Asianet Suvarna News Asianet Suvarna News

ನನ್ನಂತೆ ಬೆಳೆಯಬೇಕು ಎಂದು ಆಸೆ ಪಡುತ್ತಿದ್ದಾಳೆ; ತಂಗಿಗೆ ನಾನೇ ಎರಡನೇ ಅಮ್ಮ ಎಂದ ರಶ್ಮಿಕಾ ಮಂದಣ್ಣ

ಸಿನಿಮಾ ಯಶಸ್ಸಿನಲ್ಲಿರುವ ರಶ್ಮಿಕಾ ಮಂದಣ್ಣ ಫ್ಯಾಮಿಲಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹಳೆ ಸಂದರ್ಶನ ನೋಡಿ ನೆಟ್ಟಿಗರು ಫುಲ್ ಖುಷ್....

Animal Rashmika Mandanna talks about sister shiman and family vcs
Author
First Published Dec 20, 2023, 12:37 PM IST

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸದ್ಯ ಆನಿಮಲ್ ಸಿನಿಮಾ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಟಿ ಸಹೋದರಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. 

ಬಾಲಿವುಡ್ ಹಿಟ್ಸ್‌ ತೆಲುಗು ಟಿವಿ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಮಾತನಾಡುವಾಗ ಸಹೋದರಿ ಜೊತೆಗಿರುವ ಫೋಟೋ ನೋಡುತ್ತಾರೆ. ತಂಗಿ ಹುಟ್ಟಿದ ಮೊದಲ ದಿನದ ಫೋಟೋ ಹಾಗೂ ಆಕೆ ಸದ್ಯದ ಫೋಟೋ ನೋಡಿ ಖುಷಿ ಪಡುತ್ತಾರೆ. ಅದರಲ್ಲಿ ತಂಗಿ ತುಟಿಗೆ ರಶ್ಮಿಕಾ ಮಂದಣ್ಣ ಮುತ್ತು ಕೊಡುತ್ತಿರುವ ಫೋಟೋ ಇದೆ...ಪುನೀತ್ ರಾಜ್‌ಕುಮಾರ್ ಜೊತೆ ಅಂಜನಿಪುತ್ರ ಸಿನಿಮಾ ಚಿತ್ರೀಕರಣ ಮಾಡುವ ಸೆರೆ ಹಿಡಿದ ಫೋಟೋ ಅಂತೆ. ಅಲ್ಲದೆ ಪುನೀತ್ ರಾಜ್‌ಕುಮಾರ್‌ರನ್ನು ಭೇಟಿ ಮಾಡಿ ಖುಷಿ ಪಟ್ಟಿದ್ದಳಂತೆ. 

ಸ್ಟಾರ್‌ ನಟಿಯರ ನಡುವೆ ತಂದಿಡುವ ಕೆಲ್ಸ ಮಾಡ್ಬೇಡಿ; ರಶ್ಮಿಕಾ ಮಂದಣ್ಣ ಬಗ್ಗೆ ಸಮಂತಾ ಹೇಳಿಕೆ

ನನ್ನ ತಂಗಿಗೆ ನಾನು ಎರಡನೇ ತಾಯಿ ಇದ್ದಂತೆ. ಆಕೆ ನನ್ನ ಮಗಳು ಅನಿಸುತ್ತಾಳೆ. ನನ್ನ ತಂಗಿ ವಿಚಾರದಲ್ಲಿ ನನಗೆ ಜವಾಬ್ದಾರಿ ಹೆಚ್ಚಿಗೆ ಇದೆ. ಆಕೆ ಸದಾ ಖುಷಿಯಾಗಿ ಇರಬೇಕು ಸುರಕ್ಷಿತವಾಗಿ ಇರಬೇಕು. ಪ್ರತಿಯೊಬ್ಬ ಅಕ್ಕಂದಿರು ಇಷ್ಟ ಪಡುವಂತೆ ನನಗೂ ಆಕೆ ಚೆನ್ನಾಗಿ ಓದಬೇಕು ಅನ್ನೋ ಆಸೆ ತುಂಬಾ ಇದೆ. ಕೆಲವೊಮ್ಮೆ ನಾನು ಮಾಡುವ ಕೆಲಸಗಳು ಫ್ಯಾಮಿಲಿ ಮೇಲೆ ಒಂದಲ್ಲ ಒಂದು ರೀತಿ ಪರಿಣಾಮ ಬೀರುತ್ತದೆ...ಅದು ನನ್ನ ತಂಗಿ ವಿಚಾರದಲ್ಲಿ ಆಗಬಾರದು. ಇಷ್ಟು ಚಿಕ್ಕ ವಯಸ್ಸಿಗೆ ಪ್ರಪಂಚ ಹೇಗಿದೆ ಅನ್ನೋದು ಆಕೆಗೆ ಅರ್ಥ ಆಗುವುದಿಲ್ಲ ಈ ನೆಗೆಟಿವಿಟಿ ಅವಳಿಗೆ ತೊಂದರೆ ಕೊಡಬಾರದು. ಆಕೆಗೆ ನಾನು ಅಂದ್ರೆ ತುಂಬಾ ಇಷ್ಟ...ದೊಡ್ಡವಾಳ ಮೇಲೆ ನನ್ನಂತೆ ಆಗಬೇಕು ಎಂದು ಆಸೆ ಪಡುತ್ತಾಳೆ. 

