ಈಗ ಅದೇ ಸೆಂಟಿಮೆಂಟ್‌ನಲ್ಲಿ ಈ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಹೀಗೆ ತಮ್ಮ ಹೊಸ ಚಿತ್ರದ ಮಾಹಿತಿ ಬಿಟ್ಟುಕೊಟ್ಟಿದ್ದು ‘ಕಿಸ್’ ಚಿತ್ರದ ನೂರನೇ ದಿನದ ಸಂಭ್ರಮದಲ್ಲಿ. ಜತೆಗೆ ಹೊಸ ಚಿತ್ರದ ಪೋಸ್ಟರ್ ಕೂಡ ಅನಾವರಣ ಮಾಡಿದರು. ಅರ್ಜುನ್ ಅವರ ‘ಕಿಸ್’ ಚಿತ್ರ ಮೊನ್ನೆ ಶತ ದಿನೋತ್ಸವ ಆಚರಿಸಿಕೊಂಡಿದೆ. ತಮ್ಮ ಸಿನಿಮಾ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆ ಚಿತ್ರತಂಡ ದೊಂದಿಗೆ ನಿರ್ದೇಶಕರ ಮಾಧ್ಯಮಗಳ ಮುಂದೆಬಂದರು.

ಜತೆಗೆ ಚಿತ್ರರಂಗದಿಂದ ಹಲವರು ಈ ಕಾರ್ಯಕ್ರಮಕ್ಕೆ ಸಾಕ್ಷಿ ಆದರು. ಆ ಮೂಲಕ ಈ ವರ್ಷ ನೂರು ದಿನ ಕಂಡ ಸಿನಿಮಾ ಎನ್ನುವ ಪಟ್ಟಿಗೆ ಸೇರಿಕೊಂಡಿದ್ದು ‘ಕಿಸ್’ನ ಹೆಗ್ಗಳಿಕೆ.

ಚಿತ್ರ ವಿಮರ್ಶೆ: ಕಿಸ್

ವಿರಾಟ್ ಹಾಗೂ ಶ್ರೀಲೀಲಾ ಕಾಂಬಿನೇಷನ್‌ನ ಚಿತ್ರವದು. ಎಲ್ಲ ವರ್ಗದ ಪ್ರೇಕ್ಷಕರನ್ನು ಮೆಚ್ಚಿಸಿದ ಸಿನಿಮಾ. ಯೂತ್ ಫುಲ್ ಪ್ರೇಮ ಕತೆಯ ಮೂಲಕ ನಾಯಕ, ನಾಯಕಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖುಷಿ ನಿರ್ದೇಶಕರದ್ದು. ‘ನಿರ್ದೇಶಕನಾಗಿ ನಿರ್ಮಾಣ ಮಾಡಿದ ಸಿನಿಮಾ ಇದು. ನಿರ್ಮಾಪಕರ ಕಷ್ಟಗಳು ಏನೆಂದು ಈ ಸಿನಿಮಾ ಮೂಲಕ ಗೊತ್ತಾಯಿತು. ನಾನು ಈ ಚಿತ್ರಕ್ಕೆ ನಿರ್ಮಾಪಕ ಎನಿ ಸಿಕೊಂಡಾಗ ನನ್ನ ಬ್ಯಾಂಕ್‌ನಲ್ಲಿದ್ದ ಹಣ ಕೇವಲ ೨೬೮ ರುಪಾಯಿ. ನಂತರ ಗೆಳೆಯರು, ಚಿತ್ರರಂಗದ ಸ್ನೇಹಿತರು, ನೆಂಟರು ಸೇರಿ ಒಂದೂವರೆ ಕೋಟಿ ನನಗೆ ಸಹಾಯ ಮಾಡಿದರು.

ಇದರಲ್ಲಿ ನಟ ಚಿಕ್ಕ ಣ್ಣನ ಪಾಲು ದೊಡ್ಡದು. ಎಲ್ಲರ ಶ್ರಮ ಈ ಚಿತ್ರವನ್ನು ಗೆಲ್ಲಿಸಿದೆ. ನಿರ್ಮಾಪಕನಾಗಿ ಇದು ನನಗೆ ಮೊದಲ ಸಂಭ್ರಮ’ ಎಂದರು ಎ ಪಿ ಅರ್ಜುನ್. ಶಿವರಾಜ್.ಕೆ.ಅರ್.ಪೇಟೆ, ಸುಂದರ್, ಶಮಂತ್‌ಶೆಟ್ಟಿ, ಗಿರಿ, ವಿ ಹರಿಕೃಷ್ಣ, ಚಿತ್ರಕ್ಕೆ ದುಡಿದ ತಂತ್ರಜ್ಞರು ಚಿತ್ರದ ನೂರು ದಿನಗಳ ನೆನಪಿನ ಕಾಣಿಕೆ ಸ್ವೀಕರಿಸಿದರು. ಶೈಲಜಾನಾಗ್, ಅರ್ಜುನ್ ಪೋಷಕರು, ಕುಟುಂಬವರ್ಗದವರು ಹಾಜರಿದ್ದರು.