KGF 2: ಅರುಣ್ ಸಾಗರ್ ಮಗಳು ಅದಿತಿ Monster Rap Song, ರಾಕಿಂಗ್ ಗರ್ಲ್ ಅಂದ್ರು ಫ್ಯಾನ್ಸ್!
KGF 2 Latest News: ಅರುಣ್ ಸಾಗರ್ ಮಗಳು ಅದಿತಿ ಸಾಗರ್ ಬಗ್ಗೆ ಒಂದಿಷ್ಟು ಜನರಿಗೆ ಗೊತ್ತೇ ಇದೆ. ಅವರೀಗ KGF 2 ಗೆ ಲಿರಿಕ್ಸ್ ಬರೆದು Rap ಮಾಡಿದ್ದಾರೆ. ದಿಸ್ ಈಸ್ ಮೈಂಡ್ ಬ್ಲೋಯಿಂಗ್ ಅಂದಿದ್ದಾರೆ ಕೆಜಿಎಫ್ 2 ಫ್ಯಾನ್ಸ್. ನಿನ್ನೆಯಷ್ಟೇ ಬಿಡುಗಡೆಯಾದ rap ಸಾಂಗ್ ನಾಲ್ಕೂವರೆ ಮಿಲಿಯನ್ ವ್ಯೂಸ್ ಕಂಡಿದೆ.
ಅದಿತಿ ಸಾಗರ್ (Adithi Sagar) ಇನ್ನೂ ಹದಿನೇಳು ವರ್ಷದ ಚಿಕ್ಕ ಹುಡುಗಿ. ಆದರೆ ಬ್ರಹ್ಮಾಂಡದಷ್ಟು ಕಾನ್ಫಿಡೆನ್ಸ್ ಈಕೆಯಲ್ಲಿದೆ. ಜಗತ್ತನ್ನೇ ಗೆದ್ದು ಬರೋ ಹುಮ್ಮಸ್ಸಿದೆ. ಇನ್‌ಸ್ಟಾದಲ್ಲಿ (Insta) ಸದಾ ಒಂದಲ್ಲ ಒಂದು ಫೋಟೋ ಪೋಸ್ಟ್ ಮಾಡುತ್ತಿರುವ ಈ ಪೋರಿ ಒಂದು ಆಂಗಲ್‌ನಲ್ಲಿ ಇನ್ನೂ ಪುಟ್ಟ ಬಾಲಕಿಯ ಹಾಗೆ ಕಾಣ್ತಾಳೆ, ಇನ್ನೊಂದು ಕಡೆ ಹರೆಯದ ಕ್ರೇಜ್ ಎದ್ದು ಕಾಣುತ್ತೆ. ಈ ಎರಡರ ಒಟ್ಟು ಮೊತ್ತದ ಹಾಗಿರೋ ಪುಟ್ಟ ಬಾಲೆ ಇದೀಗ ಕೆಜಿಎಫ್ 2 (KGF 2) ಗೆ ರ್ಯಾಪ್ (Rap) ಮಾಡಿದ್ದಾಳೆ. ಅದಕ್ಕಾಗಿ ತಾನೇ ಸ್ವತಃ ಮಾನ್‌ಸ್ಟರ್ (Monster) ಅನ್ನೋ ಹಾಡು ಬರೆದಿದ್ದಾಳೆ. ಈಕೆಯ ಈ ಎಕ್ಸ್‌ಟ್ರಾ ಆರ್ಡಿನರಿ ಟ್ಯಾಲೆಂಟ್‌ಗೆ ಯಶ್ (Yah) ಸೇರಿದಂತೆ ಕೆಜಿಎಫ್ ಟೀಮ್ (KGF team) ಶಾಭಾಶ್ ಅಂದಿದೆ. ಈ ಹಾಡೀಗ ಹೊಂಬಾಳೆ ಯೂಟ್ಯೂಬ್ ಚಾನೆಲ್‌ನಲ್ಲಿ (Hombale youtube channel) ಬಿಡುಗಡೆಯಾಗಿದೆ ಅಷ್ಟೇ ಅಲ್ಲ ಒಂದು ದಿನಕ್ಕೂ ಮೊದಲೇ ನಾಲ್ಕೂವರೆ ಮಿಲಿಯನ್ ವ್ಯೂಸ್ (4.5 Million views) ಕಂಡಿದೆ. ಈ ಮೈಂಡ್ ಬ್ಲೋಯಿಂಗ್ ರ್ಯಾಪ್ ನೋಡಿದ ಜನ ಅದಿತಿಗೆ 'ರಾಕಿಂಗ್ ಗರ್ಲ್' (Rocking Girl) ಅಂತಿದ್ದಾರೆ. ರವಿ ಬಸ್ರೂರು (Ravi Basruru) ಮ್ಯೂಸಿಕ್, ಎ ಹರ್ಷ (A Harsha) ಕೊರಿಯೋಗ್ರಫಿ, ಭುವನ್ (Bhuvan) ಅವರ ಸಿನಿಮಾಟೋಗ್ರಫಿ ಈ ಹಾಡಿಗಿದೆ. ಕೆಲವೇ ದಿನಗಳ ಹಿಂದೆ ರಿಲೀಸ್ ಆಗಿರೋ ಪುನೀತ್ ರಾಜ್‌ಕುಮಾರ್ 'ಜೇಮ್ಸ್' (James) ಸಿನಿಮಾದಲ್ಲೂ ಈಕೆ ಒಂದು ಟ್ರ್ಯಾಕ್ ಹಾಡಿದ್ದಾರೆ.
ಅದಿತಿ ಸಾಗರ್ ಅಪ್ಪ ಅರುಣ್ ಸಾಗರ್ (Arun Sagar) ಅನ್ನೋ ಕಲಾವಿದ ನೀನಾಸಂನಿಂದ ಟ್ರೈನಿಂಗ್ ಪಡೆದು ರಂಗಾಯಣದಲ್ಲೂ ನಾಟಕಗಳಲ್ಲಿ ಆಕ್ಟ್ ಮಾಡಿ ಬೆಸ್ಟ್ ಥಿಯೇಟರ್ ಆರ್ಟಿಸ್ಟ್ ಅನಿಸಿಕೊಂಡವರು. ಇವರ ಪತ್ನಿ ಮೀರಾ ಕಲಾ ಜಗತ್ತಿನಲ್ಲಿ ಚಿರಪರಿಚಿತ ಹೆಸರು. ಗಮನ ಸೆಳೆಯೋವಂಥಾ ಪೇಂಟಿಂಗ್‌ಗಳ ಮೂಲಕ ಪ್ರಸಿದ್ಧರಾದ ಕಲಾವಿದೆ. ಇವರ ಮಗ ಸೂರ್ಯ ಸಾಗರ್ (Surya Sagar) ಮುವಾಯ್ ಥಾಯ್ ಚಾಂಪಿಯನ್. ಮಗಳು ಅದಿತಿ ಸಾಗರ್ ವಿಶ್ವಮಟ್ಟದಲ್ಲಿ ಹೆಸರು ಮಾಡಲು ಹೊರಟಿರೋ ಸಿಂಗರ್. ಈ ಹುಡುಗಿ ಎಂಥಾ ಪ್ರತಿಭೆ ಅಂದರೆ ಇನ್ನೂ ಹದಿನಾಲ್ಕು ವರ್ಷ ಪೂರ್ತಿ ಆಗಿರಲಿಲ್ಲ, ಆಗಲೇ ರ್ಯಾಂಬೋ 2 (Rambo 2) ಸಿನಿಮಾಕ್ಕೆ ಹಿನ್ನೆಲೆ ಗಾಯನ ಮಾಡಿದ್ರು. ಧಮ್ಮಾರೊ ಧಮ್ ಅನ್ನೋ ಸಾಂಗ್ ಸಖತ್ ಹೈಪ್ ಕ್ರಿಯೇಟ್ ಮಾಡಿತು. ಈ ಹಾಡಿಗೆ ಆಗಲೇ ಮೂವತ್ತೆಂಟು ಲಕ್ಷ ಅಂದರೆ 3.8 ಮಿಲಿಯನ್ ವ್ಯೂಸ್ ಸಿಕ್ಕಿದೆ. ಡ್ಯಾನಿಶ್ ಶೇಠ್ (Danish sait)ಅವರ ಫ್ರೆಂಚ್ ಬಿರಿಯಾನಿ (French biriyani) ಸಿನಿಮಾಕ್ಕೂ ಅದಿತಿ ಹಾಡಿದ್ದಾರೆ. ಅಷ್ಟೇ ಅಲ್ಲ, ಶಿವಣ್ಣ (Shivar Rajkumar)ಅವರ 125ನೇ ಸಿನಿಮಾ 'ವೇದ' (Veda) ದಲ್ಲೂ ನಟಿಸುತ್ತಿದ್ದಾರೆ.
