Asianet Suvarna News Asianet Suvarna News

ಆನಂದ್ ಚಿತ್ರಕ್ಕೆ ನಾಯಕಿಯಾಗಿ ಮೊದಲು ಆಯ್ಕೆಯಾಗಿದ್ದು ಸುಧಾರಾಣಿ ಅಲ್ಲ, ಮತ್ತೊಬ್ಬರು!

ಅಣ್ಣಾವ್ರು ಡಾ ರಾಜ್‌ಕುಮಾರ್ ಮಗ ಶಿವರಾಜ್‌ಕುಮಾರ್ ನಟನೆಯ ಮೊಟ್ಟಮೊದಲ ಸಿನಿಮಾ ಆನಂದ್ ಸೆಟ್ಟೇರಿತು. ಆದರೆ ಆ ವೇಳೆ ಚಿತ್ರದ ನಾಯಕಿಯಾಗಿ ಸುಧಾರಾಣಿ ಆಯ್ಕೆ ಆಗಿರಲಿಲ್ಲ. ಆಗ ಶಿವರಾಜ್‌ಕುಮಾರ್ ಅವರಿಗೆ ನಾಯಕಿಯಾಗಿ ಮತ್ತೊಬ್ಬರು ನಟಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತು..

Another actress selected for shiva rajkumar and sudharani lead anand movie srb
Author
First Published Aug 17, 2024, 2:11 PM IST | Last Updated Aug 17, 2024, 2:12 PM IST

ಕನ್ನಡ ಚಿತ್ರರಂಗದಲ್ಲಿ ಆನಂದ್ (Anand) ಚಿತ್ರ ಒಂದು ಯಶಸ್ವೀ ಸಿನಿಮಾ. 1986ರಲ್ಲಿ ಶಿವರಾಜ್‌ಕುಮಾರ್ (Shiva Rajkumar) ಹಾಗು ಸುಧಾರಾಣಿ (Sudharani) ಜೋಡಿ ಆನಂದ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರವು ನಟ ಶಿವರಾಜ್‌ಕುಮಾರ್ ಹಾಗು ಸುಧಾರಾಣಿ ಇಬ್ಬರಿಗೂ ನಾಯಕ-ನಾಯಕಿಯಾಗಿ ಮೊದಲ ಸಿನಿಮಾ. ಆದರೆ, ಸುಧಾರಾಣಿಯವರು ಅದಕ್ಕೂ ಮೊದಲು ಜಯಶ್ರೀ ಎಂಬ ಹೆಸರಿನಿಂದ ಕೆಲವು ಸಿನಿಮಾಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು. 

ಡಾ ರಾಜ್‌ಕುಮಾರ್ ಅವರು ಕನ್ನಡ ಚಿತ್ರಂಗದಲ್ಲಿ ಮೇರು ಕಲಾವಿದರಾಗಿ ಮಿಂಚಿದ್ದು ಗೊತ್ತೇ ಇದೆ. ಅಂದು ಡಾ ರಾಜ್‌ಕುಮಾರ್ ಅವರು ಕನ್ನಡದ ಸ್ಟಾರ್ ನಟರಾಗಿದ್ದ ಕಾಲ. ಡಾ ರಾಜ್‌ಕುಮಾರ್ ಅವರ ಹಿರಿಯ ಮಗ ಶಿವರಾಜ್‌ಕುಮಾರ್ ಅವರನ್ನು ಸಿನಿಮಾರಂಗಕ್ಕೆ ಪರಿಚಯಿಸಬೇಕೆಂದು ಸಂಕಲ್ಪ ಮಾಡಿದ್ದ ಕಾಲವದು. 1986ರಲ್ಲಿ ಆ ಕಾಲ ಕೂಡಿ ಬಂತು. ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರು ಹೊಸ ಚಿತ್ರ ಘೊಷಿಸಿದರು. 

