ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಒಡೆಯ' ಚಿತ್ರ ಕನ್ನಡ ಚಿತ್ರರಂಗದಲ್ಲಿ ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿದೆ. ಬಾಕ್ಸ್‌ ಆಫೀಸ್ ಮುಟ್ಟುವುದರಲ್ಲಿ ಅನುಮಾನವೇ ಇಲ್ಲ.

ಬಿಟ್ಟಿದ್ದು ಒಂದೇ ನಿಮಿಷದ ಟೀಸರ್; ಡಿ ಬಾಸ್ ಮಾಡಿದ ದಾಖಲೆ ಅಷ್ಟಿಷ್ಟಲ್ಲ!

 

'ಒಡೆಯ' ಚಿತ್ರವನ್ನು ದೇಶಾದ್ಯಂತ ಸುಮಾರು 700 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಮಾಡೋಕೆ ನಿರ್ಮಾಪಕ ಸಂದೇಶ ನಾಗರಾಜ್ ಮುಂದಾಗಿದ್ದಾರೆ, ಈಗಾಗಲೇ ಚಿತ್ರದ ಟೀಸರ್ ಮತ್ತು ಎರಡು ಲಿರಿಕಲ್ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಚಿತ್ರಕ್ಕೆ U/A ಸರ್ಟಿಫಿಕೇಟ್‌ ಸಿಕ್ಕಿದೆ ಎಂದು ಹೇಳಲಾಗಿದೆ.

ಧೂಳ್ ಎಬ್ಬಿಸಿದ ಒಡೆಯನ ಟಪ್ಪಾಂಗುಚ್ಚಿ ಸಾಂಗ್!

ಡಿಸೆಂಬರ್ 1 ಕ್ಕೆ ಟ್ರೈಲರ್ ರಿಲೀಸ್‌ ಮತ್ತು ಡಿಸೆಂಬರ್‌ 12ರಂದು ತೆರೆ ಕಾಣಲು ಸಜ್ಜಾಗುತ್ತಿರುವ ಚಿತ್ರಕ್ಕೆ ಅಭಿಮಾನಿಗಳು ಈಗಾಗಲೆ ಕೌಂಟ್ ಡೌನ್ ಶುರು ಮಾಡಿದ್ದಾರೆ. 'ಶ್ಯಾನೆ ಲವ್‌ ಆಗೋಯ್ತಲ್ಲೇ ನಂಜಿ' ಹಾಡಿನಲ್ಲಿ ನಟಿ ಸನಾ ತಿಮ್ಮಯ್ಯ ಲುಕ್ ಕೂಡಾ ರಿವೀಲ್ ಮಾಡಿದ್ದಾರೆ.