PRK ಮೂರು ಹೊಸ ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ; ಅಪ್ಪು 5 ಸಿನಿಮಾಗಳು ಉಚಿತ ಪ್ರಸಾರ!
ಸಿಹಿ ಸುದ್ದಿ ಹಂಚಿಕೊಂಡ ಅಶ್ವಿನಿ ಪುನೀತ್ ರಾಜ್‌ಕುಮಾರ್. ಅಪ್ಪುವಿಗೆ ವಿಶೇಷ ಗೌರವ ಸಲ್ಲಿಸುತ್ತಿರುವ ಅಮೇಜಾನ್ ಪ್ರೈಮ್...
ಕನ್ನಡ ಚಿತ್ರರಂಗಕ್ಕೆ (Sandalwood) ಹೊಸ ಕಲಾವಿದರು, ಹೊಸ ತಂಡ, ಹೊಸ ನಿರ್ದೆಶಕರನ್ನು ಬರ ಮಾಡಿಕೊಳ್ಳಲು ಸದಾ ಸಿದ್ಧವಿರುದ ಸಂಸ್ಥೆ ಅಂದ್ರೆ ಪಿಆರ್‌ಕೆ (PRK) ಪ್ರೊಡಕ್ಷನ್ಸ್. ವಿಭಿನ್ನ ಕಥೆ ಆಯ್ಕೆ ಮಾಡಿಕೊಂಡು ಸಿನಿ ರಸಿಕರು ಮನೋರಂಜಿಸಬೇಕು ಎನ್ನುವ ಅಪ್ಪು ಉದ್ದೇಶಕ್ಕೊಂದು ಸಲಾಂ. ಪುನೀತ್ ರಾಜ್‌ಕುಮಾರ್ (Puneeth Rajkumar) ಪತ್ನಿ ಅಶ್ವಿನಿ ನಡೆಸಿಕೊಂಡು ಬರುತ್ತಿರುವ ಪಿಆರ್‌ಕೆ ಸಂಸ್ಥೆಯಿಂದ ಅಭಿಮಾನಿಗಳಿಗೆ ಇಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಅಪ್ಪು ಪಿಆರ್‌ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮ್ಯಾನ್ ಆಫ್ ದಿ ಮ್ಯಾಚ್ (Man of the match), ಒನ್ ಕಟ್ ಟು ಕಟ್ ಮತ್ತು ಫ್ಯಾಮಿಲಿ ಪ್ಯಾಕ್ (Family Pack) ಸಿನಿಮಾಗಳು ಎಕ್ಸಕ್ಲೂಸಿವ್ ಆಗಿ ಅಮೇಜಾನ್ ಪ್ರೈಮ್‌ನಲ್ಲಿ (Amazon Prime) ಬಿಡುಗಡೆ ಮಾಡಲಾಗುತ್ತಿದೆ. ಶೀಘ್ರವೇ ದಿನಾಂಕ ಅನೌನ್ಸ್ ಮಾಡಲಾಗುತ್ತದೆ. ಕನ್ನಡ ಸಿನಿಮಾ ರಂಗದ ಮೇರು ವ್ಯಕ್ತಿ ಪುನೀತ್‌ಗೆ ವಿನಮ್ರ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ, ಅವರ ಐದು ಸ್ಮರಣೀಯ ಚಲನಚಿತ್ರಗಳನ್ನು ಪ್ರೈಮ್ ವೀಡಿಯೋ ಉಚಿತವಾಗಿ ಒದಗಿಸುತ್ತದೆ. ಕಾನೂನು (Law), ಫ್ರೆಂಚ್ ಬಿರಿಯಾನಿ (French Biryani), ಕವಲುದಾರಿ (Kavaludhari), ಮಾಯಾಬಜಾರ್ (Majabajar) ಮತ್ತು ಯುವರತ್ನ (Yuvarathna), ಫೆಬ್ರವರಿ 1 ರಿಂದ ಒಂದು ತಿಂಗಳವರೆಗೆ ಪ್ರೈಮ್ ಸದಸ್ಯರಲ್ಲದವರಿಗೂ ಉಚಿತವಾಗಿ ವೀಕ್ಷಿಸಲು ಲಭ್ಯವಿರುತ್ತದೆ.
