆನಪುಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದು ಅದೀಗ ಸಖತ್ ವೈರಲ್ ಆಗುತ್ತಿದೆ. 

ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!

ಹಾಗಿದ್ದರೆ ಅರುಂದತಿ ನಾಗ್ ಅದೇನು ಹೇಳಿದ್ದಾರೆ? ನಟ ಹಾಗೂ ತಮ್ಮ ಪತಿ ಬಗ್ಗೆ ಅವರಾಡಿರುವ ಮಾತುಗಳು ಏನಿವೆ? ಅದನ್ನು ತಿಳಿಯುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.. 'ಇನ್ನು ಮನೆ ಕಟ್ಟಿರಲಿಲ್ಲ ನಾವು.. ಶಂಕರ್ ಒಂದು ಇಟ್ಟಿಗೆನ ಎತ್ಕೊಂಡು ಹೋಗಿ ಒಂದ್ಕಡೆಗೆ ಇಟ್ಟ, ಇಲ್ಲಿ ನಮ್ಮನೆ ಬರುತ್ತೆ ಅಂದ.. ಇನ್ನೊಂದು ಇಟ್ಟಿಗೆ ತಗೊಂಡೋಗಿ ಇನ್ನೊಂದ್ ಕಡೆ ಇಟ್ಟು, ಇಲ್ಲಿ ನಮ್ ಫ್ರಂಡ್ಸ್‌ಗೆಲ್ಲಾ ಹೇಳಿದೀವಿ, ಯಾರಿಗೆ ಮನೆ ಕಟ್ಬೇಕು ಅಂತ ಆಸೆ ಇದ್ಯೋ ಅವ್ರು ಕಟ್ಕೊಳಿ ಅಂತ.. 

ಆಗ ವೈಎನ್‌ಕೆ ಅವರು ಹೇಳಿದ್ರು, 'ನೀನು ನಿನ್ನ ಮನಸ್ಸಲ್ಲಿ ಅದೇನು ಕನಸು ಕಂಡಿದ್ದೀಯೋ ಅದು ಬಿಟ್ಟ ಸ್ಥಳ ತುಂಬಿ ಎಂದಂತೆ. ಅದು ಈಗಾಗ್ಲೇ ಅಲ್ಲಿದೆ. ನೀವು ಹೋಗಿ ಆ ಜಾಗವನ್ನು ತುಂಬಿಕೊಳ್ಳಬೇಕು ಅಷ್ಟೇ. ಅದೇ ಅವ್ನಿಗೆ ಮ್ಯಾಜಿಕಲ್ ಮಂತ್ರ ಇದ್ದಂಗೆ. ಅವ್ನು ಯಾವಾಗ್ಲೂ ನಂಗೆ ಹೇಳೋನು, 'ನಾನು ಅದನ್ನ ಕಾಣ್ತೀ.. ನಿಂಗೆ ಕಾಣಿಸ್ತಿದ್ಯಾ ಅದು?..' ಅಂತ ಕೇಳ್ತಿದ್ದ. ನನಗೆ ಅವನು ಹೇಳೋ ಅದೆಷ್ಟೋ ವಿಷ್ಯ ಅರ್ಥ ಆಗೋದು ಈಗ!

ರಮ್ಯಾ-ರಕ್ಷಿತಾಗೆ 'ಪಾಪ, ಹೆಂಗ್ರಿರೀ' ಅಂದಿದ್ದೇಕೆ ಅಪ್ಪು; ಪ್ರಿಯಾಮಣಿ ಬಲೆಗೆ ಬಿದ್ಬಿಟ್ರಾ ಪವರ್ ಸ್ಟಾರ್?

ಶಂಕರ ಯಾವಾಗ್ಲೂ ಆಗಾಗ ಒಂದ್ ಮಾತು ಹೇಳ್ತಾ ಇದ್ದ, 'ಸತ್ತ ಮೇಲೆ ಮಲಗೋದು ಇದ್ದೇ ಇದೆ, ಎದ್ದಾಗ ಏನಾದರೂ ಸಾಧಿಸು' ಅಂತ. ಅದನ್ನಂತೂ ಯಾರೂ ಮರೆಯೋ ಹಾಗೆ ಇಲ್ಲ. ಅವ್ನೀಗ ಸತ್ತು ಮಲಗಿದಾನೆ, ಆದ್ರೆ ಬದುಕಿದ್ದಾಗ ಎಚ್ಚರವಾಗಿದ್ದು ಸಾಕಷ್ಟು ಸಾಧನೆ ಮಾಡಿ ಹೋಗಿದಾನೆ. ಇನ್ನೂ ಏನಂತ ಹೇಳಲಿ ನಾನು?' ಎಂದಿದ್ದಾರೆ ನಟಿ ಹಾಗು ಶಂಕರ್‌ ನಾಗ್ ಅವರ ಪತ್ನಿ ಅರುಂಧತಿ ನಾಗ್. 

View post on Instagram