ಆ ಚಿತ್ರವೇ ಆನಂದ್. ಅಣ್ಣಾವ್ರು ಡಾ ರಾಜ್‌ಕುಮಾರ್ ಮಗ ಶಿವರಾಜ್‌ಕುಮಾರ್ ನಟನೆಯ ಮೊಟ್ಟಮೊದಲ ಸಿನಿಮಾ ಆನಂದ್ ಸೆಟ್ಟೇರಿತು. ಆದರೆ ಆ ವೇಳೆ ಚಿತ್ರದ ನಾಯಕಿಯಾಗಿ ಸುಧಾರಾಣಿ ಆಯ್ಕೆ ಆಗಿರಲಿಲ್ಲ. ಅಂದು ನಟಿ ಸುಧಾರಾಣಿ ಅವರ ಹೆಸರು ಜಯಶ್ರೀ ಎಂದಿತ್ತು. ಅದನ್ನು ಆನಂದ್ ಚಿತ್ರದ ವೇಳೆ ಸುಧಾರಾಣಿ ಎಂದು ಬದಲಾಯಿಸಿದ್ದು ಪಾರ್ವತಮ್ಮನವರು. ಆಗ ಶಿವರಾಜ್‌ಕುಮಾರ್ ಅವರಿಗೆ ನಾಯಕಿಯಾಗಿ ಮತ್ತೊಬ್ಬರು ನಟಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆ ನಟಿ ಅದಾಗಲೇ ಒಂದು ಸೂಪರ್ ಚಿತ್ರದಲ್ಲಿ ನಟಿಸಿ ಕನ್ನಡನಾಡಿನಲ್ಲಿ ಜನಪ್ರಿಯರಾಗಿದ್ದರು. 

ಪಾರ್ವತಮ್ಮನವ್ರು ಹಾಗೆ ಯಾಕೆ ಮಾಡಿದ್ರಂತ ಕೊನೆಗೂ ಗೊತ್ತಾಗ್ಲೇ ಇಲ್ಲ! ಸುಧಾರಾಣಿ ಹೇಳಿದ್ದೇನು?

1986ರಲ್ಲಿ ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನದಲ್ಲಿ ಮೂಡಿ ಬಂದ ಆನಂದ್ ಚಿತ್ರವು ಸೂಪರ್ ಹಿಟ್ ದಾಖಲಿಸಿತು. ನಟ ಶಿವರಾಜ್‌ಕುಮಾರ್ ಹಾಗೂ ನಟಿ ಸುಧಾರಾಣಿ ಜೋಡಿಯನ್ನು ಕನ್ನಡ ಸಿನಿಮಾ ಪ್ರೇಕ್ಷಕರು ಮೆಚ್ಚಿ ಕೊಂಡಾಡಿದರು. 1987ರಲ್ಲಿ ಮತ್ತೆ ಇದೇ ಶಿವರಾಜ್‌ಕುಮಾರ್ ಹಾಗೂ ಸುಧಾರಾಣಿ ಜೋಡಿ 'ಮನ ಮೆಚ್ಚಿದ ಹುಡುಗಿ' ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದು ಯಶಸ್ವೀ ಜೋಡಿ ಎನಿಸಿಕೊಂಡಿತು. ಮನ ಮೆಚ್ಚಿದ ಹುಡುಗಿ ಚಿತ್ರವನ್ನು ಎಂಎಸ್‌ ರಾಜಶೇಖರ್ ನಿರ್ದೇಶನ ಮಾಡಿದ್ದರು. 

ಹೀಗೆ, ಕನ್ನಡ ಚಿತ್ರರಂಗಕ್ಕೆ ನಟ ಸಾರ್ವಭೌಮ ಡಾ ರಾಜ್‌ಕುಮಾರ್ ಕುಟುಂಬದ ಹಿರಿಯ ಮಗ ಶಿವರಾಜ್‌ಕುಮಾರ್ ಅವರು ಯಶಸ್ವಿಯಾಗಿ ಎಂಟ್ರಿ ಕೊಟ್ಟರು. ಆ ಮೂಲಕ ನಟಿ ಸುಧಾರಾಣಿ ಕೂಡ ಕನ್ನಡದ ಸ್ಟಾರ್ ನಟಿಯಾಗಿ ಮಿಂಚತೊಡಗಿದರು. ಬಳಿಕ ಶಿವರಾಜ್‌ಕುಮಾರ್ ಅವರು 'ರಥ ಸಪ್ತಮಿ' ಚಿತ್ರದಲ್ಲಿ ನಟಿಸಿ, ಆ ಚಿತ್ರ ಕೂಡ ಸೂಪರ್ ಸಕ್ಸಸ್ ಕಂಡಿತು. ಆದರೆ ಅದಕ್ಕೆ ಸುಧಾರಾಣಿ ಬದಲು ಆಶಾರಾಣಿ ನಾಯಕಿ ಆಗಿದ್ದರು. 

