ರಾಕೆಟ್‌ ಲಾಂಚರ್ ಹಿಡಿದ ಸುಮಲತಾ ಅಂಬರೀಶ್; ಪುತ್ರ ಅಭಿಷೇಕ್ ಕನಸು ತುಂಬಾ ಫನ್ನಿ!

ನಟ ಅಭಿಷೇಕ್ ಅಂಬರೀಶ್‌ಗೆ ಬಾಲ್ಯದಲ್ಲಿ ಆಗಾಗ ಬೀಳುತ್ತಿದ್ದ ಫನ್ನಿ ಕನಸಿನ ಬಗ್ಗೆ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. 

Kannada actor Abishek Ambareesh share funny childhood dream vcs

'ಬ್ಯಾಡ್‌ ಮ್ಯಾನರ್ಸ್' ಚಿತ್ರದ ಮೂಲಕ ಬ್ಯಾಡ್ ಆಂಡ್ ರೆಬೆಲ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿರುವ ನಟ ಅಭಿಷೇಕ್ ಅಂಬರೀಶ್‌ ಲಾಕ್‌ಡೌನ್‌ ಸಮಯವನ್ನು ಮನೆಯಲ್ಲಿಯೇ ಕಳೆಯುತ್ತಿದ್ದಾರೆ. ಅಭಿಮಾನಿಗಳ ಜೊತೆ ಮಾತನಾಡಲು ಆಗಾಗ 'Ask Me Anything' ಎಂದು ಪೋಸ್ಟ್ ಮಾಡುತ್ತಾರೆ. ಈ ಸಲ ಅಭಿಮಾನಿಗಳು ಕೇಳಿದ ಒಂದೊಂದು ಪ್ರಶ್ನೆಯೂ ಡಿಫರೆಂಟ್ ಆಗಿತ್ತು...

ಕ್ರಿಕೆಟ್ ಆಡುವಾಗ ದರ್ಶನ್‌-ಅಭಿಷೇಕ್‌ ನಡುವೆ ಜಗಳ; ವಿಡಿಯೋ ವೈರಲ್! 

'ಈ ವರೆಗೂ ನಿಮಗೆ ಬಿದ್ದ ವಿಚಿತ್ರ ಕನಸು ಯಾವುದು' ಎಂದು ಒಬ್ಬ ಅಭಿಮಾನಿ ಪ್ರಶ್ನೆ ಮಾಡಿದ್ದಾನೆ. 'ಜುರಾಸಿಕ್ ಪಾರ್ಕ್‌ನಿಂದ ಡೈನೋಸಾರ್ ಬಂದು ನಮ್ಮ ಮನೆಯನ್ನು ಅಟ್ಯಾಕ್ ಮಾಡಿತ್ತು.  ನನ್ನ ತಾಯಿ ರಾಕೆಟ್ ಲಾಂಚರ್ ಬಳಸಿ ಅದನ್ನು ಶೂಟ್ ಮಾಡಿದ್ದರು. ನನ್ನ ಬಾಲ್ಯದಲ್ಲಿ ಈ ಕನಸು ನನಗೆ ಪದೇ ಪದೇ ಬೀಳುತ್ತಿತ್ತು. ಸುಮಾ ದಿ ಟರ್ಮಿನೇಟರ್' ಎಂದು ಅಭಿಷೇಕ್ ಉತ್ತರ ನೀಡಿದ್ದರು. 

Kannada actor Abishek Ambareesh share funny childhood dream vcs

'ನಿಮಗೆ ದೇವರ ನಂಬಿಕೆ ಇದೆಯೇ?' ಎಂದು ಮತ್ತೊಬ್ಬರು ಕೇಳಿದ ಪ್ರಶ್ನೆಗೆ 'ಹೌದು ಇವತ್ತಿನ ಡಾಕ್ಟರ್‌ಗಳು ತಮ್ಮ ಜೀವ ಪಣಕ್ಕಿಟ್ಟು ಮಾಡುತ್ತಿರುವ ಕೆಲಸ ನೋಡಿದರೆ ದೇವರಿಲ್ಲ ಎಂದು ಹೇಗೆ ಹೇಳಲಿ?' ಎಂದಿದ್ದಾರೆ ಅಭಿಷೇಕ್. ನಟಿಯರ ವಯಸ್ಸು ಕೇಳುವುದು ಸಾಮಾನ್ಯ ಆದರೆ ಇಲ್ಲಿ ಅಭಿಷೇಕ್ ವಯಸ್ಸು ಕೇಳಿದ್ದಾರೆ. 'ನನಗೆ 28 ವರ್ಷ ಆದರೂ ನನ್ನ ಮನಸ್ಸಿನಲ್ಲಿ ನಾನು 14 ವರ್ಷ ಹುಡುಗ' ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios