ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಡಬ್ಬಿಂಗ್ ಮುಗಿದಿದೆ. ಪರಿಸ್ಥಿತಿ ಸರಿಯಾದ ಕೂಡಲೇ ಥಿಯೇಟರ್‌ಗೆ ರಿಲೀಸ್ ಅಂತಿದ್ದಾರೆ ಈ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ. ಈ ಪ್ರಾಜೆಕ್‌ಟ್ ಬಳಿಕ ಸುದೀಪ್ ಅವರ ಅಶ್ವತ್ಥಾಮ ಅಥವಾ ಬಿಲ್ಲಾ ರಂಗಾ ಭಾಷಾ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಅನೂಪ್.

‘ಅದು ಇಂಟರ್‌ವಲ್ ಹೊತ್ತಿಗೆ ಬರುವ ಡೈಲಾಗ್.. ಸುದೀಪ್ ಅವರು ಬೇಸ್ ವಾಯ್‌ಸ್ನಲ್ಲಿ ಈ ಹೆವೀ ಡೈಲಾಗ್ ಹೇಳ್ತಿದ್ರೆ ಕೇಳುತ್ತ ಕೂತ ನಮಗೆ ದೊಡ್ಡ ರೋಮಾಂಚನ!’

- ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಸುದೀಪ್ ಅವರ ಡಬ್ಬಿಂಗ್ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಹೇಳುವ ಮಾತುಗಳಿವು.

ಅವರೀಗ ‘ವಿಕ್ರಾಂತ್ ರೋಣ’ ಚಿತ್ರದ ಡಬ್ಬಿಂಗ್ ಮುಗಿಸಿದ್ದಾರೆ. ಏಳು ದಿನಗಳ ಕಾಲ ಡಬ್ಬಿಂಗ್ ವರ್ಕ್ ನಡೆದಿದೆ. ‘ಸುದೀಪ್ ಜೊತೆಗೆ ಮೊದಲ ಸಲ ಡಬ್ಬಿಂಗ್‌ನಲ್ಲಿ ಭಾಗವಹಿಸುತ್ತಿರೋದು. ಇದೊಂದು ಅಮೇಜಿಂಗ್ ಅನುಭವ. ನಮ್ಮ ಸೌಂಡ್ ಇಂಜಿನಿಯರ್ ಪಕ್ಕದಲ್ಲಿ ಕೂತಿದ್ದವರು ಆಗಾಗ ಹೇಳೋರು, ಗೂಸ್ ಬಂಪ್ ಬರ್ತಿದೆ ಅಂತ. ಅದರಲ್ಲೂ ಇಂಟರ್‌ವಲ್ ಪಾಯಿಂಟ್‌ನಲ್ಲಿ ಅವರು ಬೇಸ್ ವಾಯ್‌ಸ್ನಲ್ಲಿ ಹೇಳುವ ಹೆವ್ವೀ ಡೈಲಾಗ್ ಕೇಳುವಾಗ ನನಗೂ ಫುಲ್ ಎಕ್ಸೈಟ್‌ಮೆಂಟ್. ಸುದೀಪ್ ಅವರೂ ಖುಷಿಯಲ್ಲಿದ್ದರು, ಬಹುಶಃ ಪೈಲ್ವಾನ್ ನಂತರ ಅವರು ಡಬ್ ಮಾಡುತ್ತಿರುವ ಚಿತ್ರ ಇದೇ ಅನಿಸತ್ತೆ’ ಅಂತಾರೆ ಅನೂಪ್ ಭಂಡಾರಿ. ಈ ಚಿತ್ರಕ್ಕೆ ಸುದೀಪ್ ಅವರ ಇನ್ನೊಂದು ಹಾಡಿನ ಶೂಟಿಂಗ್ ಬಾಕಿ ಇದೆ. ಬೆಂಗಳೂರಿನ ಹೊರವಲಯದಲ್ಲಿ ಸೆಟ್ ಹಾಕಿ ಇದರ ಚಿತ್ರೀಕರಣ ಮುಗಿಸಲಿದ್ದಾರೆ. ಮುಂದಿನ ತಿಂಗಳು ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದಾರೆ.

ಅನೂಪ್‌ ಭಂಡಾರಿ ಹೇಳುತ್ತಾರೆ ದ್ರೋಣರ ಮಗ ಅಶ್ವತ್ಥಾಮನ ಕತೆ! 

ಶೀಘ್ರದಲ್ಲೇ ಚಿತ್ರ ರಿಲೀಸ್

‘ಅಂದುಕೊಂಡಂತೆ ಆಗಿದ್ದರೆ ಆಗಸ್‌ಟ್ 19ಕ್ಕೆ ಚಿತ್ರ ರಿಲೀಸ್ ಆಗಬೇಕಿತ್ತು. ಸದ್ಯದ ಸ್ಥಿತಿಯಲ್ಲಿ ರಿಲೀಸ್ ಡೇಟ್‌ಅನ್ನು ಖಚಿತವಾಗಿ ಹೇಳುವುದು ಕಷ್ಟ. ಎಷ್ಟು ಬೇಗ ಎಲ್ಲರಿಗೂ ವ್ಯಾಕ್ಸಿನೇಶನ್ ಆಗಿ ಸೇಫ್ ಆಗಿ ಥಿಯೇಟರ್‌ಗೆ ಬರುವ ಹಾಗಾಗುತ್ತದೋ ಆಗ ರಿಲೀಸ್ ಮಾಡ್ತೀವಿ. ಬಾಕಿ ಉಳಿದಿರುವ ಕೆಲಸಗಳನ್ನು ಬೇಗ ಮುಗಿಸಿ ಪರಿಸ್ಥಿತಿ ಸರಿಯಾದ ಕೂಡಲೇ ರಿಲೀಸ್ ಮಾಡುವ ಪ್ಲಾನ್ ಇದೆ. ವಿಎಫ್‌ಎಕ್‌ಸ್ ವರ್ಕ್, ರೀರೆಕಾರ್ಡಿಂಗ್ ನಡೀತಿದೆ’ ಎನ್ನುವುದು ಅನೂಪ್ ಮಾತು.

3ಡಿಯಲ್ಲಿ ಸಿನಿಮಾದ ಅನುಭವ

‘ಇಡೀ ವಿಕ್ರಾಂತ್ ರೋಣ ಚಿತ್ರ 3ಡಿಯಲ್ಲಿ ರಿಲೀಸ್ ಆಗಲಿದೆ. ಮೊನ್ನೆ ಹತ್ತು ನಿಮಿಷದ 3ಡಿ ಪೋರ್ಶನ್ ಒಂದನ್ನು ರೆಡಿ ಮಾಡಿದ್ರು. ಅದನ್ನು ನಾವೆಲ್ಲ ಕೂತು ನೋಡಿದ್ವಿ. ಬಹಳ ಚೆನ್ನಾಗಿ ಮಾಡಿದ್ರು. ಸಣ್ಣ ಪುಟ್ಟ ಇಂಪ್ರೂವ್‌ಮೆಂಟ್ ಬಗ್ಗೆ ಚರ್ಚಿಸಿದೆವು. ಅದು ಪ್ಯಾರಲಲ್ ಆಗಿ ನಡೀತಿದೆ’ ಎನ್ನುತ್ತಾ 3ಡಿ ಮೇಕಿಂಗ್ ಅನುಭವ ತೆರೆದಿಟ್ಟರು.

`ಫ್ಯಾಂಟಮ್' ಸುದೀಪ್‌ಗೆ ಇಷ್ಟವಾಗಿದ್ದೇಕೆ ಗೊತ್ತಾ? ಅನೂಪ್ ಸಂದರ್ಶನ 

ಮುಂದೆ ಅಶ್ವತ್ಥಾಮ ಅಥವಾ ಬಿಲ್ಲಾ ರಂಗಾ ಭಾಷಾ

‘ಈಗ ಮೂರು ಪ್ರಾಜೆಕ್‌ಟ್ ಕೈಯಲ್ಲಿದೆ. ಅದರಲ್ಲಿ ಒಂದು ಅಶ್ವತ್ಥಾಮ, ಇನ್ನೊಂದು ಬಿಲ್ಲಾ ರಂಗಾ ಬಾಷಾ. ‘ವಿಕ್ರಾಂತ್ ರೋಣ’ ಸಿನಿಮಾದ ಕೆಲಸಗಳು ಒಂದು ಹಂತದಲ್ಲಿ ಮುಗಿದಾಗ ಈ ಮೂರು ಪ್ರಾಜೆಕ್‌ಟ್ಗಳಲ್ಲಿ ಒಂದನ್ನು ಕೈಗೆತ್ತಿಕೊಳ್ಳುತ್ತೇನೆ. ಈ ಬಗ್ಗೆ ಸುದೀಪ್ ಅವರ ಜೊತೆಗೆ ಚರ್ಚಿಸಿದ್ದೇನೆ. ಟೈಮ್ ಸಿಕ್ಕಿದಾಗಲೆಲ್ಲ ಆ ಪ್ರಾಜೆಕ್‌ಟ್ ಕೆಲಸವನ್ನೂ ಮಾಡುತ್ತಿರುತ್ತೇನೆ. ಸದ್ಯಕ್ಕೆ ಈ ಸಿನಿಮಾದ ಕೆಲಸಗಳು ಮುಗಿದ ಬಳಿಕ ಸುದೀಪ್ ಅವರ ಜೊತೆಗೆ ಮುಂದೆ ಯಾವ ಪ್ರಾಜೆಕ್‌ಟ್ ಕೈಗೆತ್ತಿಕೊಳ್ಳೋದು ಅನ್ನೋದರ ಬಗ್ಗೆ ಮಾತಾಡಿ ಫೈನಲೈಸ್ ಮಾಡುತ್ತೇವೆ’ ಅನ್ನುತ್ತಾರೆ ಅನೂಪ್ ಭಂಡಾರಿ.