Asianet Suvarna News Asianet Suvarna News

ಹಿಗ್ಗಾಮುಗ್ಗಾ ಟ್ರೋಲ್ ಆದ್ಮೇಲೆ ರಿಷಬ್ ಶೆಟ್ಟಿ ಸಂದರ್ಶನ ಮಾಡಿದ ಹಿಂದಿ ನಿರೂಪಕಿ ಅನುಪಮಾ ಚೋಪ್ರಾ!

 ಅನುಪಮಾ ಚೋಪ್ರಾ ಸಂದರ್ಶನದಲ್ಲಿ ಕಾಣಿಸಿಕೊಂಡ ಕನ್ನಡಿಗ ರಿಷಬ್ ಶೆಟ್ಟಿ. ನೆಟ್ಟಿಗರ ಡಿಮ್ಯಾಂಡ್ ಮೇಲೆ ಕರೆಸಿಕೊಂಡ ವಿಚಾರ ವೈರಲ್....

Anupama Chopra invites Rishab shetty to her panel after backlash vcs
Author
First Published Dec 15, 2022, 4:08 PM IST

ಕನ್ನಡ ಚಿತ್ರರಂಗದ ಡಿಫರೆಂಟ್ ಡೈರೆಕ್ಟರ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸೂಪರ್ ಹಿಟ್ ಅಗಿ ಸುಮಾರು 200 ಕೋಟಿ ಕಲೆಕ್ಷನ್ ಮಾಡಿದೆ. ಹೊಂಬಾಳೆ ಫಿಲ್ಮ ನಿರ್ಮಾಣ ಮಾಡಿರುವ ಸಿನಿಮಾ ಇದಾಗಿದ್ದು ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಮಾತ್ರ ಸಿನಿಮಾ ಮೊದಲು ಬಿಡುಗಡೆಯಾಗಿತ್ತು, ಕಥೆ ಮೇಕಿಂಗ್ ಪ್ರತಿಯೊಂದು ಸಿನಿ ರಸಿಕರ ಗಮನ ಸೆಳೆಯುವುದಕ್ಕೆ ಶುರು ಮಾಡಿದ ಕಾರಣ ಪ್ಯಾನ್‌ ಇಂಡಿಯಾ ಸಿನಿಮಾ ಆಗಿ ನಾಲ್ಕೈದು ಭಾಷೆಯಲ್ಲಿ ಬಿಡುಗಡೆ ಮಾಡಿದ್ದರು. ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಿತ್ತು...

ವಿಶ್ವಾದ್ಯಂತ ಭರ್ಜರಿ ಪ್ರದರ್ಸನ ಪಡೆದ ಕಾಂತಾರ ಸಿನಿಮಾ 200 ಕೊಟಿ ಕಲೆಕ್ಷನ್ ಮಾಡಿದೆ. ಕನ್ನಡ, ತೆಲುಗು, ತಮಿಳು, ಇಂಗ್ಲಿಷ್‌ ಮತ್ತು ಹಿಂದಿ ವಾಹಿನಿಯವರು ರಿಷಬ್ ಆಂಡ್ ಟೀಂನ ಕರೆದು ಕರೆದು ಸಂದರ್ಶನ ಮಾಡಿದ್ದರು. ಆದರೆ ಬಾಲಿವುಡ್‌ನ ಖ್ಯಾತ ನಿರೂಪಕಿ ಅನುಪಮಾ ಚೋಪ್ರಾ ಕಾರ್ಯಕ್ರಮದಲ್ಲಿ ಕೇವಲ ಸ್ಟಾರ್ ನಟ-ನಟಿಯರು ಹಾಗೂ ನಿರ್ದೇಶಕರು ಮಾತ್ರ ಭಾಗಿಯಾಗುವುದು. ಈ ಕಾರ್ಯಕ್ರಮಕ್ಕೆ ಸೌತ್ ಸಿನಿಮಾರಂಗದಲ್ಲಿ ಹಲವರಿಗೆ ಆಹ್ವಾನ ನೀಡಲಾಗಿತ್ತು ಆದರೆ ಕನ್ನಡ ಚಿತ್ರರಂಗದಿಂದ ಒಬ್ಬರನ್ನು ಕರೆದಿರಲಿಲ್ಲ. ಈಗ ರಿಷಬ್ ಶೆಟ್ಟಿ ಅವರನ್ನು ಕರೆಸಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

