ಕನ್ನಡ ಸಿನಿ ಪ್ರೇಮಿಗಳ ನೆಚ್ಚಿನ ನಟರು, ಒಂದು ಕಾಲದಲ್ಲಿ ಕುಚುಕು ಗೆಳೆಯರು ಅಗಿದ್ದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಫೋಟೋವನ್ನು ಕಲಾವಿದ ಕರಣ್ ಆಚಾರ್ಯ ವಿಭಿನ್ನ ರೀತಿಯಲ್ಲಿ ಡಿಸೈನ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಫೋಟೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

ತುಂಬು ಗರ್ಭಿಣಿ ಮೇಘನಾ ಜೊತೆ ಹೆಜ್ಜೆ ಹಾಕ್ತಿರೋ ಚಿರು: ಮನಮುಟ್ಟುವ ಫೋಟೋ ವೈರಲ್ 

ಪ್ರಿನ್ಸ್‌ ಮಂಜು ಎಂಬ ಅಭಿಮಾನಿಯೊಬ್ಬ ದರ್ಶನ್ ಹಾಗೂ ಸುದೀಪ್ ಫೋಟೋ ಶೇರ್ ಮಾಡಿಕೊಂಡು 'ನೆನಪುಗಳಿಗೆ ಮತ್ತೆ ಜೀವ ತರಬೇಕು. ಸರ್ ಈ ಫೋಟೋವನ್ನು ಹನುಮಾನ್ ಹಾಗೂ ರಾಮನ ಅವತಾರಕ್ಕೆ ಮಾಡಲು ಆಗುತ್ತಾ? ಅಭಿಮಾನಿಗಳೆಲ್ಲರೂ ಖುಷಿಯಾಗುತ್ತಾರೆ,' ಎಂದು ಕೇಳಿ ಕೊಂಡಿದ್ದರು. ಕೆಲವೇ ನಿಮಿಷಗಳಲ್ಲಿ ಕರಣ್ ಈ ಫೋಟೋವನ್ನು ಎಡಿಟ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ. 

 

ಫೋಟೋ ಅದ್ಭುತವಾಗಿ ಮೂಡಿ ಬಂದಿದ್ದು, 'ಅಭಿಮಾನಿಗಳಾಗಿ ನಾವು ಬಯಸುವುದು ಅವರು ಮತ್ತೆ ಒಂದಾಗಬೇಕೆಂದು' ಎಂದು ಒಬ್ಬ ಕಮೆಂಟ್ ಮಾಡಿದರೆ, ಮತ್ತೊಬ್ಬ 'ಇವರಿಬ್ಬರೂ ರಾಮ-ಹನುಮಾನ್. ಆದರೆ ನಮ್ಮ ಉಪೇಂದ್ರ ಸರ್ ರಾವಣ ಮಾಡಬಹುದು,' ಎಂದೂ ಹೇಳಿದ್ದಾರೆ.  ಈಗಾಗಲೇ ರಾಬರ್ಟ್‌ ಸಿನಿಮಾದ ಹಾಡೊಂದರಲ್ಲಿ ದರ್ಶನ್‌ ಅವರನ್ನು ಅಂಜನೇಯನ ರೂಪದಲ್ಲಿ ನೋಡಿದ್ದೀವಿ, ಈ ಫೋಟೋದಲ್ಲಿ ರಾಮನಂತೆ ನೋಡಲು ತುಂಬಾನೇ ಖುಷಿಯಾಗುತ್ತಿದೆ ಎಂದಿದ್ದಾರೆ ಅಭಿಮಾನಿಗಳು.

ಕರಣ್ ಆಚಾರ್ಯ ದೇವರ ಉಗ್ರ ರೂಪದ ಚಿತ್ರ ಬಿಡಿಸುವ ಹಿಂದಿನ ಕಾರಣವೇನು..? 

ದರ್ಶನ್‌- ಸುದೀಪ್‌ ಒಂದಾಗಬೇಕೆಂದು ಅಭಿಮಾನಿಗಳು ಎಲ್ಲಾ ರೀತಿಯ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಈ ಫೋಟೋ ಅವರಿಬ್ಬರಿಗೂ ತಲುಪಬೇಕೆಂದು ಸೋಷಿಯಲ್ ಮೀಡಿಯಾದ ಫ್ಯಾನ್ ಪೇಜ್‌ಗಳು ಎಲ್ಲೆಡೆ ವೈರಲ್ ಮಾಡುತ್ತಿವೆ.