ಶಿವಣ್ಣ ವೇದ ಸಿನಿಮಾದಲ್ಲಿ ಅಭಿನಯಿಸಿರುವ ಅದಿತಿ ಸಾಗರ್. ತಂಡ ಕೊಟ್ಟ ಪ್ರೀತಿ ತಾಯಿ ಫುಲ್ ಖುಷ್.... 

ಗಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅದಿತಿ ಸಾಗರ್ ಮೊದಲ ಬಾರಿಗೆ ಪ್ರಮುಖ ಪಾತ್ರದ ಮೂಲಕ ನಟನೆಗೆ ವೇದ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದ ಹೆಸರಾಂತ ನಟ ಅರುಣ್ ಸಾಗರ್ ಅವರ ಪುತ್ರಿ ಅದಿತಿ ನಟನೆಗೆ ವೀಕ್ಷಕರು ಫುಲ್ ಖುಷ್ ಆಗಿದ್ದಾರೆ. ಮೈ ಜುಮ್ಮ್ ಅನಿಸುವ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಸಿನಿ ರಸಿಕರು ಕಾಮೆಂಟ್ ಮಾಡುತ್ತಿದ್ದಾರೆ. 

ಸಿನಿಮಾ ರಿಲೀಸ್‌ಗೂ ಎರಡು ದಿನಗಳ ಮುನ್ನ ಅದಿತಿ ಸಾಗರ್ ತೆಲೆ ಸುತ್ತಿ ಬಿದ್ದು ಗದ್ದಕ್ಕೆ ಪೆಟ್ಟು ಮಾಡಿಕೊಂಡಿದ್ದರು. ತಕ್ಷಣವೇ ಆಪರೇಷನ್‌ ಮಾಡಿ ಚಿಕಿತ್ಸೆ ನೀಡಲಾಗಿತ್ತು ಆದರೂ ಚಲ ಬಿಡದ ಅದಿತಿ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ವೇದ ಸಿನಿಮಾ ಬಿಡುಗಡೆ ಹಿಂದಿನ ದಿನ ಸ್ಟಿಚ್‌ಗಳನ್ನು ಬಿಚ್ಚಿಸಿಕೊಂಡು ಫಸ್ಟ್‌ ಡೇ ರಿಲೀಸ್‌ನಲ್ಲಿ ಭಾಗಿಯಾಗಿದ್ದರು.

'ವೇದ ಚಿತ್ರದಲ್ಲಿ ನಾನು ನಟಿಸಿದ್ದರು ಇವತ್ತೇ ಸಿನಿಮಾ ನೋಡಿದ್ದು. ತುಂಬಾ ಖುಷಿಯಾಗುತ್ತಿದೆ, ಸಿನಿಮಾ ನೋಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು ನಮಗೆ ಹೀಗೆ ಸಪೋರ್ಟ್ ಮಾಡಿ. ಗಾನವಿ ಮತ್ತು ಶ್ವೇತಾ ಅವರು ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಶಿವರಾಜ್‌ಕುಮಾರ್ ಅವರು ಮ್ಯಾಸಿವ್ ಆಗಿದ್ದಾರೆ ನಾನು ಅವರ ಪಕ್ಕಾ ಅಭಿಮಾನಿ ಅವರ ಸಿನಿಮಾವನ್ನು ತುಂಬಾ ಇಷ್ಟ ಪಟ್ಟಿರುವೆ. ಸಿನಿಮಾ ರಿಲೀಸ್ ಸಮಯದಲ್ಲಿ ತಂದೆ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ. ಬಿದ್ದು ಆಪರೇಷನ್ ಆಗಿತ್ತು ನಿನ್ನೆ ಸ್ಟಿಚ್‌ಗಳನ್ನು ಬಿಚ್ಚಿಸಿದ್ದಾರೆ ಈಗ ನಾನು ಆರಾಮ್ ಆಗಿರುವೆ' ಎಂದು ಚಿತ್ರಮಂದಿರದಲ್ಲಿ ಅದಿತಿ ಸಾಗರ್ ಮಾತನಾಡಿದ್ದಾರೆ.

KGF 2: ಅರುಣ್ ಸಾಗರ್ ಮಗಳು ಅದಿತಿ Monster Rap Song, ರಾಕಿಂಗ್ ಗರ್ಲ್ ಅಂದ್ರು ಫ್ಯಾನ್ಸ್!

