Asianet Suvarna News Asianet Suvarna News

ರಿಷಬ್ ಶೆಟ್ಟಿ ನೀವು ಅದ್ಭುತ; 'ಕಾಂತಾರ' ನೋಡಿ ವಿಮರ್ಶೆ ಮಾಡಿದ ಅನುಷ್ಕಾ ಶೆಟ್ಟಿ

ಅನುಷ್ಕಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ. ಚಿತ್ರ ವೀಕ್ಷಿಸಿದ ಬಳಿಕ ಅನುಷ್ಕಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

Anushka Shetty watched rishab shetty starrer kantara film says totally loved it sgk
Author
First Published Oct 16, 2022, 12:44 PM IST

ಭಾರತೀಯ ಸಿನಿಮಾರಂಗದಲ್ಲಿ ಈಗ ಕನ್ನಡದ ಕಾಂತಾರದ್ದೇ ಸದ್ದು. ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾ ಗಡಿಗೂ ಮೀರಿ ಅಬ್ಬರಿಸುತ್ತಿದೆ. ಸ್ಯಾಂಡಲ್ ವುಡ್‌ನಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಾಣುತ್ತಿದ್ದಂತೆ ಪರಭಾಷೆಯಲ್ಲೂ ರಿಲೀಸ್ ಮಾಡುವಂತೆ ಕಾಂತಾರಗೆ ಬೇಡಿಕೆ ಹೆಚ್ಚಾಯಿತು. ಇದೀಗ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ. ಅಂದಹಾಗೆ ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಸೆಲೆಬ್ರಿಟಿಗಳು ಸಹ ಕಾಂತಾರ ಸಿನಿಮಾಗೆ ಫಿದಾ ಆಗಿದ್ದಾರೆ. ಈಗಾಗಲೇ ಅನೇಕ ಸ್ಟಾರ್ಸ್ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. 

ತೆಲುಗು ಸ್ಟಾರ್ ಪ್ರಭಾಸ್, ನಾನಿ, ರಾಣಾ ದಗ್ಗುಬಾಟಿ, ಮಲಯಾಳಂ ನಟ ಪೃಥ್ವಿರಾಜ್ ಹಾಗೂ ತಮಿಳು ನಟ ಧನುಷ್, ಕಾರ್ತಿ ಸೇರಿದಂತೆ ಅನೇಕ ಸ್ಟಾರ್ಸ್ ಕಾಂತಾರ ನೋಡಿ ಹಾಡಿಹೊಗಳಿದ್ದಾರೆ. ವಿಶೇಷ ಎಂದರೆ ತೆಲುಗು ಸ್ಟಾರ್ ಪ್ರಭಾಸ್ ಎರಡು ಬಾರಿ ಕಾಂತಾರ ಸಿನಿಮಾ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಕನ್ನಡ ಮೂಲದ ತೆಲುಗು ಸ್ಟಾರ್ ನಟಿ ಅನುಷ್ಕಾ ಶೆಟ್ಟಿ, ಕಾಂತಾರ ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಚಿತ್ರದ ಬಗ್ಗೆ ಅನುಷ್ಕಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ಮಾಡಿದ್ದಾರೆ.  

ಇದೀಗ ಅನುಷ್ಕಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ. ಚಿತ್ರ ವೀಕ್ಷಿಸಿದ ಬಳಿಕ ಅನುಷ್ಕಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. 'ಕಾಂತಾರ ಸಿನಿಮಾ ವೀಕ್ಷಿಸಿದೆ. ತುಂಬಾ ತುಂಬಾ ಇಷ್ಟವಾಯಿತು. ಪ್ರತಿಯೊಬ್ಬ ಕಲಾವಿದರು, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಗಳು. ಕಾಂತಾರ ಇಡೀ ತಂಡ ಅಮೇಜಿಂಗ್. ಈ ಅದ್ಭುತ ಅನುಭವಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ರಿಷಬ್ ಶೆಟ್ಟಿ ನೀವು ಅದ್ಭುತ. ದಯವಿಟ್ಟು ಚಿತ್ರಮಂದಿರದಲ್ಲಿ ಈ ಚಿತ್ರ ವೀಕ್ಷಿಸಿ' ಎಂದು ಹೇಳಿದ್ದಾರೆ.

2 ಬಾರಿ ಸಿನಿಮಾ ನೋಡಿ ಪ್ರಭಾಸ್ ಹೇಳಿದ್ದೇನು?

ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಭಾಸ್, 'ಕಾಂತಾರ ಎರಡನೇ ಬಾರಿ ವೀಕ್ಷಿಸಿದೆ. ಎಂತಹ ಅಸಾಧಾರಣ ಅನುಭವ. ಅದ್ಭುತವಾದ ಕಾನ್ಸೆಪ್ಟ್ ಮತ್ತು ಕ್ಲೈಮ್ಯಾಕ್ಸ್ ಥ್ರಿಲ್ಲಿಂಗ್ ಆಗಿದೆ. ಎಲ್ಲರೂ ಚಿತ್ರಮಂದಿರಗಳಲ್ಲಿ ನೋಡಲೇ ಬೇಕಾದ ಸಿನಿಮಾವಾಗಿದೆ' ಎಂದು ಹೇಳಿದ್ದರು.  

ಕಾಂತಾರ ನೋಡಿ ರಿಷಬ್ ತಬ್ಬಿಕೊಂಡ ಕಾರ್ತಿ

ಕಾಂತಾರ ಚಿತ್ರವನ್ನು ವೀಕ್ಷಿಸಿದ ನಟ ಕಾರ್ತಿ ಮೆಚ್ಚಿಕೊಂಡಿದ್ದಾರೆ. ರಿಷಬ್ ಶೆಟ್ಟಿಯನ್ನು ತಬ್ಬಿಕೊಂಡು ಸಂತಸ ಪಟ್ಟರು. ಇತ್ತೀಚಿಗಷ್ಟೆ ತಮಿಳು ನಟ ಕಾರ್ತಿ ಮತ್ತು ರಿಷಬ್ ಶೆಟ್ಟಿ ಇಬ್ಬರೂ ಭೇಟಿಯಾಗಿದ್ದರು. ನಟ ಕಾರ್ತಿ ಕಾಂತಾರ ಅದ್ಭತವಾದ ಸಿನಿಮಾ, ತುಂಬಾ ಚೆನ್ನಾಗಿದೆ ಎಂದು ತಮಿಳಿನಲ್ಲೇ ಹೇಳಿದರು. ಕೈಯಲ್ಲಾ ತುಂಬಾ ನಡುಗುತ್ತಿತ್ತು ಎಂದು ಕಾರ್ತಿ ಹೇಳಿದರು. ಇನ್ನು ರಿಷಬ್ ಶೆಟ್ಟಿ ಸಿನಿಮಾದ ಬಗ್ಗೆ ಕಾರ್ತಿಗೆ ವಿವರಿಸಿದರು.  

2ನೇ ಬಾರಿ ಕಾಂತಾರ ವೀಕ್ಷಿಸಿ ಪ್ರಭಾಸ್; ಎಲ್ಲರೂ ನೋಡಲೇ ಬೇಕಾದ ಸಿನಿಮಾ ಎಂದ 'ಸಲಾರ್' ಸ್ಟಾರ್

ಕಾಂತಾರ ಹೊಗಳಿದ ಧನುಷ್ 

ಕಾಂತಾರ ಸಿನಿಮಾ ನೋಡಿ ತಮಿಳು ನಟ ಧನುಷ್ ಹಾಡಿಹೊಗಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಧನುಷ್, 'ಕಾಂತಾರ ಮೈಂಡ್ ಬ್ಲೋಯಿಂಗ್. ನೋಡಲೇ ಬೇಕಾದ ಸಿನಿಮಾ. ರಿಷಬ್ ಶೆಟ್ಟಿ ನಿಮ್ಮ ಬಗ್ಗೆ ನೀವು ಹೆಮ್ಮೆ ಪಡಬೇಕು. ಬೌಂಡರಿಗಳನ್ನು ದಾಟಿ ಸಿನಿಮಾ ಮಾಡುತ್ತಿರುವ ಹೊಂಬಾಳೆ ಫಿಲ್ಮ್‌ಗೆ ಅಭಿನಂದನೆಗಳು. ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರಿಗೆ ದೊಡ್ಡ ಹಗ್. ದೇವರು ಒಳ್ಳೆದು ಮಾಡಲಿ' ಎಂದು ಹೇಳಿದರು. 

ಯಶ್ 'KGF-2' ಹಿಂದಿಕ್ಕಿದ ರಿಷಬ್ 'ಕಾಂತಾರ'; ಅತೀ ಹೆಚ್ಚು ರೇಟಿಂಗ್ ಪಡೆದ ಭಾರತದ ಚಿತ್ರ

 ಕಾಂತಾರ ಬಗ್ಗೆ

ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಪಾತ್ರ ಗಮನಾರ್ಹವಾಗಿದೆ. ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕಾಂತಾರ ಮೂಡಿಬಂದಿದೆ. 

Follow Us:
Download App:
  • android
  • ios