ಎಐ ತಂತ್ರಜ್ಞಾನದ ಮೂಲಕ ಎಲ್ಲಾ ಭಾಷೆಗಳಲ್ಲೂ ನನ್ನದೇ ಧ್ವನಿ ಅಳವಡಿಕೆ: ಧ್ರುವ ಸರ್ಜಾ ಹೇಳಿದ್ದೇನು?
ಧ್ರುವ ಸರ್ಜಾ ನಟನೆ, ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರಕ್ಕೆ ಈಗಾಗಲೇ ಡಬ್ಬಿಂಗ್ ಕಾರ್ಯ ಆರಂಭವಾಗಿದೆ. ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರ ಯುಗಾದಿ ಹೊತ್ತಿಗೆ ತೆರೆ ಮೇಲೆ ಮೂಡಲಿದೆ. ಡಿಸೆಂಬರ್ 24ಕ್ಕೆ ಚಿತ್ರದ ಮೊದಲ ಹಾಡು ಬಿಡುಗಡೆ ಆಗಲಿದೆ.
ಧ್ರುವ ಸರ್ಜಾ ನಟನೆ, ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರಕ್ಕೆ ಈಗಾಗಲೇ ಡಬ್ಬಿಂಗ್ ಕಾರ್ಯ ಆರಂಭವಾಗಿದೆ. ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರ ಯುಗಾದಿ ಹೊತ್ತಿಗೆ ತೆರೆ ಮೇಲೆ ಮೂಡಲಿದೆ. ಡಿಸೆಂಬರ್ 24ಕ್ಕೆ ಚಿತ್ರದ ಮೊದಲ ಹಾಡು ಬಿಡುಗಡೆ ಆಗಲಿದೆ. ಜೋಗಿ ಪ್ರೇಮ್, ‘ಕಳೆದ ಒಂದು ವಾರದಿಂದ ಚಿತ್ರಕ್ಕೆ ಡಬ್ಬಿಂಗ್ ನಡೆಯುತ್ತಿದೆ. 2 ಹಾಡುಗಳ ಚಿತ್ರೀಕರಣ ಬಾಕಿ ಇದೆ. ಈ ಪೈಕಿ ಒಂದು ಹಾಡನ್ನು ಸೆಟ್ ಹಾಕಿ ಚಿತ್ರೀಕರಿಸಲಿದ್ದು, ಮತ್ತೊಂದು ಹಾಡಿನ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಪ್ಲಾನ್ ಇದೆ. ಡಿ.24ರಂದು ‘ಶಿವ ಶಿವ...’ ಹೆಸರಿನ ಮೊದಲ ಹಾಡು ಆನಂದ್ ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಲಿದೆ.
ಈ ಹಾಡಿಗೆ ನಾನು ಮತ್ತು ಕೈಲಾಶ್ ಖೇರ್ ಹಾಡಿದ್ದೇವೆ. ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಅಲ್ಲಿನ ಗಾಯಕರೇ ಹಾಡಿದ್ದಾರೆ. ಒಂದು ಜನಪದ ಶೈಲಿಯ ಹಾಡು ಸೇರಿದಂತೆ ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು ‘ಕೆಡಿ’ ಇಂಡಿಯಾದಲ್ಲೇ ದೊಡ್ಡ ಆಲ್ಬಂ ಆಗಿ ಹೊರಹೊಮ್ಮಲಿದೆ. ಸಿನಿಮಾ ನೋಡಿದ ಮೇಲೆ ನಮಗೂ ಒಬ್ಬ ಅಣ್ಣ, ತಮ್ಮ, ಮಗ ಈಥರ ಇರಬೇಕಿತ್ತು ಅನಿಸುವ ಮಟ್ಟಿಗೆ ಚಿತ್ರದ ನಾಯಕನ ಪಾತ್ರ ಮೂಡಿ ಬಂದಿದೆ. ಧ್ರುವ ಸರ್ಜಾ ಅವರ ಪಾತ್ರಕ್ಕೆ ಎಲ್ಲಾ ಭಾಷೆಗಳಲ್ಲೂ ಅವರದ್ದೇ ಧ್ವನಿ ಇರುವಂತೆ ಎಐ ತಂತ್ರಜ್ಞಾನದ ಮೊರೆ ಹೋಗುತ್ತಿದ್ದೇವೆ’ ಎಂದರು.
ಧ್ರುವ ಸರ್ಜಾ, ‘ನಾನು ಇಲ್ಲಿ 80ರ ದಶಕದ ಯುವಕ ಕಾಳಿದಾಸ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. 21 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡೆ. ಬಹುಭಾಷೆಯ ಚಿತ್ರ ಇದಾಗಿದ್ದು, ಎಐ ತಂತ್ರಜ್ಞಾನದ ಮೂಲಕ ಎಲ್ಲಾ ಭಾಷೆಗಳಲ್ಲಿ ನನ್ನ ಪಾತ್ರಕ್ಕೆ ನನ್ನದೇ ಧ್ವನಿಯನ್ನು ಅಳವಡಿಸುತ್ತಿದ್ದಾರೆ. ಇದು ನನ್ನ ಸಿನಿಮಾ ಪಯಣದ ಹೊಸ ಸಾಹಸ ಇಂತಲೇ ಹೇಳಬೇಕು. ನಾನು ಏನೇ ರಿಸ್ಕ್ ಮಾಡಿದರೂ ಅದು ಸಿನಿಮಾಗಾಗಿ ಮಾತ್ರ. ಅಭಿಮಾನಿಗಳನ್ನು ಹಾಗೂ ಪ್ರೇಕ್ಷಕರನ್ನು ರಂಜಿಸಲು ನಾನು ಸಿನಿಮಾ ಮಾಡುತ್ತೇನೆ’ ಎಂದರು.
ಮಗನಿಗೋಸ್ಕರ ನಟಿ ಸಮಂತಾಗೆ ಫಾರ್ಮ್‌ಹೌಸ್ ಗಿಫ್ಟ್ ಕೊಟ್ಟ ಸ್ಟಾರ್ ನಿರ್ಮಾಪಕ: ಯಾಕೆ?
ನಿರ್ಮಾಪಕ ಸುಪ್ರೀತ್, ‘ಸದ್ಯದಲ್ಲೇ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದ್ದೇನೆ. ಆಡಿಯೋ ಮಾರಾಟದ ಹೊರತಾಗಿ ಚಿತ್ರದ ಬೇರೆ ಯಾವುದೇ ಬಿಸಿನೆಸ್ ಇನ್ನೂ ಆರಂಭಿಸಿಲ್ಲ’ ಎಂದರು. 1970-75ರ ಕಾಲಘಟ್ಟದಲ್ಲಿ ನಡೆದ ನೈಜ ಘಟನೆ ಆಧರಿತ ಮಾಡಿದ ಗ್ಯಾಂಗ್‌ಸ್ಟರ್ ಕತೆ ಈ ಚಿತ್ರಲ್ಲಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ರೀಷ್ಮಾ ನಾಣಯ್ಯ, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಮುಂತಾದವರು ಚಿತ್ರದ ಮುಖ್ಯ ಪಾತ್ರಧಾರಿಗಳು.