ಪುನೀತ್ ರಾಜ್‌ಕುಮಾರ್ ಅಭಿನಯದ ಮೊಟ್ಟಮೊದಲ 'ಅಪ್ಪು' ಸಿನಿಮಾ ಮರುಬಿಡುಗಡೆ ಆಗಿದೆ. ಬೆಂಗಳೂರಿನ ವೀರೇಶ್ ಥಿಯೇಟರ್ ಹೌಸ್‌ಫುಲ್ ಆಗಿದೆ. ಅಪ್ಪು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಕ್ಷಿತಾ ಪ್ರೇಮ್ ಅಪ್ಪು ಸಿನಿಮಾ ವೀಕ್ಷಿಸಲು ಬಂದಿದ್ದಾರೆ..
ಇಂದು ಮಾಗಡಿ ರಸ್ತೆಯ ವೀರೇಶ್ ಥಿಯೇಟರ್ ಮುಂದೆ ಫ್ಯಾನ್ಸ್ ಸಂಭ್ರಮ ಮಿತಿಮೀರಿದೆ. ಅದಕ್ಕೆ ಕಾರಣವಾಗಿದ್ದು ಪುನೀತ್ ರಾಜ್‌ಕುಮಾರ್ ((Puneeth Rajkumar) ) ಮೊಟ್ಟಮೊದಲ ಅಭಿನಯದ 'ಅಪ್ಪು' ಸಿನಿಮಾ ಮರುಬಿಡುಗಡೆ. ಇಂದು ಪುನೀತ್ ಪತ್ನಿ ಅಶ್ವಿನಿ ಹುಟ್ಟಹಬ್ಬದಂದು ಅಪ್ಪು (Appu) ಬಿಡುಗಡೆ ಆಗಿದ್ದು, ಬೆಂಗಳೂರಿನ ವೀರೇಶ್ ಥಿಯೇಟರ್ ಹೌಸ್‌ಫುಲ್ ಆಗಿದೆ. ಅಪ್ಪು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಕ್ಷಿತಾ ಪ್ರೇಮ್ ಅವರು ತಮ್ಮ ಹಾಗೂ ದಿವಂಗತ ಪುನೀತ್ ಮೊಟ್ಟಮೊದಲ ಸಿನಿಮಾವನ್ನು ಮತ್ತೆ ವೀಕ್ಷಿಸಲು ಬಂದಿದ್ದಾರೆ.
ಅಷ್ಟೇ ಅಲ್ಲ, ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಹಾಗೂ ಕಿಶನ್ ಆಗಮನ ಕೂಡ ಆಗಮಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ನಟನೆಯ ಆಕಾಶ್ ಚಿತ್ರದ ನಿರ್ದೇಶಕ ಮಹೇಶ್ ಬಾಬು ಕೂಡ ಆಗಮಿಸಿದ್ದು, ಅಪ್ಪುಗೆ ಅಭೂತಪೂರ್ವ ಸ್ವಾಗತ ಹಾಗೂ ಪ್ರೀತಿ ಎಲ್ಲಾ ಕಡೆಗಳಿಂದ ವ್ಯಕ್ತವಾಗುತ್ತಿದೆ. ಜೊತೆಗೆ, ಅಪ್ಪು ಸಿನಿಮಾ ಕಣ್ತುಂಬಿಕೊಳ್ಳಲು ಆಗಮಿಸಿದ ಸರಿಗಮಪ ಸ್ಪರ್ಧಿಗಳು ಕೂಡ ಆಗಮಿಸಿದ್ದಾರೆ. ನಟಿ ರಕ್ಷಿತಾ ಅಭಿನಯದ ಚೊಚ್ಚಲ ಸಿನಿಮಾ ಅಪ್ಪು. ಅದನ್ನು ಮರೆಯದೇ ಥಿಯೇಟರ್‌ಗೆ ಆಗಮಿಸಿದ ನಟಿ ರಕ್ಷಿತಾ ನಡೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
Appu: ಅಶ್ವಿನಿ ಹುಟ್ಟುಹಬ್ಬದ ದಿನವೇ 'ಅಪ್ಪು' ತೆರೆಗೆ ಬಂತು, ಫ್ಯಾನ್ಸ್ ಅಭಿಮಾನಕ್ಕೆ ಸಾಕ್ಷಿಯಾಗಿದೆ ವೀರೇಶ್!
