Asianet Suvarna News Asianet Suvarna News

56ನೇ ವಯಸ್ಸಿನಲ್ಲಿ 2ನೇ ಮದುವೆ ಮಾಡಿಕೊಂಡ ನಟ ಪೃಥ್ವಿರಾಜ್; ಪ್ರಪೋಸ್‌ ವಿಡಿಯೋ ಡಿಲೀಟ್, ಡಿವೋರ್ಸ್‌ ಸುಳಿವು?

ಸೋಷಿಯಲ್ ಮೀಡಿಯಾದಲ್ಲಿ ಬಬ್ಲೂ ಮೂರನೇ ಮದುವೆ ಬಗ್ಗೆ ಹರಿದಾಡುತ್ತಿದೆ ವದಂತಿ. ಪ್ರಪೋಸ್ ವಿಡಿಯೋ ಯಾಕೆ ಡಿಲೀಟ್?

Animal fame Babloo prithveeraj divorcing his second wife rumours after propose video delete vcs
Author
First Published Dec 4, 2023, 6:33 PM IST

ಅನಿಮಲ್ ಸಿನಿಮಾದಲ್ಲಿ ನಟಿಸಿರುವ ತಮಿಳು ಹಾಗೂ ತೆಲುಗು ಜನಪ್ರಿಯ ನಟ ಬಬ್ಲೂ ಪೃಥ್ವಿರಾಜ್ ಮೂಲತಃ ಬೆಂಗಳೂರಿನವರು. ಒಂದೆರಡು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸದ್ಯ ಅನಿಮಲ್ ಸಿನಿಮಾ ಅಲ್ಲ ವೈಯಕ್ತಿಕ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.

ಹೌದು! 1994ರಲ್ಲಿ ಬಬ್ಲೂ ಪೃಥ್ವಿರಾಜ್ ಬೀನಾ ಎಂಬುವವರನ್ನು ಮದುವೆಯಾದರು. ಅವರಿಗೆ ಅಹೆದ್ ಮೋಹನ್ ಜಬ್ಬಾರ್ ಎಂಬ ಮುದ್ದಾಗ ಮಗನಿದ್ದಾನೆ. ಸಣ್ಣ ಪುಟ್ಟ ಮನಸ್ಥಾಪಗಳಿಂದ ಪೃಥ್ವಿ ಮತ್ತು ಬೀನಾ 2022ರ ನವೆಂಬರ್‌ನಲ್ಲಿ ಡಿವೋರ್ಸ್ ಪಡೆದರು. ಸುಮಾರಯ 6 ವರ್ಷಗಳ ಕಾಲ ಈ ಜೋಡಿ ಪ್ರತ್ಯೇಕವಾಗಿ ದೂರವಾಗಿದ್ದರು ಎನ್ನಲಾಗಿದೆ. ಇದಾದ ಮೇಲೆ ಹೀಗೆ ಸಾಮಾನ್ಯರಲ್ಲಿ  ಸಾಮಾನ್ಯ ಮಹಿಳೆಯೊಬ್ಬರ ಮೇಲೆ ಬಬ್ಲೂ ಪೃಥ್ವಿರಾಜ್ ಲವ್ ಆಗಿ ಮತ್ತೊಂದು ಮದುವೆ ಮಾಡಿಕೊಳ್ಳುತ್ತಾರೆ.

ಅವರೇ ರುಕ್ಮಣಿ ಶೀತಲ್. ಹೀಗೆ ಬಬ್ಲೂ ಪೃಥ್ವಿರಾಜ್ ಅವರನ್ನು ಗುರುತಿಸಿ ಇವರು ಆಕ್ಟರ್ ಆಕ್ಟರ್ ಎಂದು ಮಾತನಾಡಿಸುತ್ತಾರೆ. ಸೆಲ್ಫಿ ಪಡೆದುಕೊಂಡು ಹೋಗುತ್ತಾರೆ. ಅಲ್ಲಿಂದ ಶುರುವಾದ ಪರಿಚಯ ಪೋನ್ ನಂಬರ್ ಬದಲಾಯಿಸಿಕೊಂಡು ಸ್ನೇಹಿತರಾಗುತ್ತಾರೆ. ಸ್ನೇಹ ಪ್ರೀತಿಗೆ ತಿರುಗಿ ಮದುವೆ ಮಾಡಿಕೊಳ್ಳುತ್ತಾರೆ. ಈ ವಿಚಾರವನ್ನು ಈ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು ಎಂದು ಖಾಸಗಿ ವೆಬ್‌ ಪೋರ್ಟಲ್ ಸುದ್ದಿ ಮಾಡಿದೆ. 

ಈಗ ಇದ್ದಕ್ಕಿದ್ದಂತೆ ರುಕ್ಮಿಣಿ ತಮ್ಮ ಸೋಷಿಯಲ್ ಮೀಡಿಯಾದಿಂದ ಬಬ್ಲೂ ಪೃಥ್ವಿರಾಜ್ ಪ್ರಪೋಸ್ ಮಾಡಿರುವ ವಿಡಿಯೋ ಡಿಲೀಟ್ ಮಾಡಿದ್ದಾರೆ. ಇದರ ಹಿಂದೆ ಗುಸು ಗುಸು ಪಿಸು ಪಿಸು ಕೇಳಿ ಬರುತ್ತಿದೆ. ಶೀಘ್ರದಲ್ಲಿ ಬಬ್ಲೂ ಪೃಥ್ವಿರಾಜ್ ಮತ್ತು ರುಕ್ಮಿಣಿ ಡಿವೋರ್ಸ್ ಪಡೆಯಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಸಿಕ್ಕಾಪಟ್ಟೆ ಫಿಟ್ನೆಸ್‌ ಬಗ್ಗೆ ಕಾಳಜಿ ವಹಿಸುವ ಬಬ್ಲೂ ಪೃಥ್ವಿರಾಜ್ ಮತ್ತು ರುಕ್ಮಿಣಿ ವರ್ಕೌಟ್ ಮಾಡುವ ವಿಡಿಯೋ ಮತ್ತು ಫೋಟೋ ಅಪ್ಲೊಡ್ ಮಾಡುತ್ತಿದ್ದರು. ಈಗ ಅದು ಕೂಡ ಸ್ಟಾಪ್ ಆಗಿದೆ. 56ನೇ ವಯಸ್ಸಿನಲ್ಲಿ ಮಗಳ ವಯಸ್ಸಿನ ಹುಡುಗಿ ಜೊತೆ ಮದುವೆ ಮಾಡಿಕೊಂಡರು ಎಂದು ಟೀಕೆ ಎದುರಾಗಿತ್ತು. ಈಗ ಡಿವೋರ್ಸ್ ಪಡೆದರೆ ಟೀಕೆಗೆ ದಾರಿ ಮಾಡಿಕೊಟ್ಟಂತೆ ಎನ್ನುತ್ತಾರೆ ಅಭಿಮಾನಿಗಳು. 

Follow Us:
Download App:
  • android
  • ios