ರಶ್ಮಿಕಾ ಅಪ್ಪಟ ಅಭಿಮಾನಿ ವಿಮಲ್‌ ಎಂಬುವವರು ತಮ್ಮ ಮಗಳಿಗೆ ರಶ್ಮಿಕಾ ಮಂದಣ್ಣ ಎಂದು ಹೆಸರು ಇಟ್ಟಿದ್ದಾರೆ. ಅದನ್ನು ಕೇಳಿ ಖುಷಿ ಪಟ್ಟಿ ರಶ್ಮಿಕಾ ಮಗುವನ್ನು ಮುದ್ದಡಿದ್ದಾರೆ. 

Animal Rashmika Mandanna talks about sister shiman and family vcs

ರಶ್ಮಿಕಾ ಮಂದಣ್ಣ ಮತ್ತು ತಂಗಿ ಶಿಮನ್ ಮಂದಣ್ಣಗೆ 17 ವರ್ಷ ವ್ಯತ್ಯಾಸವಿದೆ. 'ತಂಗಿ ಜೊತೆ ಇರಲು ಅಥವಾ ಆಕೆ ಬೆಳೆಯುತ್ತಿರುವುದನ್ನು ನೋಡಲು ಆಗುತ್ತಿಲ್ಲ ಅನ್ನೋ ಬೇಸರ ತುಂಬಾ ಇದೆ. ನನ್ನ ತಾಯಿ 17-18 ವರ್ಷದವರು ಆದಾಗಿನಿಂದ ನೋಡುತ್ತಿರುವೆ ಆಕೆಗೆ ಈಗ 42 ವರ್ಷ...ಪೋಷಕರು ಕೂಡ ಬೆಳೆಯುತ್ತಿದ್ದಾರೆ. ಫ್ಯಾಮಿಲಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀನಿ. ಹಾಸ್ಟಲ್‌ನಲ್ಲಿ ಬೆಳೆದ ಹುಡುಗಿ ನಾನು ಆದರೆ ತಂಗಿ ಬಂದ ಮೇಲೆ ಒಟ್ಟಿಗೆ ಇದ್ದು..ಆಕೆಯನ್ನು ಮುದ್ದು ಮಾಡಿ ಊಟ ಮಾಡಿಸುತ್ತಿದ್ದೆ. ಆಕೆಯ ಡೈಪರ್ ಬದಲಾಯಿಸುವುದು ಸ್ನಾನ ಮಾಡಿಸುವುದು..ಒಂದು ರೀತಿ ಎರಡನೇ ತಾಯಿ ತರ ನೋಡಿಕೊಳ್ಳುತ್ತಿದ್ದೆ. ಕೆಲಸ ಬ್ಯುಸಿಯಲ್ಲಿ ಹೆಚ್ಚಿನ ಪ್ರಯಾಣ ಮಾಡುತ್ತಿರುವ ಕಾರಣ ಸಮಯ ಸಿಗುತ್ತಿಲ್ಲ ಎಂದು ರಶ್ಮಿಕಾ ಬಾಲಿವುಡ್ ಬಬಲ್‌ಗೆ ಹೇಳಿದ್ದರು.  

Follow Us:
Download App:
  • android
  • ios