Asianet Suvarna News Asianet Suvarna News

ಈ ಕೆಲಸ ಮಾಡಿದ್ದು ಜೀವನದಲ್ಲಿ ಮೊದಲ ಬಾರಿ ಎಂದ ಅನು ಪ್ರಭಾಕರ್

ಇಂದು ನಟಿ ಅನು ಪ್ರಭಾಕರ್ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು 1999ರ ಅನು ಇಂದು ಸಹ ಹಾಗೆ ಕಾಣುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

anu prabhakar dance with husband raghu mukherjee in sarja family function mrq
Author
First Published Jul 11, 2024, 3:10 PM IST

ಬೆಂಗಳೂರು: ಚಂದನವನದ ನಟಿ ಅನು ಪ್ರಭಾಕರ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪತಿ ರಘು ಮುಖರ್ಜಿ ಜೊತೆ ವೇದಿಕೆಯ ಮೇಲೆ ಹೆಜ್ಜೆ ಹಾಕಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಟೀನೇಜ್ ಜೋಡಿಗಳು ನಾಚಿಕೊಳ್ಳುವಂತೆ ಅನು ಮತ್ತು ರಘು ನೃತ್ಯ ಮಾಡಿದ್ದಾರೆ. ವಯಸ್ಸು 40 ಆದರೂ ರಘು ಮುಖರ್ಜಿ ಪತ್ನಿಯನ್ನು ಗೊಂಬೆಯಂತೆ ಲಿಫ್ಟ್ ಮಾಡಿ ಗಿರಕಿ ಹೊಡೆದಿದ್ದಾರೆ. ವಿಡಿಯೋದಲ್ಲಿ ಅನು ಪ್ರಭಾಕರ್ ಕಾಲೇಜಿಗೆ ಹೋಗುವ ವಿದ್ಯಾರ್ಥಿಯಂತೆ ಕಾಣುತ್ತಿದ್ದಾರೆ. ಜೀವನದಲ್ಲಿ ಮೊದಲನೇ ಸರಿ ಪತಿ ರಘು ಮುಖರ್ಜಿ ಹಾಗೂ ನಾನು ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದು. ಅಕ್ಕ ನೀತು ಅರ್ಜುನ್, ಭಾವ ಅರ್ಜುನ್ ಸರ್ಜಾ, ಐಶ್ವರ್ಯ ಅರ್ಜುಮ್, ಉಮಾಪತಿ ಅವರಿಗಾಗಿ ಡ್ಯಾನ್ಸ್ ಮಾಡಿದ್ದೇವೆ. ಅಕ್ಕ ಹಾಗು ಭಾವ ಅವರ ಹಾಡುಗಳು ಎಂದು ಅನು ಪ್ರಭಾಕರ್ ಮುಖರ್ಜಿ ಬರೆದುಕೊಂಡಿದ್ದಾರೆ.

ಯಾವ ಕಾರ್ಯಕ್ರಮ?

ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾರ ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ಅನು ಪ್ರಭಾಕರ್ ಕುಟುಂಬ ಸಮೇತರಾಗಿ ಭಾಗಿಯಾಗಿದ್ದರು. ಸಾಮಾನ್ಯವಾಗಿ ಕಲಾವಿದರ ಮದುವೆ ಸಮಾರಂಭ ಅಂದ್ರೆ ಡ್ಯಾನ್ಸ್ ಇದ್ದೇ ಇರುತ್ತದೆ. ಮದುವೆಗೆ ಬರುವ ಕಲಾವಿದರು ಎಲ್ಲರ ಜೊತೆ ಸೇರಿ ನಾಲ್ಕು ಹೆಜ್ಜೆ ಹಾಕಿಯೇ ಹಾಕುತ್ತಾರೆ. ಅದೇ ರೀತಿ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ನವದಂಪತಿಗಾಗಿ ರೊಮ್ಯಾಂಟಿಕ್‌ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದಾರೆ. ಒಟ್ಟು ಮೂರು ಹಾಡುಗಳಿಗೆ ಡ್ಯಾನ್ಸ್ ಮಾಡಿದರೂ ಇಬ್ಬರ ಮುಖದಲ್ಲಿ ಕೊಂಚ ಸುಸ್ತು ಸಹ ಕಂಡು ಬಂದಿಲ್ಲ.

ಹಣ ಇಲ್ಲದೆ ಜೀವನ ನಡೆಯೋಲ್ಲ; ಚಿಕ್ಕ ವಯಸ್ಸಿಗೆ ಪಾಠ ಕಲಿತ ನಟಿ ಅನು ಪ್ರಭಾಕರ್

ಅಭಿಮಾನಿಗಳಿಂದ ಮೆಚ್ಚುಗೆಯ ಸಾಲು ಸಾಲು ಕಮೆಂಟ್‌ಗಳು 

ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆ ಅನು ಮತ್ತು ರಘು ಅಭಿಮಾನಿಗಳು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ರಘು ಜೊತೆಯಲ್ಲಿಇಷ್ಟು ಸಲೀಸಾಗಿ ನೀವು ಹೆಜ್ಜೆ ಹಾಕೋದು ನೋಡಿದರೆ ನಿಮಗೆ ವಯಸ್ಸಿ ಆಗಿದೆಯಾ  ಶಾಕ್ ಆಗುತ್ತೆ. ಇಬ್ಬರ ಡ್ಯಾನ್ಸ್ ಅದ್ಭುತವಾಗಿದ್ದು, ಪದೇ ಪದೇ ನೋಡಬೇಕೆನ್ನಿಸುತ್ತಿದೆ. ನಿಮ್ಮ ಡಾನ್ಸ್ ನೋಡಿದ್ರೆ ಯುವ ಡ್ಯಾನ್ಸರ್‌ಗಳು ಶಾಕ್ ಆಗೋದು ಖಂಡಿತ ಎಂದು ಕಮೆಂಟ್ ಮಾಡುತ್ತಿದ್ದಾರೆ. 

ಜೂನ್ 10ರಂದು ಐಶ್ವರ್ಯಾ ಸರ್ಜಾ ಮದುವೆ

10ನೇ ಜೂನ್ 2024 ರಂದು ಐಶ್ವರ್ಯಾ ಸರ್ಜಾ ಮತ್ತು ತಮಿಳು ನಟ ಉಮಾಪತಿ ರಾಮಯ್ಯ ಮದುವೆ ನಡೆದಿತ್ತು. ಐಶ್ವರ್ಯಾ ಮತ್ತು ಉಮಾಪತಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಎರಡು ಕುಟುಂಬದ ಸಮ್ಮತಿಯ ಮೇರೆಗೆ ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆದಿತ್ತು. ಐಶ್ವರ್ಯಾ ಅವರು 2018ರಲ್ಲಿ ‘ಪ್ರೇಮ ಬರಹ’  ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಚಂದನ್ ಕುಮಾರ್‌ಗೆ ನಾಯಕಿಯಾಗಿದ್ದರು. ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದರು. ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ತೆರೆಕಂಡಿತ್ತು.  

ರಘು ಮುಖರ್ಜಿಗೆ ದುರಹಂಕಾರ ಅಂದುಕೊಂಡು ತಪ್ಪು ಮಾಡಿಬಿಟ್ಟೆ: ಪತಿ ಬಗ್ಗೆ ಅನು ಪ್ರಭಾಕರ್‌ ಮಾತು

Latest Videos
Follow Us:
Download App:
  • android
  • ios