Asianet Suvarna News Asianet Suvarna News

ಮೋದಿ ನೋಡಿ ವೋಟ್‌ ಹಾಕಲು ಅವರೇನು ಮಾಡಿದ್ದಾರೆ?: ಸಚಿವ ಎಂ.ಬಿ.ಪಾಟೀಲ್‌

ಮೋದಿ ಅವರ ಮುಖ ನೋಡಿ ವೋಟ್‌ ಹಾಕಿ ಎನ್ನುವವರಿಗೆ ಮೋದಿ ಅವರು ಏನು ಮಾಡಿದ್ದಾರೆ ಎಂದು ಕೇಳಿ. ಸಬ್ ಕಾ ಸಾಥ್ ಎಂದವರು ಜಗಳ ಹಚ್ಚಿದ್ದಾರೆ. ಇನ್ನೂ ಮುಂದೆ ಹೋಗಿ ಹೆಣ್ಣುಮಕ್ಕಳ ತಾಳಿಯ ಬಗ್ಗೆ ಮಾತನಾಡುವ ಮಟ್ಟಕ್ಕೆ ಹೋಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಬಿಜೆಪಿ ವಿರುದ್ಧ ಹರಿಹಾಯ್ದರು. 
 

Lok Sabha Elections 2024 Minister MB Patil Slams On PM Narendra Modi At Vijayapura gvd
Author
First Published Apr 26, 2024, 12:10 PM IST | Last Updated Apr 26, 2024, 12:10 PM IST

ವಿಜಯಪುರ (ಏ.26): ಮೋದಿ ಅವರ ಮುಖ ನೋಡಿ ವೋಟ್‌ ಹಾಕಿ ಎನ್ನುವವರಿಗೆ ಮೋದಿ ಅವರು ಏನು ಮಾಡಿದ್ದಾರೆ ಎಂದು ಕೇಳಿ. ಸಬ್ ಕಾ ಸಾಥ್ ಎಂದವರು ಜಗಳ ಹಚ್ಚಿದ್ದಾರೆ. ಇನ್ನೂ ಮುಂದೆ ಹೋಗಿ ಹೆಣ್ಣುಮಕ್ಕಳ ತಾಳಿಯ ಬಗ್ಗೆ ಮಾತನಾಡುವ ಮಟ್ಟಕ್ಕೆ ಹೋಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್‌ ಬಿಜೆಪಿ ವಿರುದ್ಧ ಹರಿಹಾಯ್ದರು. ತಾಲೂಕಿನ ನಾಗಠಾಣದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಾಂಡ್‌ ಹಗರಣದಿಂದ ಇವರ ಮುಖವಾಡ ಬಯಲಾಗಿದೆ. ಸ್ವಚ್ಛ ಸ್ವಚ್ಛ ಎಂದವರ ದೇಶದ ದೊಡ್ಡ ಹಗರಣ ಇದಾಗಿದೆ. ಯುವಕರಿಗೆ ಉದ್ಯೋಗ ಸಿಗಲಿಲ್ಲ. ಹೇಳಿದಂತೆ ನಡೆದುಕೊಳ್ಳಲಿಲ್ಲ. ಕೃಷ್ಣಾ ತೀರ್ಪಿನ ಸದ್ಬಳಕೆಯಾಗಲು ನಮ್ಮ ಸರ್ಕಾರ, ನಮ್ಮ ಎಂಪಿ ಬೇಕು. ಜಿಲ್ಲೆ ಪರಿಪೂರ್ಣ ನೀರಾವರಿಯಾಗುತ್ತದೆ ಎಂದರು.

ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ನೀವು ನಮ್ಮನ್ನು ಪ್ರಶ್ನೆ ಮಾಡಿದಂತೆ ಜಿಗಜಿಣಗಿ ಅವರನ್ನು ಕೇಳುವುದು ಆಗಲ್ಲ. ಅವರು ಸಿಗುವುದೇ ಇಲ್ಲ. ಹಾಲು ನೀಡದ ಹಸುವನ್ನೇ ಇಟ್ಟುಕೊಳ್ಳಲ್ಲ. ಇನ್ನು ಕೆಲಸ ಮಾಡದ ಸಂಸದ ಜಿಗಜಿಣಗಿ ಯಾಕೆ ಬೇಕು? ಐವತ್ತು ವರ್ಷ ಅಧಿಕಾರ ಅನುಭವಿಸಿದ ಅವರಿಂದ ನಯಾಪೈಸೆ ಕೆಲಸ ಆಗಿಲ್ಲ. ರಾಜು ಆಲಗೂರ ಇಲ್ಲಿನ ವಿಧಾನಸಭೆ ಕ್ಷೇತ್ರ ಬಿಟ್ಟು ಸಂಸತ್‌ಗೆ ನಿಂತಿದ್ದಾರೆ. ಅವರೊಬ್ಬ ಪ್ರೊಫೆಸರ್ ಆಗಿದ್ದು ಸಂಸತ್‌ನಲ್ಲಿ ಚೆನ್ನಾಗಿ ಮಾತನಾಡಲಿದ್ದಾರೆ. ನಿಮಗೆ ದನಿಯಾಗಲಿದ್ದಾರೆ ಎಂದು ಹೇಳಿದರು.

ಕರ್ನಾಟಕ Election 2024 Live: 11ಕ್ಕೆ ದ.ಕ.ದಲ್ಲಿ ಹೆಚ್ಚು ಶೇ.31, ಬೆಂಗಳೂರು ಸೆ.ಕಡಿಮೆ ವೋಟಿಂಗ್...

