Asianet Suvarna News Asianet Suvarna News

ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ 'ಪುಷ್ಪ 2' ಕಪಲ್ ಸಾಂಗ್‌ ಬೊಂಬಾಟ್ ಅಂತಿದಾರೆ!

ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿರುವ ಪುಷ್ಪ 2 ಈ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ ಮೈತ್ರಿ ಮೂವೀ‌ ಮೇಕರ್ಸ್ ದುಬಾರಿ ಬಜೆಟ್ ನಲ್ಲಿ ಚಿತ್ರ ನಿರ್ಮಾಣ ಮಾಡಿದೆ. 

Allu Arjun and Rashmika Mandanna lead Pushpa 2 film second song released srb
Author
First Published May 29, 2024, 7:35 PM IST

ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಪುಷ್ಪ 2 (Pushpa 2) ಅಂಗಳದಿಂದ ಎರಡನೇ ಹಾಡು ಬಿಡುಗಡೆಯಾಗಿದೆ. ದಿ ಕಪಲ್ ಸಾಂಗ್ ಗೆ ಪುಷ್ಪರಾಜ್ ಹಾಗೂ ಶ್ರೀವಲ್ಲಿ ಹೆಜ್ಜೆ ಹಾಕಿದ್ದಾರೆ. ಗಣೇಶ್ ಆಚಾರ್ಯ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡಿಗೆ ದೇವಿಶ್ರೀ ಪ್ರಸಾದ್ ಟ್ಯೂನ್ ಹಾಕಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಬೆಂಗಾಲಿ ಭಾಷೆಯಲ್ಲಿ ಸೆಕೆಂಡ್ ಸಾಂಗ್ ಬಿಡುಗಡೆಯಾಗಿದೆ.

ಕನ್ನಡದ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ಮೆಲೋಡಿ ಕ್ವೀನ್ ಶ್ರೇಯಾ ಘೋಷಾಲ್ ಆರು ಭಾಷೆಯ ಹಾಡಿಗೆ ಧ್ವನಿಯಾಗಿದ್ದಾರೆ. ಪುಷ್ಪ ಸೀಕ್ವೆಲ್ ಟೀಸರ್ ಹಾಗೂ ಟೈಟಲ್ ಟ್ರ್ಯಾಕ್ ಈಗಾಗ್ಲೇ ಭಾರೀ ಸದ್ದು ಮಾಡಿದ್ದು, ಇದೀಗ ರಿಲೀಸ್ ಆಗಿರುವ ಸಾಂಗ್ ಕೂಡ ಸೆನ್ಸೇಷನ್ ಸೃಷ್ಟಿಸುವ ಎಲ್ಲಾ ಲಕ್ಷಣ ಕಾಣುತ್ತಿದೆ. ಅದ್ಧೂರಿ ಸೆಟ್ ನಲ್ಲಿ ರಶ್ಮಿಕಾ ಹಾಗೂ ಅಲ್ಲು ಅರ್ಜುನ್ ಹೆಜ್ಜೆ ಹಾಕಿದ್ದಾರೆ. ಇವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರೀಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ರವಿಚಂದ್ರನ್ 'ರಾಮಾಚಾರಿ'ಗೆ ಡೇಟ್ಸ್ ಕೊಡಲು ಮಾಲಾಶ್ರೀಗೆ ಯಾವ ಸಮಸ್ಯೆಯಿತ್ತು?

'ಪುಷ್ಪ.. ಪುಷ್ಪ..' ಹಾಡು 100 ಮಿಲಿಯನ್ಸ್ ವೀಕ್ಷಣೆ ಕಂಡಿದೆ, ಕಪಲ್ ಸಾಂಗ್ ಕೂಡ ದಾಖಲೆ ಬರೆಯಲಿದೆ ಎಂಬ ನಿರೀಕ್ಷೆ ಚಿತ್ರತಂಡದಲ್ಲಿದೆ. ತೆಲುಗಿನಲ್ಲಿ ‘ಸೂಸೆಕಿ..’ , ಕನ್ನಡದಲ್ಲಿ ‘ನೋಡೋಕ..’ ಎಂದು ಹಾಡು ಶುರುವಾಗುವ ಹಾಡು ಕೇಳುಗರಿಗೆ ಕಿಕ್ ಕೊಡುತ್ತಿದೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿರುವ ಪುಷ್ಪ 2 ಈ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ ಮೈತ್ರಿ ಮೂವೀ‌ ಮೇಕರ್ಸ್ ದುಬಾರಿ ಬಜೆಟ್ ನಲ್ಲಿ ಚಿತ್ರ ನಿರ್ಮಾಣ ಮಾಡಿದೆ.

ಭೂಗತಲೋಕದ ಜತೆ ನಟಿ ನಗ್ಮಾಗೆ ಲಿಂಕ್; ಅಸಲಿಗೆ ಏನಾಗ್ತಿದೆ ಈ ಒಂಟಿ ನಟಿಯ ಕಥೆ?

ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ಜೊತೆಯಾಗಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹದ್ ಫಾಸಿಲ್ , ಡಾಲಿ ಧನಂಜಯ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಬಿಡುಗಡೆ ಆಗಿರುವ ಈ ಹಾಡು ಈಗಾಗಲೇ ಬಹಳಷ್ಟು ಮೆಚ್ಚುಗೆ ಗಳಿಸಿದ್ದು ಸೂಪರ್ ಹಿಟ್ ಸಾಂಗ್ ಪಟ್ಟ ಗಿಟ್ಟಿಸುವ ಹಾದಿಯಲ್ಲಿದೆ.

ಆ್ಯಂಕರ್ ಅನುಶ್ರೀಗೆ ಆ ಗುಟ್ಟು ಹೇಳದ ರಕ್ಷಿತ್ ಶೆಟ್ಟಿ, ಸಾಯಿ ಪಲ್ಲವಿ ಬಗ್ಗೆ ಮೌನವಾಗಿದ್ದೇಕೆ?

Latest Videos
Follow Us:
Download App:
  • android
  • ios