ಹಣ ಇಲ್ಲದೆ ಜೀವನ ನಡೆಯೋಲ್ಲ; ಚಿಕ್ಕ ವಯಸ್ಸಿಗೆ ಪಾಠ ಕಲಿತ ನಟಿ ಅನು ಪ್ರಭಾಕರ್
ಹೆಣ್ಣು ಮಕ್ಕಳು financial independence ಇರಬೇಕು. ಯಾರ ಮೇಲೂ ಡಿಪೆಂಡ್ ಆಗಬಾರದು ಅನ್ನೋ ಕಿವಿ ಮಾತು ಹಂಚಿಕೊಂಡಿದ್ದಾರೆ ಅನು ಪ್ರಭಾಕರ್.
18ನೇ ವಯಸ್ಸಿಗೆ ನಾಯಕನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅನು ಪ್ರಭಾಕರ್ ಸಂಭಾವನೆ ಮತ್ತು ಮನಿ ಮ್ಯಾನೇಜ್‌ಮೆಂಟ್ ಪೋಷಕರು ನೋಡಿಕೊಳ್ಳುತ್ತಿದ್ದರಂತೆ. ತಂದೆಯನ್ನು ಕಳೆದುಕೊಂಡ ಸಮಯದಲ್ಲಿ ಹೇಗೆ ಈ ಸಮಯವನ್ನು ಮ್ಯಾನೇಜ್ ಮಾಡಿದ್ದರು ಎಂದು ಹಂಚಿಕೊಂಡು ಈಗಿನ ಹೆಣ್ಣು ಮಕ್ಕಳಿಗೆ ಸಲಹೆ ಕೊಟ್ಟಿದ್ದಾರೆ.
'ಕೆಲಸ ಮಾಡಲು ಶುರು ಮಾಡಿದಾಗ ನನಗೆ 18 ವರ್ಷ ಆಗ ಹಣ ಮ್ಯಾನೇಜ್‌ಮೆಂಟ್ ಬಗ್ಗೆ ಗೊತ್ತಿರಲಿಲ್ಲ. ಎಲ್ಲಾ ಅಮ್ಮ ಮತ್ತು ಅಪ್ಪ ಹ್ಯಾಂಡಲ್ ಮಾಡುವವರು. ಸಂಭಾವನೆ ವಿಚಾರವನ್ನು ಅಮ್ಮ ಮಾತನಾಡುತ್ತಿದ್ದರು. ನನ್ನ ಹಣ ಸೇವ್ ಮಾಡುವುದು ಟ್ಯಾಕ್ಸ್ ಎಲ್ಲಾ ಅಪ್ಪ ನೋಡಿಕೊಳ್ಳುತ್ತಿದ್ದರು. ಖರ್ಚಿಗೆ ಹಣ ಬೇಕು ಅಂದ್ರೆ ಅಮ್ಮನ ಕೇಳಬೇಕಿತ್ತು ಇಲ್ಲ ಅವರೇ ಕರೆದುಕೊಂಡು ಕೊಡಿಸುವವರು. ಬ್ಯಾಂಕ್‌ಗೆ ಹೋಗಿ ಏನು ಮಾಡಬೇಕು ಅನ್ನೋ ಐಡಿಯಾ ಕೂಡ ನನಗೆ ಇರಲಿಲ್ಲ. ಅಪ್ಪ ತೀರಿಕೊಂಡಾಗ ನನಗೆ ದೊಡ್ಡ ಶಾಕ್ ಆಗಿತ್ತು ಏಕೆಂದರೆ ಮದುವೆ ಆದ್ಮೇಲೆ ನನ್ನ ಹಣದ ವಿಚಾರ ಅವರೇ ನೋಡಿಕೊಳ್ಳುತ್ತಿದ್ದರು. ನನಗೆ ಏನೂ ಗೊತ್ತಿಲ್ಲ ಅದರ ಬಗ್ಗೆ. ಈಗಿನ ಹೆಣ್ಣು ಮಕ್ಕಳು ಪ್ರತಿಯೊಂದು ವಿಚಾರಗಳನ್ನು ಕಲಿಯಬೇಕು. ಯಾವ ಬ್ಯಾಂಕ್‌ನಲ್ಲಿ ಅಕೌಂಟ್ ಇತ್ತು ಏನು ಮಾಡಬೇಕಿತ್ತು ಅನ್ನೋದು ನನಗೆ ಗೊತ್ತಿರಲಿಲ್ಲ ಕ್ಯಾನೆರಾ ಬ್ಯಾಂಕ್ ಒಂದರ ಹೆಸರು ಕೇಳಿದ್ದೆ ಅಷ್ಟೆ' ಎಂದು ಕನ್ನಡ ಖಾಸಗಿ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ ಅನು.