ಮಾಗಡಿ ರಸ್ತೆಯ ವೀರೇಶ್ ಥಿಯೇಟರ್ ಗೆ ಆಗಮಿಸಿದ ರಕ್ಷಿತಾ ಪ್ರೇಮ್, ಸಿನಿಮಾ ವೀಕ್ಷಿಸುತ್ತಿದ್ದಾರೆ. ಆಕಾಶ್ ಸಿನಿಮಾ ನಿರ್ದೇಶಕ ಮಹೇಶ್ ಬಾಬು ಕೂಡ ಅಪ್ಪು ವೀಕ್ಷಿಸುತ್ತಿದ್ದಾರೆ. ಮುಂದಿನ ಶೋಗೆ ನಟಿ ರಮ್ಯಾ ಬರುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಹಲವಾರು ಸಿನಿಮಾ ತಾರೆಯರು, ಕಿರುತೆರೆ ನಟನಟಿಯರು ಅಪ್ಪು ಸಿನಿಮಾ ನೋಡಲು ಬೆಂಗಳೂರಿನ ವೀರೇಶ್ ಥಿಯೇಟರ್‌ಗೆ ಹೋಗಿದ್ದಾರೆ.
ಡಾ ರಾಜ್‌ಕುಮಾರ್ (Dr Rajkumar) ಕಿರಿಯ ಮಗ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಇದೇ ತಿಂಗಳು 17ಕ್ಕೆ ಎಂಬುದು ಎಲ್ಲರಿಗೂ ಗೊತ್ತು. ಇಂದು, ಅಂದರೆ ಅಂದರೆ 14 ಮಾರ್ಚ್ 2025ರಂದು ಪುನೀತ್ ನಟನೆಯ ಮೊಟ್ಟಮೊದಲ ಸಿನಿಮಾ ಅಪ್ಪು ಮರುಬಿಡುಗಡೆ ಆಗಿದೆ. ಬೆಂಗಳೂರಿನ ವೀರೇಶ್ ಥಿಯೇಟರ್ ಮುಂದೆ ಅಪ್ಪು ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ. ಬೆಳಿಗ್ಗೆ 6.00 ಗಂಟೆಗೇ ಮೊದಲ ಶೋ ಶುರುವಾಗಿದ್ದು, 2002 ರಲ್ಲಿ ಬಿಡುಗಡೆಯಾಗಿದ್ದ ಅಪ್ಪು ಸಿನಿಮಾ ನೋಡಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ.
Appu Re-Release: 'ಅಪ್ಪು' ಶತದಿನ ಸಂಭ್ರಮದ ಅಪರೂಪದ ವೀಡಿಯೋ ವೈರಲ್, ಇನ್ನೂ ನೋಡಿಲ್ವಾ ..!?
ಅಚ್ಚರಿ ಎಂಬಂತೆ, ಇಂದು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಕೂಡ ಹೌದು. ಇಂದು ಸ್ವತಃ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಅಪ್ಪು ಸಿನಿಮಾ ಮರುಬಿಡುಗಡೆಗೆ ಚಾಲನೆ ನೀಡಿದರು. ಅಭಿಮಾನಿಗಳ ಎಲ್ಲೆಮೀರಿದ ಪ್ರೀತಿಗೆ 'ನಮೋ' ಎನ್ನುತ್ತ ಅಶ್ವಿನಿ ಅವರು ಅಪ್ಪು ಸಿನಿಮಾವನ್ನು ಮತ್ತೆ ನೋಡಿ ಕಣ್ತುಂಬಿಕೊಂಡರು. ಸದ್ಯ ಅಪ್ಪು ಸಿನಿಮಾ ಪ್ರದರ್ಶನ ಯಶಸ್ವಿಯಾಗಿ ನಡೆಯುತ್ತಿದ್ದು, ಕರ್ನಾಟಕದ ಹಲವು ಕಡೆಗಳಲ್ಲಿ ಮರುಬಿಡುಗಡೆ ಕಂಡಿರುವ ಅಪ್ಪು ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