ಮೇ 27ಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ ಕೆಜಿಎಫ್ 2
ಕೊಂಚ ತರಲೆ, ಸಿಕ್ಕಾಪಟ್ಟೆ ಬುದ್ದಿವಂತೆ ಆಗಿರೋ ಈಕೆ ಗಾಯನ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದು ಅಪ್ಪನ ಇನ್‌ಫ್ಲುಯೆನ್ಸ್ ನಿಂದ ಅಲ್ವೇ ಅಲ್ಲ. ಅದರ ಹಿಂದೆ ಒಂದು ಇಂಟರೆಸ್ಟಿಂಗ್ ವಿಷಯ ಇದೆ. ಅರುಣ್ ಸಾಗರ್ ಅವರ ಗುರುಗಳು ಹಿರಿಯ ರಂಗಕರ್ಮಿ ಬಿ ವಿ ಕಾರಂತ. ಈ ಕಾರಂತಜ್ಜನ ನೆನಪಿಗೆ ಅದಿತಿ, 'ಸತ್ತವರ ನೆರಳು' ನಾಟಕದ 'ಆಚಾರ ಇಲ್ಲದ ನಾಲಗೆ ನಿನ್ನ ನೀಚ ಬುದ್ದಿಯ ಬಿಡು ನಾಲಗೆ' ಹಾಡನ್ನು ಹಾಡಿ ಯೂಟ್ಯೂಬ್‌ನಲ್ಲಿ ಹಾಕಿದರು. ಅದಿತಿ ವಾಯ್ಸ್ ಮೊತ್ತಮೊದಲ ಸಲ ಹೊರ ಜಗತ್ತಿಗೆ ಪರಿಚಯವಾದದ್ದು ಹೀಗೆ. ಇದನ್ನು ಕೇಳಿದ ನಿರ್ದೇಶಕ ತರುಣ್ ಸುಧೀರ್ (Tharun Sudhir) ಅರ್ಜುನ್ ಜನ್ಯಾ(Arjun Jany) ಅವರಿಗೆ ರೆಫರ್ ಮಾಡಿದ್ರು. ಅರ್ಜುನ್ ಜನ್ಯಾ Rambo 2 ಚಿತ್ರಕ್ಕೆ ಬಳಸಿಕೊಂಡರು. ಅದಿತಿ ಸ್ಯಾಂಡಲ್‌ವುಡ್ ಗೆ ಎಂಟ್ರಿ ಕೊಟ್ಟಿದ್ದು ಹೀಗೆ.
KGF 2: ಯಶ್ ಗಿಂತ 9 ವರ್ಷ ಚಿಕ್ಕವರು ಅಮ್ಮನ ಪಾತ್ರ ಮಾಡಿದ ಅರ್ಚನಾ ಜೋಯಿಸ್! ಹೀರೋಯಿನ್‌ಗಿಂತಲೂ ಚಿಕ್ಕವಳೀಕೆ!
