ಇಂದು ರೆಬೆಲ್‌ ಸ್ಟಾರ್ ಅಂಬರೀಶ್ ಅವರ ಹುಟ್ಟು ಹಬ್ಬದ ಸಂಭ್ರಮ. ಪ್ರತಿ ವರ್ಷ ಮೇ 29 ಬಂದರೆ ಕನ್ವರ್‌ಲಾಲ್ ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ. ಈ ಬಾರಿ ಹುಟ್ಟುಹಬ್ಬಕ್ಕೆ ಕೊರೋನಾ ಸಂಕಷ್ಟ ಎದುರಾಗಿದೆ. ಹೀಗಾಗಿ ಇಂದು (ಮೇ.29) ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಅವರ ಸಮಾಧಿಗೆ ಪೂಜೆ ಮಾಡುವುದು ಕಷ್ಟ. ಆದರೆ ಸಾಮಾಜಿಕ ಜಾಲತಾಣದಲ್ಲಿ 68ನೇ ಹುಟ್ಟುಹಬ್ಬ ಸಂಭ್ರಮಾಚರಣೆ ನಡೆಯಲಿದೆ.

ರಾಕೆಟ್‌ ಲಾಂಚರ್ ಹಿಡಿದ ಸುಮಲತಾ ಅಂಬರೀಶ್; ಪುತ್ರ ಅಭಿಷೇಕ್ ಕನಸು ತುಂಬಾ ಫನ್ನಿ!

ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರು ‘ಅಂಬರೀಶ್ ಇದ್ದಿದ್ದರೆ ಅವರಿಗೆ ಇಂದಿಗೆ 68 ವರ್ಷ ತುಂಬುತ್ತಿತ್ತು. ಆದರೆ, ಅವರನ್ನು ಅಮರರನ್ನಾಗಿಸಲು ವಿಧಿ ನಿರ್ಧಾರ ಮಾಡಿತ್ತು. ಈ ವಿಶ್ವದಷ್ಟೇ ವಿಶಾಲ ಹೃದಯವನ್ನು ಹೊಂದಿದ್ದ ಮನುಷ್ಯ ಅಂಬರೀಶ್. ನನ್ನ ಜೀವನದಲ್ಲಿ ಕೆಲವು ಹೆಜ್ಜೆ ಅವರ ಜತೆಗೂಡಿದ್ದಕ್ಕೆ ನಾನು ಸದಾ ಹೆಮ್ಮೆ ಪಡುತ್ತೇನೆ,’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದು ಅಂಬರೀಶ್ ಅವರನ್ನು ನೆನಪಿಸಿಕೊಂಡಿದ್ದಾರೆ.

'ಹ್ಯಾಪಿ ಬರ್ತಡೇ ಲೆಜೆಂಡ್. ನಾನು ಜೀವನದಲ್ಲಿ ಈಗ ಹೇಗಿದ್ದೀನಿ, ಮುಂದೆ ಹೇಗಿರುವೆ ಅದೆಲ್ಲವೂ ನಿಮ್ಮ ಆಶೀರ್ವಾದಿಂದ. ಲವ್ ಯು,' ಎಂದು ಪುತ್ರ ಅಭಿಷೇಕ್ ಅಂಬರೀಶ್ ಬರೆದರೆ, 'ಎಂದಿಗೂ ಮಾಸದ ಅಂಬಿ ಅಪ್ಪಾಜಿಯ ಸವಿನೆನಪು. ಅವರ ಭಾಷಾಭಿಮಾನ, ಖಡಕ್ ಜೀವನ ಶೈಲಿ ಎಲ್ಲರಿಗೂ ಸ್ಫೂರ್ತಿಯಾಗಿರುತ್ತದೆ. ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿ ಬರಲಿ ನಮ್ಮ ನೆಚ್ಚಿನ ಮಂಡ್ಯದ ಗಂಡು,' ಎಂದು ನಟ ದರ್ಶನ್ ಬರೆದುಕೊಂಡಿದ್ದಾರೆ.