ಅನು ಪ್ರಭಾಕರ್ ಕಿಡ್ನ್ಯಾಪ್ ಆಗಿದ್ದು ನಿಜವೇ?; ರೋಚಕ ಕಥೆ ಬಿಚ್ಚಿಟ್ಟ ನಟಿ
'ನನ್ನ ಅಣ್ಣನ ಮದುವೆ ಸಮಯದಲ್ಲಿ ತಂದೆ ತೀರಿಕೊಂಡರು. ಮುಂದಿನ ಹೆಜ್ಜೆ ಹೇಗೆ ಅನ್ನೋದು ನನಗೆ ಗೊತ್ತಿರಲಿಲ್ಲ. ದುಡ್ಡು ಎಲ್ಲಿಂದ ಬರ್ತಿದೆ ಎಷ್ಟು ಖರ್ಚು ಆಗುತ್ತಿದೆ ಎಲ್ಲಿ ಸೇವ್ ಮಾಡುತ್ತಿದ್ದೀವಿ ಅನ್ನೋದು ತಿಳಿದುಕೊಳ್ಳಬೇಕು. ಆರ್ಥಿಕ ಸ್ವಾತಂತ್ರ್ಯ ಹೆಣ್ಣು ಮಕ್ಕಳಿಗೆ ತುಂಬಾ ಮುಖ್ಯವಾಗುತ್ತದೆ ಅದೊಂದು ರೀತಿ ಧೈರ್ಯ ಕೊಡುತ್ತದೆ. ಜೀವನದಲ್ಲಿ ಏನು ಬೇಕಿದ್ದರೂ ಎದುರಿಸಬಹುದು. ಅಪ್ಪ ಅಮ್ಮ ಮನೆಯಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿಗೆ ಕಲಿಸಿ....ಮದ್ವೆ ಆದ್ಮೇಲೆ ಗಂಡನ ಮೇಲೆ ಡಿಪೆಂಡ್ ಆಗುತ್ತಾರೆ ಆಗ ಕಲಿಯುವುದು ಕಷ್ಟವಾಗುತ್ತದೆ. ಅನಿವಾರ್ಯದಿಂದ ನಾನು ಕಲಿತೆ. 19 ವರ್ಷಕ್ಕೆ ಕಾರು ಖರೀದಿ ಮಾಡಿದೆ ಅದರ ಲೋನ್ ಹಣ ಎಷ್ಟಿತ್ತು ಏನು ಎಂದು ನನಗೆ ಗೊತ್ತಿರಲಿಲ್ಲ. ಅಪ್ಪ ಏನು ಹೇಳುತ್ತಿದ್ದರು ಅದನ್ನು ಕೇಳಿಸಿಕೊಂಡು ಮಾಡುತ್ತಿದ್ದೆ. ಆಮೇಲೆ ನಿರ್ಧಾರ ಮಾಡಿ ಎಲ್ಲಾ ಕಲಿತುಕೊಂಡಿರುವೆ. ನಾನು ಅಕೌಂಟ್ ಸ್ಟುಡೆಂಟ್ ಆಗಿದ್ದರೂ ನನ್ನ ಹಣ ಕಾಸು ನೋಡಿಕೊಂಡಿರಲಿಲ್ಲ. ಅಪ್ಪ ಪ್ರಯತ್ನ ಪಟ್ಟರೂ ನಾನು ಕಲಿಯಲಿಲ್ಲ. ಬಹಳ ಕಷ್ಟ ಪಟ್ಟು ಕಲಿತುಕೊಂಡು' ಎಂದು ಅನು ಹೇಳಿದ್ದಾರೆ.
ಗಂಡನ ಜತೆ ಖುಷಿಯಾಗಿಲ್ಲ ಅಂದ್ರೆ ತಂದೆ-ತಾಯಿ ಮಗಳಿಗೆ ಸಪೋರ್ಟ್ ಮಾಡಿ; ಡಿವೋರ್ಸ್ ಬಗ್ಗೆ ಮೌನ ಮುರಿದ ಅನು ಪ್ರಭಾಕರ್
'ದುಡ್ಡಿನ ವಿಚಾರದಲ್ಲಿ ಹುಷಾರ್ ಆಗಿರು ಎಂದು ಜಯಂತಿ ಅಮ್ಮ ಹೇಳುತ್ತಿದ್ದರು. Always save for Rainy day ಎಂಬ ಮಾತಿದೆ. ಇಂಡಸ್ಟ್ರಿಯಲ್ಲಿ ಹಣ ಮಾಡುವುದು ಕಷ್ಟ ..ಅದರಲ್ಲೂ ಅದೆಷ್ಟೋ ಹೆಣ್ಣು ಮಕ್ಕಳು ಕಷ್ಟ ಎದುರಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೋಡಿರುವೆ. ಇರೋವಾಗ ಹಣ ಸೇವ್ ಮಾಡಿಕೊಳ್ಳಬೇಕು ಕೆಲಸ ಇಲ್ಲ ಅಂದ್ರೂ ಇದೇ ರೀತಿ ಜೀವನ ಮಾಡಬಹುದು ಹೀಗಾಗಿ ಮೊದಲು ಹಣ ಸೇವ್ ಮಾಡಿ. ಗೋಲ್ಡ್ ಅಥವಾ ಲ್ಯಾಂಡ್ ಮೇಲೆ ಹಣ ಹಾಕಿ. ದುಡ್ಡು ಮುಖ್ಯ ಅಲ್ಲ ಅಂತ ಜನರು ಹೇಳುತ್ತಾರೆ ಆದರೆ ದುಡ್ಡು ಇಲ್ಲದೆ ಜೀವನ ನಡೆಯುವುದಿಲ್ಲ. ಎಲ್ಲಾ ಹೆಣ್ಣು ಮಕ್ಕಳು ಖುಷಿಯಾಗಿರಿ ಹಣ ಸೇವ್ ಮಾಡಿ ಪರಿಸ್ಥಿತಿ ಏನೇ ಇರಲಿ ನಿಮ್ಮನ್ನು ನೀವು ಸೇವ್ ಮಾಡಿಕೊಳ್ಳುವಂತೆ ನೋಡಿಕೊಳ್ಳ' ಎಂದಿದ್ದಾರೆ ಅನು.