'ನಂಗೆ ಹುಟ್ಟಿದಾಗಿಂದ ರಿಸ್ಟ್ರಿಕ್ಷನ್ ಇಲ್ಲ. ಹಾಡು ನನ್ನ ಲೈಫು. ನನ್ನದೇ ಒಂದು ಭಾಗ. ನಾನು ಫೋಟೋಗ್ರಫಿ, ನಾಟಕ ಮಾಡ್ತೀನಿ. ಡ್ರಾಯಿಂಗ್ ಮಾಡ್ತೀನಿ' ಅಂತ ತಮ್ಮ ಬಹುಮುಖ ಪ್ರತಿಭೆಯನ್ನು ಬಿಚ್ಚಿಡುತ್ತಾರೆ. ಇದೀಗ ಇವರ ಮಾನ್‌ಸ್ಟರ್ ಹಾಡು ವೈರಲ್ ಆಗಿದೆ. ಸಂಗೀತ ನಿರ್ದೇಶಕ ವಾಸುಕಿ ವೈಭವ್, ಪನ್ನಗಾಭರಣ, ಸಂಯುಕ್ತ ಹೊರನಾಡು, ಪುಷ್ಕರ್ ಮೊದಲಾದವರು ಈ ಹಾಡನ್ನು ಕೇಳಿ ಮೈಂಡ್ ಬ್ಲೋಯಿಂಗ್ ಎಂದು ಬೆಂಕಿ ಇಮೇಜ್ ಪೋಸ್ಟ್ ಮಾಡಿದ್ದಾರೆ. ಗೂಸ್ ಬಂಬ್ಸ್ ಬರ್ತಿದೆ, ಇದು ಕ್ರೇಜಿಯೆಸ್ಟ್ ಸಾಂಗ್, ಈ ಹಾಡು ಥಿಯೇಟರ್ ನಲ್ಲಿ ಯಾಕೆ ರಿಲೀಸ್ ಮಾಡಿಲ್ಲ ಎಂದೆಲ್ಲ ಫ್ಯಾನ್ಸ್ ಕಮೆಂಟ್ ಮಾಡ್ತಿದ್ದಾರೆ. ಈ ರ್ಯಾಪ್ ಮಾಡಿರೋ ಅದಿತಿನ ರಾಕಿಂಗ್ ಗರ್ಲ್ ಅಂದಿರೋದು ಮತ್ತೊಂದು ವಿಶೇಷ. ಈ ಹಾಡಿನ ಅದಿತಿ ಅವರ ರ್ಯಾಪ್ ಅಲ್ಲಿ ಕೆಜಿಎಫ್ ಫ್ಯಾನ್ಸ್ ಸೆಲೆಬ್ರೇಶನ್, ಕೆಜಿಎಫ್ ಚಿತ್ರದ ತುಣುಕು, ಡೈಲಾಗ್‌ಗಳೂ ಸೇರಿದೆ. ಇದೊಂದು ಸಖತ್ತಾಗಿರುವ ಮಸಾಲಾ ಸಾಂಗ್, ಈ ಹಾಡು ಕೊಟ್ಟ ಪುಟ್ಟ ಹುಡುಗಿಗೆ ಥ್ಯಾಂಕ್ಸ್ ಅಂದಿರೋ ಫ್ಯಾನ್ಸ್‌ಗೆ ಅದಿತಿ ಅವರೂ ಕೃತಜ್ಞತೆ ಸಲ್ಲಿಸಿದ್ದಾರೆ.
Gattimela Serial: ಗಟ್ಟಿಮೇಳ ಸೀರಿಯಲ್‌ನಲ್ಲಿ ಕೋರ್ಟ್ ಸೀನ್, ಹೀರೋನೇ ಲಾಯರ್!