ಅಪ್ಪು ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಡಾ ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್, ಪುನೀತ್ ಅಣ್ಣಂದಿರಾದ ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಇಡೀ ಕುಟುಂಬ ಅಲ್ಲಿ ಹಾಜರಿತ್ತು. ಜೊತೆಗೆ, ಭಾರತದ ಸೂಪರ್ ಸ್ಟಾರ್..
ದಿವಂಗತ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ 'ಅಪ್ಪು' ಸಿನಿಮಾ ನಾಳೆ ರೀ-ರಿಲೀಸ್ ಆಗಲಿದೆ. ಈ ಸಂಗತಿ ಬಹಳಷ್ಟು ಜನರಿಗೆ ಗೊತ್ತು. ಈ ತಿಂಗಳು 17 ರಂದು (17 March) ನಟ ಪುನೀತ್ ಹುಟ್ಟುಹಬ್ಬ. ಈ ಪ್ರಯುಕ್ತ ನಾಳೆ, ಅಂದರೆ 14 ಮಾರ್ಚ್ 2025ರಂದು ಅಪ್ಪು ಸಿನಿಮಾ ಮರುಬಿಡುಗಡೆ ಕಾಣಲಿದೆ. ಇದಕ್ಕಾಗಿ ಕರ್ನಾಟಕದಾದ್ಯಂತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಪ್ಪು ಸಿನಿಮಾ ಹಾಗೂ ನಟ ಅಪ್ಪು ಫ್ಯಾನ್ಸ್‌ಗಳು ಈ ಖುಷಿಯ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.
ಅಪ್ಪು ಚಿತ್ರವು ಡಾ ರಾಜ್‌ಕುಮಾರ್ (Rajkumar) ಕಿರಿಯ ಮಗ ಪುನೀತ್ ರಾಜ್‌ಕುಮಾರ್ ಅವರ ವೃತ್ತಿಜೀವನದ ಮೊಟ್ಟಮೊದಲ ಚಿತ್ರವಾಗಿದೆ. ಈ ಚಿತ್ರವು 26 ಏಪ್ರಿಲ್ 2002 ರಲ್ಲಿ (26 April 2002) ಬಿಡುಗಡೆಯಾಗಿ ಶತದಿನೋತ್ಸವ ಆಚರಿಸಿಕೊಂಡಿದೆ, ಈ ಚಿತ್ರವನ್ನು ತೆಲುಗಿನ ಪುರಿ ಜಗನ್ನಾಥ್ ಅವರು ನಿರ್ದೇಶಿಸಿದ್ದಾರೆ. ನಟಿ ರಕ್ಷಿತಾ ಅವರು ಈ ಚಿತ್ರದಲ್ಲಿ ನಟ ಪುನೀತ್ ಅವರಿಗೆ ಜೋಡಿಯಾಗಿದ್ದಾರೆ. ಈ ಚಿತ್ರದ ಶತದಿನೋತ್ಸವ ಸಮಾರಂಭದ ಅಪರೂಪದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮೊದಲ ಚಿತ್ರದ ಟೈಮಲ್ಲೇ ಇಬ್ಬರು ದಿಗ್ಗಜರಿಂದ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದ ಅಪ್ಪು..!
ಅಪ್ಪು ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಡಾ ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್, ಪುನೀತ್ ಅಣ್ಣಂದಿರಾದ ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಇಡೀ ಕುಟುಂಬ ಅಲ್ಲಿ ಹಾಜರಿತ್ತು. ಜೊತೆಗೆ, ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಹಾಜರಿದ್ದರು. ಅಪ್ಪು ಚಿತ್ರದ ಶತದಿನೋತ್ಸವ ಸಮಾರಂಭದ ಸ್ಮರಣ ಫಲಕ ನೀಡಿ ಗೌರವಿಸುವಾಗ ಸ್ವತಃ ಡಾ ರಾಜ್‌ಕುಮಾರ್ ಹಾಗೂ ರಜನಿಕಾಂತ್ (Rajinikanth) ಅವರು ಅಪ್ಪುಗೆ ಪಟ್ಟಾಭಿಷೇಕ ಮಾಡಿದ್ದರು.
ಅಪ್ಪು ಈಗ ಬದುಕಿಲ್ಲದ ಕಾರಣಕ್ಕೆ ಅನಿವಾರ್ಯವಾಗಿ ಅವರ ಹಳೆಯ ಸಿನಿಮಾ ಬಿಡುಗಡೆ ಆಗುತ್ತಿದೆ, ಅಂದು ನೋಡದಿದ್ದವರು ನೋಡುತ್ತಾರೆ, ನೋಡಿದವರು ಕೂಡ ಇನ್ನೊಮ್ಮೆ ನೋಡುತ್ತಾರೆ. ಅಭಿಮಾನಿಗಳಂತೂ ಮತ್ತೆಮತ್ತೆ ನೋಡುತ್ತಾರೆ. ಆದ್ದರಿಂದ, ಆ ಕಾರಣಕ್ಕಾಗಿಯೇ ಅಪ್ಪು ಮತ್ತೆ ತೆರೆಯ ಮೇಲೆ ಬರುತ್ತಿದ್ದಾರೆ. ಆದರೆ, 17ಕ್ಕೆ ಅಲ್ಲ, ಹದಿನಾಲ್ಕಕ್ಕೇ ತೆರೆಗೆ ಬರಲಿದ್ದಾರೆ. ಅಪ್ಪು ಅಭಿಮಾನಿಗಂತೂ ಹಿರಿಹಿರಿ ಹಿಗ್ಗುತ್ತಿದ್ದಾರೆ, ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.
ಇದು.. ಇದು.. ವೈರಲ್ ಆಗ್ಬೇಕಾಗಿರೋದು! ಡಾ ರಾಜ್‌ಕುಮಾರ್ ಬಗ್ಗೆ ಕಿಶೋರ್ ಹೇಳಿದ್ದೇನು?
ಒಟ್ಟಿನಲ್ಲಿ, ಮೇರು ನಟ ಡಾ ರಾಜ್‌ಕುಮಾರ್ ಮಗನಾಗಿರುವ ಪುನೀತ್, ಆರಂಭದಲ್ಲೇ ತಮ್ಮ ಅಪ್ಪಾಜಿ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರಿಬ್ಬರದೂ ಆಶೀರ್ವಾದ ಪಡೆದಿದ್ದರು. ಬಳಿಕ ಅವರ ಸಾಧನೆ, ಸಾವು ಎಲ್ಲವೂ ಎಲ್ಲರಿಗೂ ಗೊತ್ತಿರುವಂಥದ್ದೇ.. ಆದರೆ, ನಟ ಪುನೀತ್ ಹುಟ್ಟಹಬ್ಬದ ಈ ಸಂದರ್ಭದಲ್ಲಿ ಅವರ ನೆನಪು ಹೆಚ್ಚು ಆಗುವುದು ಸಹಜ. ಉಳಿದ ಟೈಮಲ್ಲಿ ಕೂಡ ಅವರದು ಮರೆಯುವಂಥ ವ್ಯಕ್ತಿತ್ವ ಅಲ್ಲ ಬಿಡಿ.. ಸ್ಟೋರಿಗೆ ಲಿಂಕ್ ಮಾಡಿರುವ ಈ ಅಪರೂಪದ ವಿಡಿಯೋ ನೋಡಿ..