ಯಶವಂತರಾಯಗೌಡ ಪಾಟೀಲ ಮಾತನಾಡಿ, ನಾಗಠಾಣ ಗಂಡುಮೆಟ್ಟಿದ ನೆಲವಾಗಿದೆ. ಇಲ್ಲಿನವರೇ ಆದ ಆಲಗೂರರಿಗೆ ಸಂಸತ್‌ನಲ್ಲಿ ಧ್ವನಿಯಾಗುವ ಶಕ್ತಿ, ಸಾಮರ್ಥ್ಯವಿದೆ. ಮೋದಿಯವರ ವೈಫಲ್ಯ ದೇಶಕ್ಕೀಗ ಗೊತ್ತಾಗುತ್ತಿದೆ. ಕಾಂಗ್ರೆಸ್‌ಗೆ ಮರು ಶಕ್ತಿ ನೀಡಿ. ಜಿಲ್ಲೆಯಲ್ಲಿ ಲಕ್ಷ ಮತಗಳಿಂದ ಗೆಲ್ಲುವ ಒಳ್ಳೆಯ ವಾತಾವರಣವಿದೆ. ಆ ದಾಖಲೆಯನ್ನು ನೀವು ಮಾಡಿ. ಜಿಲ್ಲೆಯ ಪ್ರವಾಸೋದ್ಯಮ ಪ್ರಗತಿಯಾಗಬೇಕು, ಬರಗಾಲಕ್ಕೆ ನೆರವು ಬೇಕಿದೆ. ರಾಜ್ಯಗಳ ಹಿತವನ್ನು ಮೋದಿ ಕಾಯ್ದುಕೊಳ್ಳುತ್ತಿಲ್ಲ. ಅವರಿಗೆ ಆತ್ಮಸಾಕ್ಷಿ, ಮತ ಕೇಳುವ ನೈತಿಕತೆಯೇ ಇಲ್ಲ ಎಂದು ಹೇಳಿದರು.

ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಮಾತನಾಡಿದರು. ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಮಾತನಾಡಿದರು. ಇದೇ ಸಂದರ್ಭ ಮಾಜಿ ಜಿಪಂ ಸದಸ್ಯ ದಾನಪ್ಪ ಕಟ್ಟಿಮನಿ ಸೇರಿದಂತೆ ಅನೇಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ವೀಕ್ಷಕರಾದ ಡಾ.ಸಯೀದ್ ಬುರಾನ, ಮುಖಂಡರಾದ ಡಿ.ಎಲ್.ಚವ್ಹಾಣ, ಎಂ.ಆರ್.ಪಾಟೀಲ, ಶ್ರೀದೇವಿ ಉತ್ಸಾಲರ, ಸುಜಾತಾ ಕಳ್ಳಿಮನಿ, ಬಾಬುರಾಜೇಂದ್ರ ನಾಯಕ, ಆರ್‌.ಡಿ.ಹಕ್ಕೆ, ಶಹನವಾಜ ಮುಲ್ಲಾ, ಸೋಮನಾಥ ಕಳ್ಳಿಮನಿ, ಸುರೇಶ ಗೊಣಸಗಿ, ಹೊನಮಲ್ಲ ಸಾರವಾಡ, ರಾಮನಗೌಡ ಪಾಟೀಲ, ತುಕಾರಾಮ ಘೋರ್ಪಡೆ, ಶಫೀಕ ಮನಗೂಳಿ, ಶ್ರೀಮಂತ ಇಂಡಿ, ರಘುನಾಥ ಜಾಧವ ಅನೇಕರಿದ್ದರು.

Sandalwood Celebritys Voting: ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಸ್!

ಮೋದಿ ಬಂದ್‌ ಮ್ಯಾಲ ಜೀವನಾ ಸಾಕಾಗೈತಿ: ಮೋದಿ ದಯೆಯಿಂದ ಬಂಗಾರದ ಬೆಲೆ ಗಗನ ಮುಟ್ಟಿದೆ. ತಾಳಿ ಬಗ್ಗೆ ಮಾತನಾಡುವ ಅವರಿಂದ ಇನ್ನು ಮೇಲೆ ಹೆಣ್ಣುಮಕ್ಕಳು ‌ಕಬ್ಬಿಣದ ತಾಳಿಯನ್ನೇ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳುತ್ತಿದ್ದಂತೆ ಸಭೆ ನಡೆಯುತ್ತಿದ್ದ ಪಕ್ಕದ ಮನೆ ಮುಂದೆ ಕುಳಿತಿದ್ದ ಹೆಣ್ಣುಮಕ್ಕಳು ಇವರ ಮಾತಿಗೆ ದನಿಗೂಡಿಸಿ, ‘ಹೌದ್ರಿ ಸರ್.. ಮೋದಿಯವ್ರು ಬಂದ್‌ ಮ್ಯಾಲ ನಮ್ ಜೀವ್ನಾ ಸಾಕಾಗ್ಯಾದ.. ನಮ್ ಮಕ್ಳೀಗಿ ನೌಕ್ರಿ ಇಲ್ಲ, ನಮಗ ಎಲ್ಲಾ ತುಟ್ಡಿಯಾಗ್ಯಾದ ಎಂದು ಎದ್ದು ನಿಂತು ಹೇಳಿದರು. ಹೌದಮ್ಮ ದೇಶದ ಜನಕ್ಕ ಇವರ ಬಗ್ಗೆ ಗೊತ್ತಾಗ್ಯಾದ ಎಂದು ಸಚಿವ ಪಾಟೀಲ್ ಹೇಳಿದರು.

Latest Videos
Follow Us:
Download App:
  • android
  • ios