Anupama Chopra invites Rishab shetty to her panel after backlash vcs

ವೈರಲ್ ಆಗುತ್ತಿರುವ ಫೋಟೋದಲ್ಲಿ ರಿಷಬ್ ಶೆಟ್ಟಿ, ಆಯುಷ್ಮಾನ್ ಖುರಾನ್, ಜಾನ್ವಿ ಕಪೂರ್, ವರುಣ್ ಧವನ್,ರಾಜ್‌ಕುಮಾರ್ ರಾವ್, ವಿದ್ಯಾಬಾಲನ್ ಮತ್ತು ಅನಿಲ್ ಕಪೂರ್ ಕಾಣಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾ ಹಿಟ್ ಆದ್ಮೇಲೆ ರಿಷಬ್ ಶೆಟ್ಟಿನ ಕರೆದು ಸಂದರ್ಶನ ಮಾಡಿದ್ದಾರೆ. ಹೀಗಾಗಿ ಅನುಪಮಾ ಚೋಪ್ರಾ ಸಂದರ್ಶನ ಮಾಡಿದ ಮೊದಲ ಕನ್ನಡಿಗ ಅಂದ್ರೆ ರಿಷಬ್ ಶೆಟ್ಟಿ ಎನ್ನಬಹುದು. ಇನ್ನು ಮುಂದೆ ಈ ಕಾರ್ಯಕ್ರಮದಲ್ಲಿ ಕನ್ನಡಿಗರು ಬರಬಹುದು ಎನ್ನುವ ಭರವಸೆ ಹೆಚ್ಚಾಗಿದೆ. 

'ಕಾಂತಾರ-2' ಮಾಡಲು ಪಂಜುರ್ಲಿ ಅನುಮತಿ ಕೋರಿದ ರಿಷಬ್ ಶೆಟ್ಟಿ; ದೈವ ಹೇಳಿದ್ದೇನು?

ಕಾಂತಾರ ಸಿನಿಮಾ ಅಪ್ಡೇಟ್ಸ್‌:

 ಇದೀಗ ಕಾಂತಾರ ಕಡೆಯಿಂದ್ ಮತ್ತೊಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ರಿಷಬ್ ಶೆಟ್ಟಿ ಕಾಂತಾರ ಸಿನಿಮಾ 400 ಕೋಟಿ ರೂಪಾಯಿ ಗಟಿ ದಾಟಿದೆ. ಈ ಮೂಲಕ ಕಾಂತಾರ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ 2ನೇ ಸಿನಿಮಾ ಎನ್ನುವ ಹೆಗ್ಗಳಿಕೆ ಪಡೆದಿದೆ. ಕಾಂತಾರ 15 ಕೋಟಿ ಬಜೆಟ್ ನಲ್ಲಿ ತಯಾರಾದ ಸಿನಿಮಾ. ಕಡಿಮೆ ವೆಚ್ಚದಲ್ಲಿ ಬಂದ ಕಾಂತಾರ 400 ಕೋಟಿ ಜೇಬಿಗಿಳಿಸಿರುವುದು ಸಿನಿಮಾತಂಡಕ್ಕೆ ಮತ್ತು ಸ್ಯಾಂಡಲ್ ವುಡ್‌ಗೆ  ಹೆಮ್ಮೆಯ ವಿಚಾರವಾಗಿದೆ. ಕಾಂತಾರ ಕಲೆಕ್ಷನ್ ಪಕ್ಕ ಲೆಕ್ಕವನ್ನು ಸಿನಿಮಾ ವಿಶ್ಲೇಕ ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ. ಸದ್ಯ ಕರ್ನಾಟಕದಲ್ಲಿ ಕಾಂತಾರ ಸಿನಿಮಾ 168. 50 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಮೂಲಕ ಕಾಂತಾರ ಕರ್ನಾಟಕದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಕೆಜಿಎಫ್-2 ಗಳಿಕೆ ಬ್ರೇಕ್ ಮಾಡಿದೆ. ಇನ್ನು ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿಯೂ ಕಾಂತಾರ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆಂಧ್ರ ತೆಲಂಗಾಣದಲ್ಲಿ 60 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ತಮಿಳುನಾಡಿನಲ್ಲಿ 12.70 ಕೋಟಿ ರೂಪಾಯಿ, ಕೇರಳದಲ್ಲಿ 19.20 ಕೋಟಿ ರೂಪಾಯಿ, ಏವರ್ ಸೀಸ್ 44.50 ಕೋಟಿ ರೂಪಾಯಿ ಹಾಗೂ ಉತ್ತರ ಭಾರತದಲ್ಲಿ 96 ಕೋಟಿ ರೂಪಾಯಿ ಬಾಚಿಕೊಂಡಿದೆ. ಒಟ್ಟು 400 ಕೋಟಿ ಕಲೆಕ್ಷನ್ ಮಾಡುವ ಮೂಲಕ ಗೆದ್ದು ಬೀಗಿದೆ. 

Follow Us:
Download App:
  • android
  • ios