ಆನಂದ್, ಮನ ಮೆಚ್ಚಿದ ಹುಡುಗಿ ಹಾಗು ರಥ ಸಪ್ತಮಿ ಮೂರೂ ಚಿತ್ರಗಳ ಯಶಸ್ಸಿನಿಂದ ನಟ ಶಿವರಾಜ್‌ಕುಮಾರ್ ಕನ್ನಡದಲ್ಲಿ 'ಹ್ಯಾಟ್ರಿಕ್ ಹೀರೋ' ಎಂಬ ಪಟ್ಟ ಪಡೆದರು. ನಟಿ ಸುಧಾರಾಣಿ ಕೂಡ ಮುಂದೆ ಸ್ಟಾರ್ ನಟಿಯಾಗಿ ಮೆರೆದರು. ಆದರೆ, ಆನಂದ್ ಚಿತ್ರಕ್ಕೆ ಸುಧಾರಾಣಿ ಅವರಿಗಿಂತ ಮೊದಲು ಆಯ್ಕೆಯಾಗಿದ್ದ ಆ ನಟಿ ಮಾತ್ರ ಬಳಿಕ ಕನ್ನಡ ಚಿತ್ರರಂಗದಲ್ಲಿ ಮಿಂಚಲು ಸಾಧ್ಯವಾಗಲೇ ಇಲ್ಲ. ಅವರು ಬೇರಾರೂ ಅಲ್ಲ, ಇತ್ತೀಚೆಗಷ್ಟೇ ನಮ್ಮನ್ನಗಲಿರುವ ನಟಿ ಅಪರ್ಣಾ (Aparna)..!

ತಮಿಳು ಡೈರೆಕ್ಟರ್ ಜೊತೆ ಕರುನಾಡ ಚಕ್ರವರ್ತಿ ಶಿವಣ್ಣ; ಸೆಟ್ಟೇರಿತು 131ನೇ ಸಿನಿಮಾ!

ಹೌದು, ಶಿವಣ್ಣರ ಆನಂದ್ ಚಿತ್ರಕ್ಕೆ ಮೊದಲು ಆಯಗ್ಕೆಯಾಗಿದ್ದು ಆಗಷ್ಟೇ 'ಮಸಣದ ಹೂವು' ಚಿತ್ರದಲ್ಲಿ ನಟಿಸಿ ಜನಪ್ರಿಯರಾಗಿದ್ದ ಅಪರ್ಣಾ (Aparna Vastarey). ಅವರನ್ನು ಚಿ ಉದಯಶಂಕರ್ ಅವರು ಆನಂದ್ ಚಿತ್ರಕ್ಕೆ ಆಯ್ಕೆ ಮಾಡಿದ್ದರು. ಅಂದಿನ ವರ್ತಮಾನ ಪತ್ರಿಕೆಗಳಲ್ಲಿ ಕೂಡ ಡಾ ರಾಜ್‌ಕುಮಾರ್ ಮಗ ಶಿವರಾಜ್‌ಕುಮಾರ್ ಅವರಿಗೆ ಜೋಡಿಯಾಗಿ ನಟಿ ಅಪರ್ಣಾ ಆಯ್ಕೆ ಆಗಿದ್ದಾರೆ ಎಮದು ಸುದ್ದಿಯೂ ಆಗಿತ್ತು. ಆದರೆ, ಹೊಸ ನಟರಾಗಿ ಎಂಟ್ರಿ ಕೊಡಬೇಕಿದ್ದ ಶಿವರಾಜ್‌ಕುಮಾರ್ ಅವರಿಗೆ ನಾಯಕಿಯೂ ಹೊಸಬರೇ ಆಗಿರಲಿ ಎಂದು ಬಳಿಕ ಸುಧಾರಾಣಿ ಅವರನ್ನು ಆಯ್ಕೆ ಮಾಡಲಾಯ್ತು. ಮುಂದಿನದ್ದು ಈಗ ಇತಿಹಾಸ!

Latest Videos
Follow Us:
Download App:
  • android
  • ios