Asianet Suvarna News Asianet Suvarna News

ಹಿರಿಯ ನಟಿ ವನಿತಾ ವಾಸು ಹುಟ್ಟುಹಬ್ಬ; ಅಮೃತಧಾರೆ 'ಶಕುಂತಲಾ'ಗೆ ಶುಭಾಶಯಗಳ ಸರಮಾಲೆ!

ನಟಿ ವನಿತಾ ವಾಸು ನಟಿಸಿದ ಬಹಳಷ್ಟು ಚಿತ್ರಗಳು ಸಕ್ಸಸ್ ಕಂಡಿವೆ. ಕಾಡಿನ ಬೆಂಕಿ, ನಿಷ್ಕರ್ಷ ಹಾಗೂ ಉತ್ಕರ್ಷ ಮುಂತಾದ ಚಿತ್ರಗಳು ಜನಮಾನಸದಲ್ಲಿ ಇನ್ನೂ ಅಚ್ಚಳಿಯದೇ ಇವೆ. ಶಂಕರ್ ನಾಗ್-ವನಿತಾ ವಾಸು  ಹಾಗೂ ಕಾಶೀನಾಥ್ ವನಿತಾ ವಾಸು ಜೋಡಿಯನ್ನು ಜನಮೆಚ್ಚಿದ ಜೋಡಿ ಎನ್ನಬಹುದು. 

Amruthadhaare serial fame Actress Vanitha Vasu celebrating her birthday srb
Author
First Published Nov 2, 2023, 5:23 PM IST

ಹಿರಿಯ ನಟಿ ವನಿತಾ ವಾಸು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯ ಜೀ ಕನ್ನಡದ 'ಅಮೃತಧಾರೆ' ಸೀರಿಯಲ್‌ನಲ್ಲಿ ಶಕುಂತಲಾ ಪಾತ್ರದಲ್ಲಿ ಮಿಂಚುತ್ತಿರುವ ನಟಿ, ಈ ಮೊದಲು ಬಹಳಷ್ಟು ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ನಟಿಸಿ ಜನಪ್ರಿಯತೆ ಪಡೆದವರು. ಕಾಶೀನಾಥ್ ಜತೆ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ವನಿತಾ ವಾಸು, ಉತ್ಕರ್ಷ, ಆಗುಂತಕ, ತರ್ಕ, ನಿಗೂಢ ರಹಸ್ಯ, ಯಾರಿಗೂ ಹೇಳ್ಬೇಡಿ ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಅನಂತ್ ನಾಗ್, ಶಂಕರ್ ನಾಗ್, ವಿಷ್ಣುವರ್ಧನ್, ಅಂಬರೀಷ್, ಕಾಶೀನಾಥ್, ಶಶಿಕುಮಾರ್ ಹಾಗೂ ಹಲವು ಖ್ಯಾತನಾಮರ ಜತೆ ಕೂಡ ನಟಿಸಿರುವ ವನಿತಾವಾಸು, ಹಲವು ವರ್ಷಗಳ ಹಿಂದೆಯೇ ಕಿರುತೆರೆಗೆ ಕೂಡ ಕಾಲಿಟ್ಟಿದ್ದಾರೆ. ಸದ್ಯ ಅವರು ಜೀ ಕನ್ನಡದ 'ಅಮೃತಧಾರೆ' ಸೀರಿಯಲ್‌ನಲ್ಲಿ ನೆಗೆಟಿವ್ ಶೇಡ್ ಇರುವ ಶಕುಂತಲಾ ಪಾತ್ರದಲ್ಲಿ ನಟಿಸಿ ವೀಕ್ಷಕರ ಮೆಚ್ಚುಗೆ ಗಳಿಸುತ್ತಿದ್ದಾರೆ. ಹೆಚ್ಚಾಗಿ ವಿಲನಿಶ್ ರೋಲ್‌ಗಳನ್ನೇ ಆಯ್ಕೆಮಾಡಿಕೊಳ್ಳುವ ನಟಿ ವನಿತಾ ವಾಸು, ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಸಹ ಸಕ್ಸಸ್ ಕಂಡವರು. 

