ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಜೊತೆಗೆ ಹಾರರ್ ಅಂಶ ಕೂಡ ಇದೆ. ನೀರು, ಬೆಂಕಿ, ಗಾಳಿ ಮೂರನ್ನು ಪ್ರತಿನಿಧಿಸುವ ಮೂರು ಪ್ರಮುಖ ಪಾತ್ರಗಳಲ್ಲಿ ವಿಕಾಶ್ ಉತ್ತಯ್ಯ, ಮಿಥುನ್ ತೀರ್ಥಹಳ್ಳಿ, ರಾಘವ್ ಕೊಡಚಾದ್ರಿ ನಟಿಸಿದ್ದಾರೆ. 

‘ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಜೊತೆಗೆ ಹಾರರ್ ಅಂಶ ಕೂಡ ಇದೆ. ನೀರು, ಬೆಂಕಿ, ಗಾಳಿ ಮೂರನ್ನು ಪ್ರತಿನಿಧಿಸುವ ಮೂರು ಪ್ರಮುಖ ಪಾತ್ರಗಳಲ್ಲಿ ವಿಕಾಶ್ ಉತ್ತಯ್ಯ, ಮಿಥುನ್ ತೀರ್ಥಹಳ್ಳಿ, ರಾಘವ್ ಕೊಡಚಾದ್ರಿ ನಟಿಸಿದ್ದಾರೆ. ಚಿತ್ರದ ಟೀಸರ್, ಹಾಡುಗಳು ಮತ್ತು ಟ್ರೇಲರ್‌ಗೆ ಮೆಚ್ಚುಗೆ ದೊರೆತಿದೆ’. ಹೀಗೆ ಹೇಳಿದ್ದು ‘ಅಪಾಯವಿದೆ ಎಚ್ಚರಿಕೆ’ ಸಿನಿಮಾದ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ. ಈ ಚಿತ್ರದ ಟ್ರೇಲರ್‌ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದ್ದು, ಭಾರಿ ಮೆಚ್ಚುಗೆ ಗಳಿಸಿದೆ. 

ಈ ಸಿನಿಮಾ ಫೆಬ್ರವರಿ 28ರಂದು ಬಿಡುಗಡೆಯಾಗುತ್ತಿದೆ. ವಿಕಾಶ್ ಉತ್ತಯ್ಯ, ‘ಈ ಚಿತ್ರದಲ್ಲಿ ಪಕ್ಕಾ ನಾಸ್ತಿಕನಾಗಿ ನಟಿಸಿದ್ದೇನೆ. ನನ್ನನ್ನು ಇಲ್ಲಿಯವರೆಗೂ ನಡೆಸಿದ ಎಲ್ಲರಿಗೂ ಧನ್ಯವಾದ’ ಎಂದರು. ನಿರ್ಮಾಪಕರಾದ ಮಂಜುನಾಥ್.ವಿ.ಜಿ ಹಾಗೂ ಪೂರ್ಣಿಮಾ ಗೌಡ, ‘ಹೊಸ ಉತ್ಸಾಹಿ ತಂಡದ ಪ್ರಯತ್ನಕ್ಕೆ ಎಲ್ಲರೂ ಬೆಂಬಲಿಸಿ’ ಎಂದರು. ಚಿತ್ರದ ನಾಯಕಿ ರಾಧಾ ಭಗವತಿ, ಮಿಥುನ್ ತೀರ್ಥಹಳ್ಳಿ, ರಾಘವ್ ಕೊಡಚಾದ್ರಿ, ಅಶ್ವಿನ್ ಹಾಸನ್, ದೇವ್, ಸಂಗೀತ ನಿರ್ದೇಶಕ ಸುನಾದ್ ಗೌತಮ್, ಗಾಯಕ ರಜತ್ ಹೆಗ್ಡೆ ಇದ್ದರು.

ಚುರುಕು ನೋಟವೇ ಹಾಡು ರಿಲೀಸ್: ‘ಅಪಾಯವಿದೆ ಎಚ್ಚರಿಕೆ’ ಚಿತ್ರತಂಡದ ಚುರುಕು ನೋಟವೇ ಎಂಬ ಹಾಡು ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಮೆಚ್ಚುಗೆ ಗಳಿಸಿದೆ. ಸುನಾದ್ ಗೌತಮ್ ಸಂಗೀತ ನಿರ್ದೇಶನದ ಈ ಹಾಡನ್ನು ರಜತ್ ಹೆಗ್ಡೆ ಹಾಡಿದ್ದಾರೆ. ಜೊತೆಗೆ ಚಿತ್ರದ ‘ಬ್ಯಾಚುಲರ್ಸ್‌ ಬದುಕು’ ಹೆಸರಿನ ಹಾಡು ಇತ್ತೀಚೆಗೆ ಬಿಡುಗಡೆ ಆಗಿಯಿತು. ತಿಲಕ್‌, ರಾಕೇಶ್‌ ಅಡಿಗ, ನವೀನ್‌ ಶಂಕರ್‌ ಹಾಗೂ ವಿಕ್ಕಿ ವರುಣ್‌ ಹಾಡು ಬಿಡುಗಡೆ ಮಾಡಿದ್ದು, ನಿರ್ದೇಶಕ ಅಭಿಜಿತ್‌ ತೀರ್ಥಹಳ್ಳಿ ಸಾಹಿತ್ಯ ಬರೆದಿದ್ದಾರೆ. ಮಂಜುನಾಥ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ವಿಷ್ಣುವರ್ಧನ್ ಸರ್‌ ಮೇಲಿನ ಪ್ರೀತಿಗೆ ಇಟ್ಟ ಹೆಸರು ವಿಷ್ಣು ಪ್ರಿಯ: ನಟ ಶ್ರೇಯಸ್ ಮಂಜು

ಅಭಿಜಿತ್ ತೀರ್ಥಹಳ್ಳಿ, ‘ಚಿತ್ರಕ್ಕೆ ಈ ಹಾಡು ಬರೆಯಲು ನನ್ನ ಬ್ಯಾಚುಲರ್‌ ಜೀವನವೇ ಸ್ಫೂರ್ತಿ. ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಇದು‌ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ. ಹೀಗಾಗಿ ಪ್ರೇಕ್ಷಕರಿಗೆ ಯಾವುದೇ ರೀತಿಯಲ್ಲೂ ಬೇಸರ ಆಗಲ್ಲ’ ಎಂದರು. ನಟ ವಿಕಾಶ್‌ ಉತ್ತಯ್ಯ, ‘ನಮ್ಮ ಚಿತ್ರದ ಮೋಷನ್‌ ಪೋಸ್ಟರ್‌ ನೋಡಿದಾಗ ಇದೊಂದು ಹಾರಾರ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ ಎಂದುಕೊಂಡರು. ಈಗ ಬಿಡುಗಡೆಗೊಂಡಿರುವ ಹಾಡಿನಿಂದ ಇದು ಮನರಂಜನಾತ್ಮಕ ಚಿತ್ರ ಅಂದುಕೊಳ್ಳುತ್ತಾರೆ. ಎಲ್ಲಾ ಜಾನರ್‌ಗಳನ್ನು ಒಳಗೊಂಡ ಕೌಟುಂಬಿಕ ಸಿನಿಮಾ ಇದು’ ಎಂದರು.