ಪತ್ನಿಯನ್ನು ಬಳಸಿ ಹಿಡಿದು ಹೆಜ್ಜೆ ಹಾಕುತ್ತಿರುವ ಚಿರು ಸರ್ಜಾ | ತುಂಬು ಗರ್ಭಿಣಿ ಮೇಘನಾ ಜೊತೆ ಚಿರು | ಫೊಟೋ ವೈರಲ್ 

ನಟಿ ಮೇಘನಾ ಸರ್ಜಾ ಸೀಮಂತ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೆದಿದೆ. ಆಪ್ತರ ನಡುವೆ ನಡೆದ ಸೀಮಂತ ಕಾರ್ಯಕ್ರಮದ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಚಿರಂಜೀವಿ ಸರ್ಜಾ ಕಟೌಟ್ ಇರಿಸಿದ ಫೋಟೋ ಅಂತೂ ವೈರಲ್ ಆಗಿತ್ತು.

ನಟ ಚಿರು ಸರ್ಜಾ ಸಾವಿನ ನೋವಿನ ಮಧ್ಯೆಯೂ ಸರಳವಾಗಿ ಸೀಮಂತ ಶಾಸ್ತ್ರ ಮಾಡಲಾಗಿತ್ತು. ಈ ಸಂದರ್ಭ ಚಿರು ಇಲ್ಲ ಎಂಬ ನೋವು ಕುಟುಂಬಸ್ಥರಿಗಷ್ಟೇ ಅಲ್ಲ ಫ್ಯಾನ್ಸ್‌ಗೂ ಕಾಡಿದೆ. ಸೀಮಂತದ ಫೋಟೋ ನೋಡಿದರೆ ಒಂದು ಕ್ಷಣ ಚಿರು ಇದ್ದಿದ್ದರೆ ಎನಿಸದಿರದು.

ಚಿರಂಜೀವಿ ಸರ್ಜಾ ಫ್ರೆಂಡ್ಸ್ ಮೇಘನಾಳಿಗೆ ಮಾಡಿದ ಬೇಬಿ ಶವರ್ ಹೇಗಿತ್ತು ನೋಡಿ!

ಇಂತಹ ಯೋಚನೆ ಬಂದ ಅಭಿಮಾನಿಯೊಬ್ಬರು ತಮ್ಮ ಯೋಚನೆಯನ್ನು ಚಿತ್ರದ ರೂಪದಲ್ಲಿ ಕಾಣುವಲ್ಲಿ ಸಫಲರಾಗಿದ್ದಾರೆ. ಅಭಿಮಾನಿಯೊಬ್ಬರು ಮೇಘನಾ ಸೀಮಂತ ಫೋಟೊ ಕಳುಹಿಸಿ ಅದಕ್ಕೆ ಜೀವ ತುಂಬುವಂತೆ ಕೇಳಿಕೊಂಡಿದ್ದರು. ಈ ಆಸೆಯನ್ನು ಕಲಾವಿದ ಕರಣ್ ಆಚಾರ್ಯ ನೆರವೇರಿಸಿದ್ದಾರೆ. ಸೀಮಂತದಲ್ಲಿ ಮೇಘನಾ ಜೊತೆ ಚಿರಂಜೀವಿ ಇರುವಂತಹ ಫೋಟೋ ಶೇರ್ ಮಾಡಿದ್ದಾರೆ ಕಲಾವಿದ.

Click and drag to move

ಮೇಘನಾ ಮನೆ ಸೀಮಂತದ ನಂತ್ರ ಸರ್ಜಾ ಮನೆಯಲ್ಲಿ ಬೇಬಿ ಶವರ್ ನಡೆದಿದೆ. ಮೇಘನಾ ರಾಜ್ ಬೇಬಿ ಶವರ್ ಅರೆಂಜ್ ಮಾಡಿದ ಧ್ರುವಾ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ಚಿರು ಆಸೆಯಂತೆ ಬೇಬಿ ಶವರ್ ಆಯೋಜಿಸಿದ ಆಕ್ಷನ್ ಪ್ರಿನ್ಸ್ ಅತ್ತಿಗೆಯ ಬೇಬಿ ಶವರ್ ಜೊತೆಯಲ್ಲಿ ಬರ್ತ್‌ಡೇ ಆಚರಿಸಿದ್ದಾರೆ.

ಚಿರು ಅಗಲಿಕೆಯ ನೋವಿನ ನಡುವೆಯೂ ಹೊಸ ಭರವಸೆಯ ಬೆಳ್ಳಿರೇಖೆ

32ನೇ ವರ್ಷಕ್ಕೆ ಕಾಲಿಟ್ಟ ಬಹದ್ದೂರ್ ಹುಡುಗ ಈ ಬಾರಿ ಅಭಿಮಾನಿಗಳ ಜೊತೆ ಸಂಭ್ರಮಾಚರಿಸಿಲ್ಲ. ಸೋಷಿಯಲ್ ಮಿಡಿಯಾ‌ಮೂಲಕ ಫ್ಯಾನ್ಸ್ ಗೆ ಧ್ರುವ ಸರ್ಜಾ ಮನವಿ ಮಾಡಿದ್ದು, ಅಭಿಮಾನಿಗಳೇ ನಮ್ಮ ಅನ್ನದಾತರು, ಪ್ರತಿ ವರ್ಷ ನಮ್ಮ ಮನೆಗೆ ಬಂದು ತೋರಿಸೋ ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿ ಎಂದಿದ್ದಾರೆ.

"

ಈ ವರ್ಷದ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತೇ ಇದೆ. ಒಂದೆಡೆ ಕರೋನ ಹೆಚ್ಚಿದ್ರೆ, ಮತ್ತೊಂದೆಡೆ ಅಣ್ಣನ ಅಗಲಿಕೆ ನೋವು. 
ಅಭಿಮಾನಿಗಳನ್ನ ಮನೆಯ ಬಳಿ ಬರಬೇಡಿ ಎನ್ನಲು ನನಗೆ ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀ ರಕ್ಷೆ ಎಂದು ಟ್ವೀಟ್ ಮಾಡಿದ್ದಾರೆ.