'ಸಿನಿಮಾ ತುಂಬಾ ಚೆನ್ನಾಗಿದೆ ಅದಿತಿ ನಟನೆ ಇಷ್ಟವಾಯ್ತು ಒಳ್ಳೆ ಮೆಸೇಜ್ ಕೊಟ್ಟಿದ್ದಾರೆ ಹೆಣ್ಣು ಮಕ್ಕಳಿಗೆ ಬೇಕಿರುವ ಸಿನಿಮಾ ಇದು. ನನ್ನ ಮಗಳನ್ನು ಕರೆದು ನಂಬಿಕೆ ಇಟ್ಟು ಅವಕಾಶ ಕೊಟ್ಟಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸುತ್ತೀನಿ. ಮೆಸೇಜ್ ಇಷ್ಟ ಆಯ್ತು ಹೆಣ್ಣು ಮಕ್ಕಳು ನೋ ಎಂದು ಹೇಳಿದಾಗ ಅದರ ಅರ್ಥ ನೋ ಎಂದು ಮಹಿಳೆಯರಿಗೆ ಗೌರವ ಕೊಡಬೇಕಿರುವುದು ಎಲ್ಲರ ಕರ್ತವ್ಯ. ಸಿನಿಮಾ ನೋಡುವ ಸಮಯದಲ್ಲಿ ಅವರ ಅಪ್ಪನ ಮಿಸ್ ಮಾಡಿಕೊಳ್ಳುತ್ತಿದ್ದೀವಿ. ಅರುಣ್ ಸಾಗರ್ ಖುಷಿ ಪಡುತ್ತಿದ್ದರು ಪದಗಳಲ್ಲಿ ವರ್ಣಿಸುತ್ತಿಲ್ಲ ಏಕೆಂದರೆ ಆಕೆ ಮೊದಲ ಸಲ ಅಭಿನಯಿಸುತ್ತಿರುವುದು. ಶಿವಣ್ಣ ಅವರು ಅದಿತಿನ ಮಗಳ ರೀತಿ ಪ್ರೀತಿ ಮಾಡುತ್ತಾರೆ ಅದು ನಮ್ಮ ಆಶೀರ್ವಾದ. ಸಿನಿಮಾ ಸೆಟ್‌ನಲ್ಲಿ ಪ್ರತಿಯೊಬ್ಬರು ಅದಿತಿನ ಮಗು ರೀತಿ ನೋಡಿಕೊಂಡಿದ್ದಾರೆ' ಎಂದು ಅದಿತಿ ತಾಯಿ ಹೇಳಿದ್ದಾರೆ.

ನಿರ್ಮಾಪಕಿ ಗೀತಾ ಮಾತು:

'ಫಸ್ಟ್‌ ಡೇ ಫಸ್ಟ್‌ ಶೋಗೆ ಒಳ್ಳೆ ರಿಪೋರ್ಟ್‌ಗಳು ಬಂದಿದೆ. ಶಿವರಾಜ್‌ಕುಮಾರ್ ಜೊತೆ ಅದಿತಿ ಸಾಗರ್ ಮತ್ತು ಗಾನವಿ ಇಬ್ಬರಿಗೂ ತುಂಬಾನೇ ಒಳ್ಳೆಯ ಹೆಸರು ಬಂದಿದೆ. ಆ ಇಬ್ಬರು ಹೆಣ್ಣು ಮಕ್ಕಳಿಗೆ ಹೆಸರು ಬಂದಿರುವುದು ತುಂಬಾನೇ ಇಷ್ಟ ಏಕೆಂದರೆ ಶ್ರಮಪಟ್ಟು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.ಶಿವರಾಜ್‌ಕುಮಾರ್ ಅವರ ಸಮಕ್ಕೆ ನಿಂತುಕೊಂಡು ಆಕ್ಟ್‌ ಮಾಡಬೇಕು ಅಂದ್ರೆ ಸ್ವಲ್ಪ ಕಷ್ಟನೇ ಆದರೂ ಅವರು ತುಂಬಾ ಚೆನ್ನಾಗಿ ಆಕ್ಟ್‌ ಮಾಡಿದ್ದಾರೆ. ನಾನು ಯಾವತ್ತೂ ಸಿನಿಮಾ ರಿಲೀಸ್‌ಗೆ ಭಯ ಪಟ್ಟಿರಲಿಲ್ಲ ಹೆದರಿಕೊಂಡಿರಲಿಲ್ಲ ಟೆನ್ಶನ್‌ ತೆಗೆದುಕೊಂಡಿರಲಿಲ್ಲ ನನಗೆ ಗೊತ್ತಿತ್ತು ಇದರಲ್ಲಿ ಒಳ್ಳೆ ವಿಮರ್ಶೆ ಬಂದೇ ಬರುತ್ತದೆ ಎಂದು. ಮಕ್ಕಳು ಮತ್ತು ಶಿವರಾಜ್‌ಕುಮಾರ್ ಅವರಿಗೆ ಒಳ್ಳೆಯ ಆಗುತ್ತದೆ ಎಂದು ನನಗೆ ಗೊತ್ತಿತ್ತು ನನ್ನ ಮನಸ್ಸಿಗೆ ಅನಿಸುತ್ತಿತ್ತು ಹೀಗಾಗಿ ಇವತ್ತು ತುಂಬಾ ಖುಷಿಯಾಗಿರುವೆ' ಎಂದು ಮಾತನಾಡಿದ್ದಾರೆ.