ಡೈರೆಕ್ಟರ್ ಹೇಳಿದ್ದಕ್ಕೆ ಸ್ಕೂಟಿನಲ್ಲಿ ಒಟ್ಟಿಗೇ ಹೋಗುತ್ತಿದ್ದಾರೆ ಪಾಪ; ಪುಟ್ಟಕ್ಕನ ಸಂಸಾರಕ್ಕೆ ಇದೆಂಥಾ ಕಾಮೆಂಟ್!

ನಟಿ ವನಿತಾ ವಾಸು ನಟಿಸಿದ ಬಹಳಷ್ಟು ಚಿತ್ರಗಳು ಸಕ್ಸಸ್ ಕಂಡಿವೆ. ಕಾಡಿನ ಬೆಂಕಿ, ನಿಷ್ಕರ್ಷ ಹಾಗೂ ಉತ್ಕರ್ಷ ಮುಂತಾದ ಚಿತ್ರಗಳು ಜನಮಾನಸದಲ್ಲಿ ಇನ್ನೂ ಅಚ್ಚಳಿಯದೇ ಇವೆ. ಶಂಕರ್ ನಾಗ್-ವನಿತಾ ವಾಸು  ಹಾಗೂ ಕಾಶೀನಾಥ್ ವನಿತಾ ವಾಸು ಜೋಡಿಯನ್ನು ಜನಮೆಚ್ಚಿದ ಜೋಡಿ ಎನ್ನಬಹುದು. ಅನಂತ್ ನಾಗ, ವಿಷ್ಣುವರ್ಧನ್ ಹಾಗೂ ಅವರ ಮುಂದಿನ ಜನರೇಶನ್ ನಟರುಗಳ ಜತೆ ಕೂಡ ವನಿತಾ ವಾಸು ನಟಿಸಿ ಸೈ ಎನಿಸಿಕೊಂಡಿದ್ದಾರೆ. 

ಕಾಜೋಲ್‌ ಮುಂಚೆ ಅಜಯ್ ದೇವಗನ್ ಲವ್ ಮಾಡಿದ್ದು ಬೇರೆ ಸ್ಟಾರ್ ನಟಿ, ಅದಕ್ಕೂ ಮೊದಲು ಇನ್ನೊಬ್ಬರು!

ಇದೀಗ, ತಮ್ಮ ಹುಟ್ಟುಹಬ್ಬದ ಸಡಗರದಲ್ಲಿರುವ ನಟಿ ವನಿತಾ ವಾಸು ಅವರಿಗೆ ಜೀ ಕನ್ನಡ ತನ್ನ ಆಫೀಸಿಯಲ್ ಪೇಜ್‌ನಲ್ಲಿ ಬರ್ತ್‌ಡೇ ಶುಭಾಶಯ ಕೋರಿದೆ. ಅಂದಹಾಗೆ, ನಟಿ ವನಿತಾ ವಾಸು ಸದ್ಯ ಜೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರ ಪಾತ್ರವನ್ನು ಮೆಚ್ಚಿರುವ ಬಹಳಷ್ಟು ವೀಕ್ಷಕರು ಶಕುಂತಲಾ ಫ್ಯಾನ್ಸ್ ಆಗಿಬಿಟ್ಟಿದ್ದಾರೆ. ವನಿತಾ ವಾಸು ಅವರಿಗೆ ಈಗ ಸಿನಿಮಾದಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲೂ ಫ್ಯಾನ್ಸ್‌ಗಳು ಸೃಷ್ಟಿಯಾಗಿಬಿಟ್ಟಿದ್ದಾರೆ.

Follow Us:
Download App:
  • android
  • ios