Puneeth Rajkumar: ಪಿಆರ್‌ಕೆ ಬ್ಯಾನರ್‌ನಲ್ಲಿ ಶೈನ್ ಶೆಟ್ಟಿ ಅಭಿನಯದ ಥ್ಯಾಂಕ್ಯೂ ಕಿರುಚಿತ್ರ ರಿಲೀಸ್ಕೇವಲ ಪ್ರೈಮ್ ಸದಸ್ಯರಿಗೆ ಸೀಮಿತವಾಗಿಸದೆ, ಈ ಐದು ಚಲನಚಿತ್ರಗಳನ್ನು ಅಮೆಜಾನ್ ಖಾತೆಯನ್ನು ಹೊಂದಿರುವ ಯಾರಿಗಾದರೂ ವಿಶ್ವಾದ್ಯಂತ ಉಚಿತವಾಗಿ ಸ್ಟ್ರೀಮ್ ಮಾಡಲು ಅವಕಾಶ ನೀಡುವುದು ವಿಶಾಲವಾದ ಪ್ರೇಕ್ಷಕರು ಮತ್ತು ಅಭಿಮಾನಿಗಳು ಸಿನಿಮಾ ದಂತಕಥೆಗೆ ತಮ್ಮ ಪ್ರೀತಿ ಮತ್ತು ಗೌರವವನ್ನು ತೋರಿಸಲು ಒಂದು ಸಾಧಾರಣ ಪ್ರಯತ್ನವಾಗಿದೆ, ಎಂದು ಹೇಳಿದೆ ಅಮೇಜಾನ್ ಕಂಪನಿ.
"ಕಳೆದ ಕೆಲವು ವರ್ಷಗಳಿಂದ, ನಾವು ಪಿಆರ್‌ಕೆ ಪ್ರೊಡಕ್ಷನ್ಸ್ ಜೊತೆಗೆ ಯಶಸ್ವಿ ಸಹಯೋಗವನ್ನು ಹೊಂದಿದ್ದೇವೆ. ಈ ಸಹಯೋಗವು, ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಸೃಜನಶೀಲ ಪ್ರತಿಭೆ ಮತ್ತು ಕಥೆ ಹೇಳುವ ಅವರ ವಿಶಿಷ್ಟ ದೃಷ್ಟಿಗೆ ನಮ್ರ ಗೌರವವನ್ನು ಸಲ್ಲಿಸುವ ಪ್ರಯತ್ನವಾಗಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ ಮತ್ತು ಈ ಚಲನಚಿತ್ರಗಳು ಭಾರತ ಮತ್ತು ಅದರಾಚೆಗಿನ ಅವರ ಅಭಿಮಾನಿಗಳಿಗೆ ಅದ್ಭುತ ಮನರಂಜನೆಯನ್ನು ನೀಡುತ್ತವೆ ಎಂದು ನಮಗೆ ಖಚಿತವಾಗಿದೆ. ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪ್ರೀತಿಯ ನೆನಪಿಗಾಗಿ ಈ ಸಹಯೋಗದ ಮೂಲಕ ಕೆಲವು ಅತ್ಯುತ್ತಮ ಕಥೆಗಳನ್ನು ಪ್ರಸ್ತುತಪಡಿಸಲು ನಾವು ಸಂತೋಷಪಡುತ್ತೇವೆ. ಪ್ರೈಮ್ ವೀಡಿಯೋದಲ್ಲಿ, ದೇಶೀಯ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಲು ನಾವು ಯಾವಾಗಲೂ ಪ್ರಯತ್ನಿಸುತ್ತಿದ್ದೇವೆ,' ಎಂದು ಅಮೇಜಾನ್ ಪ್ರೈಮ್ ಮುಖ್ಯಸ್ಥ ಮನೀಶ್ ಮೆಂಘಾನಿ ಮಾತನಾಡಿದ್ದಾರೆ.
Ashwini Puneeth Rajkumar: ಅಪ್ಪು ಪಡೆದುಕೊಂಡಿದ್ದ ಅಡ್ವಾನ್ಸ್ ಹಣವನ್ನು ಹಿಂದಿರುಗಿಸಿದ ಪತ್ನಿ!ಅಶ್ವಿನಿ ಮಾತು:
'ಪುನೀತ್ ರಾಜ್‌ಕುಮಾರ್ ಅವರ ವಿಭಿನ್ನ ದೃಷ್ಟಿಕೋನವು ಹಲವಾರು ವರ್ಷಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿತು, ಅವರಿಗೆ ಅರ್ಹವಾದ ಅಭಿಮಾನಿಗಳನ್ನು ಮತ್ತು ಗೌರವವನ್ನು ಇದು ಗಳಿಸಿತು. ಆ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಇದು ನಮ್ಮ ಪ್ರಯತ್ನ. ಪ್ರೈಮ್ ವೀಡಿಯೋ ಜೊತೆಗೆ ನಮ್ಮ ಯಶಸ್ವಿ ಒಡನಾಟ ಮತ್ತು ನಮ್ಮ ಚಲನಚಿತ್ರಗಳನ್ನು ಪ್ರಪಂಚದಾದ್ಯಂತದ ವೀಕ್ಷಕರಿಗೆ ಕೊಂಡೊಯ್ಯುವುದಕ್ಕೆ ನಮಗೆ ಹೆಮ್ಮೆ,' ಎಂದು ಅಶ್ವಿನಿ ಪುನೀತ್ ಹೇಳಿದ್ದಾರೆ.