Asianet Suvarna News Asianet Suvarna News

ಕಾದಂಬರಿ ಆಧರಿತ ಚಿತ್ರದಲ್ಲಿ ಅನು ಪ್ರಭಾಕರ್- ರೆಹಮಾನ್!

ನಟಿ ಅನುಪ್ರಭಾಕರ್ ತುಂಬಾ ದಿನಗಳ ನಂತರ ಸದ್ದಿಲ್ಲದೆ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ವಿಶೇಷ ಅಂದರೆ ಇದು ಸಾ ರಾ ಅಬೂಬಕ್ಕರ್ ಅವರು ಬರೆದಿರುವ ‘ವಜ್ರಗಳು’ ಕಾದಂಬರಿ ಆಧರಿತ ಸಿನಿಮಾ ಹಾಗೂ ಡಬ್ಬಿಂಗ್ ಕೂಡ ಮುಗಿಸಿರುವ ಈ ಚಿತ್ರದ ನಿರ್ದೇಶಕರು ಅರ‌್ನಾ ಸಾಧ್ಯ ಅವರು.

 

 

Anu prabhakar Rehman khan to act in vajraguru
Author
Bangalore, First Published Feb 22, 2020, 10:55 AM IST

ಈ ಹಿಂದೆ ‘1098’ ಹಾಗೂ ಒಂದು ಕಿರು ಚಿತ್ರ ಮಾಡಿದ ಅನುಭವ ಇದೆ. ಈಗ ‘ವಜ್ರಗಳು’ ಕಾದಂಬರಿಯನ್ನು ಕೈಗೆತ್ತಿಕೊಂಡು ‘ಸಾರಾವಜ್ರ’ ಹೆಸರಿನಲ್ಲಿ ಸಿನಿಮಾ ನಿರ್ದೇಶಿಸಿದ್ದಾರೆ. ರೆಹಮಾನ್, ಪುನೀತ್, ರಮೇಶ್ ಭಟ್, ಸುಧಾ ಬೆಳವಾಡಿ, ಸುಹಾನಾ ಸೈಯದ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ವಿ ಮನೋಹರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

1989ರ ಕಾಲಘಟ್ಟದಲ್ಲಿ ನಡೆಯುವ ಕತೆ. ತ್ರಿವಳಿ ತಲಾಕ್ನಿಂದ ಹೆಣ್ಣು ಮಗಳು ಅನು ಭವಿಸುವ ನೋವಿನ ಕತೆಯನ್ನು ಈ ಚಿತ್ರದ ಮೂಲಕ ಹೇಳಲಾಗಿದೆ. ಇಲ್ಲಿ ತ್ರಿವಳಿ ತಲಾಕ್‌ಗೆ ಗುರಿಯಾಗಿ ಜೀವನ ಸಂಕಷ್ಟ ಎದುರಿಸುವ ಪಾತ್ರದಲ್ಲಿ ಅನುಪ್ರಭಾಕರ್ ನಟಿಸಿದ್ದಾರೆ. ಇವಿಷ್ಟು ಮಾಹಿತಿಯೊಂದಿಗೆ ನಿರ್ದೇಶಕರು ಮಾತಿಗೆ ನಿಂತರು. ಮೂಲ ಕತೆಗೆ ಯಾವುದೇ ರೀತಿಯ ದಕ್ಕೆ ಬಾರದಂತೆ ಚಿತ್ರಕಥೆ ಮಾಡಿಕೊಂಡು ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡಿದ್ದೇವೆ. ಹೀಗಾಗಿ ಕಾದಂಬರಿ ಆಧರಿತ ಚಿತ್ರ ಎಂದ ಮಾತ್ರ ಇದನ್ನ ಕಲಾತ್ಮಕ ವಿಭಾಗಗಕ್ಕೆ ಸೇರಿಸಬೇಡಿ. ಎಲ್ಲರು ನೋಡಬೇಕಾದ ಸಿನಿಮಾ.

ಅನು ಪ್ರಭಾಕರ್‌- ರಘು ಮುಖರ್ಜಿ ಮುದ್ದು 'ನಂದನ' ಹೀಗಿದ್ದಾಳೆ ನೋಡಿ!

ಚಿತ್ರೀಕರಣ ಸಂಪೂರ್ಣವಾಗಿ ಮುಗಿ ದಿದೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ... ಇದು ನಿರ್ದೇಶಕಿ ಅರ‌್ನಾ ಸಾಧ್ಯ ಹೇಳಿದ ಮಾಹಿತಿ. ಇನ್ನೂ ಚಿತ್ರದ ಮುಖ್ಯ ಪಾತ್ರ ಮಾಡಿರುವ ಅನುಪ್ರಭಾಕರ್ ಅವರು ಚಿತ್ರರಂಗಕ್ಕೆ ಬಂದು 20 ವರ್ಷಗಳಾಗುತ್ತಿವೆಯಂತೆ. ತುಂಬಾ ದಿನಗಳ ಸಿನಿ ಮಾದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದರು. ಅದರಲ್ಲೂ ಖ್ಯಾತ ಸಾಹಿತಿ ಪುಸ್ತಕ ಸಿನಿಮಾ ಆಗುತ್ತಿದ್ದು, ಅದರಲ್ಲಿ ತಮಗೆ ಪಾತ್ರ ಸಿಕ್ಕಿದ್ದನ್ನು ಖುಷಿಯಿಂದ ಹೇಳಿಕೊಂಡರು. ‘ಮಹಿಳಾ ನಿರ್ದೇಶಕಿ, ಮಹಿಳಾ ಕಾದಂಬರಿಗಾರ್ತಿ ಕತೆ ಸಿನಿಮಾ ಆಗುತ್ತಿದೆ.

ಇದು ವಿಶೇಷ. ತುಂಬಾ ದಿನಗಳ ನಂತರ ಒಂದು ಒಳ್ಳೆಯ ಸಿನಿಮಾದಲ್ಲಿ ನಟಿಸಿದ ತೃಪ್ತಿ ಇದೆ’ ಎಂದರು ಅನುಪ್ರಭಾಕರ್. ಪತ್ರಕರ್ತ ರೆಹಮಾನ್ ಅವರು ನೆಗೆಟೀವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮನೆಗೆ ಎಂಥ ಮಗ ಬೇಡವೋ, ಹೆಣ್ಣಿಗೆ ಎಂಥ ಗಂಡ ಬೇಡವೋ, ಮಾವನಿಗೆ ಎಂಥ ಅಳಿಯ ಬೇಡವೋ ಅಂಥ ಪಾತ್ರ ತಮ್ಮದು ಎಂದು ಹೇಳಿಕೊಂಡರು ರೆಹಮಾನ್. ರಮೇಶ್ ಭಟ್, ಪುನೀತ್, ವಿ ಮನೋಹರ್ ಚಿತ್ರದ ಬಗ್ಗೆ ಮಾತನಾಡಿದರು. 

Follow Us:
Download App:
  • android
  • ios