ಸಿನಿಮಾ ಪ್ರಚಾರಕ್ಕಾಗಿ ಆಯಾ ಸಿನಿ ತಂಡಗಳು ಬೇರೆ ಬೇರೆ ರೀತಿಯ ಪ್ರಮೋಶನ್ ಟೆಕ್ನಿಕ್‌ಗಳನ್ನು ಮಾಡುತ್ತವೆ. ವಿಭಿನ್ನವಾಗಿ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತವೆ. ಸ್ಯಾಂಡಲ್‌ವುಡ್‌ನಲ್ಲಿ 'ಒಡೆಯ' ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು ಪ್ರಚಾರಕ್ಕಾಗಿ ಸಿನಿ ತಂಡ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. 

ಶುರುವಾಯ್ತು 'ಒಡೆಯ'ನ ಅಬ್ಬರ; 700 ಚಿತ್ರಮಂದಿರಗಳಲ್ಲಿ ಪ್ರದರ್ಶನ!

'ಒಡೆಯ' ಚಿತ್ರದ ಆಡಿಯೋ ಹಕ್ಕನ್ನು ಆನಂದ್ ಆಡಿಯೋ ಖರೀದಿಸಿದೆ. ದರ್ಶನ್ ಅಭಿಮಾನಿಗಳಿಗಾಗಿ ಒಂದು ಸ್ಪರ್ಧೆಯನ್ನು ಏರ್ಪಡಿಸಿದೆ.  ಈ ಕಾಂಪಿಟೇಶನ್‌ನಲ್ಲಿ ಗೆದ್ದವರಿಗೆ ದರ್ಶನ್ ಸಹಿಯಿರುವ ಕಾಫಿ ಮಗ್‌ ಬಹುಮಾನವಾಗಿ ಸಿಗಲಿದೆ. 

ಇದಕ್ಕೆ ಮಾಡಬೇಕಾಗಿದ್ದಷ್ಟೇ. 

ನಿಮ್ಮ ಫೇವರೇಟ್ ಮ್ಯೂಸಿಕ್ App ಲಿ 'ಒಡೆಯ' ಸಿನಿಮಾದ ಫೇವರೆಟ್ ಹಾಡೊಂದನ್ನು ಕೇಳಬೇಕು. ಅದರ ಸ್ಕ್ರೀನ್ ಶಾಟ್ ಹೊಡೆದು ಹ್ಯಾಶ್ ಟ್ಯಾಗ್‌ನೊಂದಿಗೆ ಫೇಸ್‌ಬುಕ್, ಟ್ವಿಟರ್‌ನಲ್ಲಿ ಆನಂದ್‌ ಆಡಿಯೋಗೆ ಟ್ಯಾಗ್‌ ಮಾಡಿ ಶೇರ್ ಮಾಡಬೇಕು.  ಅತೀ ಹೆಚ್ಚು ಲೈಕ್ ಬಂದವರಿಗೆ ಬಹುಮಾನ ನೀಡಲಾಗುವುದು.